Cinema (ಸಿನಿಮಾ)

ಕೊನೆಯ ಹಂತದ ಚಿತ್ರೀಕರಣದಲ್ಲಿ “ದಾರಿ ಯಾವುದಯ್ಯ ವೈಕುಂಠಕ್ಕೆ”: heggaddesamachar

Spread the love

ದಾರಿ ಯಾವುದಯ್ಯ ವೈಕುಂಠಕ್ಕೆ ಎನ್ನುತ್ತಲೇ ಇತ್ತೀಚೆಗಷ್ಟೇ ಸೆಟ್ಟೇರಿದ್ದ ಸಿನಿಮಾವೊಂದು ತನ್ನ 90 ಪ್ರತಿಶತ ಶೂಟಿಂಗ್ ಮುಗಿಸಿಕೊಂಡು ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಸಿನಿ ಜಗದಲ್ಲಿ‌ ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್ ನೊಂದಿಗೆ,ಶರಣಪ್ಪ ಎಂ. ಕೋಟಗಿ ಅವರ ನಿರ್ಮಾಣದಲ್ಲಿ,‌ ಸಿದ್ದು ಪೂರ್ಣಚಂದ್ರ ಅವರ ನಿರ್ದೇಶನದೊಂದಿಗೆ, ಹಫ್ತಾ ಖ್ಯಾತಿಯ ವರ್ಧನ್ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ತಿಥಿ ಸಿನಿಮಾ ಖ್ಯಾತಿಯ ಪೂಜಾ ಮತ್ತು ಡಿಂಗ ಸಿನಿಮಾದಲ್ಲಿ ನಟನೆ ಮೂಲಕ ಮನಗೆದ್ದಿದ್ದ ಅನುಶಾ ನಾಯಕಿಯರಾಗಿ ಮಿಂಚಿದ್ದಾರೆ.

ಈ ಮೊದಲು ಕೃಷ್ಣ ಗಾರ್ಮೆಂಟ್ಸ್ ಸಿನಿಮಾ ಮಾಡುವಾಗ ಈ ಚಿತ್ರದ ಕಥೆ ಹೊಳೆದಿತ್ತು ಹಾಗಾಗಿ ಶರಣಪ್ಪ ಅವರಿಗೆ ಕಥೆ ಹೇಳಿದಾಗ ಕಥೆ ಇಷ್ಟವಾಗಿ ಒಪ್ಪಿದ್ದರು. ವೈಕುಂಠದ ಬಗೆಗೆ ವಿವಿಧ ರೂಪದಲ್ಲಿ ವಿಭಿನ್ನವಾದ ಕಲ್ಪನೆಯೊಂದು ಅವರವರಿಗೆ ಇರುತ್ತದೆ.

ಅದೇ ರೀತಿ ವೈಕುಂಠವನ್ನು ಕಾಣುವ ಕಲ್ಪನೆ ಹಾಗೂ ಕುತೂಹಲ ಘಟ್ಟವೇ ಈ ಚಿತ್ರದ ಪಾತ್ರಧಾರಿಗಳಿಗೆ ಇರುತ್ತದೆ. ಅದಕ್ಕಾಗಿ ಈ ಚಿತ್ರದ ಶೀರ್ಷಿಕೆ “ದಾರಿ ಯಾವುದಯ್ಯ ವೈಕುಂಟಕ್ಕೆ” ಅನ್ನೋದು ನಿಗದಿ ಮಾಡಲಾಯಿತು ಎನ್ನುವುದು ನಿರ್ದೇಶಕರ ಮಾತು.

ನಾಯಕ ನಟ ವರ್ಧನ್ ಹಫ್ತಾ ಚಿತ್ರದ ನಂತರ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಒಬ್ಬ ಕ್ರಿಮಿನಲ್ ವ್ಯಕ್ತಿ ಭಾವನೆಗಳ ಭಾವನ ಜಗತ್ತಿಗೆ ಒಗ್ಗಿಕೊಳ್ಳುವ ಪಾತ್ರ ಧಾರಿಯ ಬದುಕಿನಲ್ಲಿ ಮುಂದೆ ಏನಾಗುತ್ತಾನೆ ಎಂಬುದನ್ನು ತಿಳಿಸುವ ಚಿತ್ರಕಥೆ ತಿರುಳು ಈ ಚಿತ್ರದಲ್ಲಿದೆ ಎನ್ನುತ್ತಾರೆ ವರ್ಧನ್. ಕನ್ನಡದಲ್ಲಿ ಸುಮಾರು 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನೆಗಟಿವ್ ರೋಲ್ ಗಳ ಮೂಲಕ ಗುರುತಿಸಿಕೊಂಡಿದ್ದ ವರ್ಧನ್ ಅವರು ಹಫ್ತಾ ಸಿನಿಮಾದ ಮೂಲಕ ನಾಯಕ ನಟರಾಗಿ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದರು.

ಹಫ್ತಾ ನಂತರ ತುಂಬಾ ಕಥೆಗಳು ಇವರನ್ನು ಹುಡುಕಿಕೊಂಡು ಬಂದಿದ್ದರೂ, ಯಾವ ಕಥೆಯೂ ಇವರಿಗೆ ಮೆಚ್ಚುಗೆಯಾಗಿರಲಿಲ್ಲವಂತೆ, ಈ ಕಾರಣ ಸುದೀರ್ಘ ಸಮಯದ ಬಳಿಕ ಈಗ ದಾರಿ ಯಾವುದಯ್ಯಾ ವೈಕುಂಠಕ್ಕೆ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದೇನೆ ಎಂದಿದ್ದಾರೆ.

“ಕಥೆ ಎಂದರೆ ನಾಯಕ; ನಾಯಕ ಎಂದರೆ ಕಥೆ” ಎನ್ನುವಂತೆ ಕ್ರಿಮಿನಲ್ ವ್ಯಕ್ತಿಯ ಎಮೋಷನಲ್ ಕಂಟೆಟ್ ಹೊಂದಿರುವ ಚಿತ್ರ ಇದಾಗಿದ್ದು, ಪೋಷಕ ನಟರಾಗಿ ಹೆಸರು ವಾಸಿಯಾದ ಬಲರಾಜ ವಾಡಿ, ರಂಗ ಭೂಮಿ ಕಲಾವಿದೆ ಶೀಬಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ಸ್ಫಂದನಾ, ಪ್ರಶಾಂತ್ ವರ್ಕೂ, ಸಿದ್ಧಾರ್ಥ, ಸುಚಿತ್, ದಯಾ, ಅರುಣ್ ಮೂರ್ತಿ, ಪ್ರಣಯಮೂರ್ತಿ ಸೇರಿದಂತೆ ಬಹುತೇಕ ರಂಗಕರ್ಮಿ ಕಲಾವಿದರು ಇಲ್ಲಿ ಬಣ್ಣ ಹಚ್ಚಿದ್ದಾರೆ.

ವೈರ ಹಾಗೂ ಸೈಕೋ ಶಂಕರ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದ ನಿತಿನ್ ಅವರೇ ಈ ಸಿನಿಮಾ ಛಾಯಾಗ್ರಹಣ ಮಾಡುತ್ತಿದ್ದರೆ, ಸಿದ್ದು ಪೂರ್ಣಚಂದ್ರ ಅವರು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆಯುವ ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ.

ಇದೀಗ ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರ, ತನ್ನ ಚಿತ್ರೀಕರಣ ಬಹತೇಕ ಪೂರ್ಣಗೊಳಿಸಿಕೊಂಡಿದ್ದು, ಕೊನೆಯ ಒಂದು ಶೆಡ್ಯೂಲ್ ಬಿಟ್ಟರೆ ಉಳಿದ ಕೆಲಸ ಎಂಬಂತೆ ಡಬ್ಬಿಂಗ್ ಹಂತದ ಕೆಲಸಗಳನ್ನ ಪೂರ್ಣಗೊಳಿಸಿಕೊಳ್ಳುತ್ತಿದೆ.
ವಿಶೇಷ ರೀತಿಯಲ್ಲಿ ಕಥೆಯನ್ನು ಹೊತ್ತು ಬರುತ್ತಿರುವ ಈ ಸಿನಿಮಾ, ಸಿನಿಪ್ರಿಯರಿಗೆ ಒಂದು ವಿಶೇಷ ವ್ಯಕ್ತಿ ವ್ಯಕ್ತಿತ್ವದ ಪರಿಚಯದ ಜೊತೆಗೆ ಒಂದು ಒಳ್ಳೆಯ ಸಂದೇಶವು ನೀಡಲಿ ಎನ್ನುವುದು ನಮ್ಮ ಆಶಯ.

ಲಾಕ್ಡೌನ್ ಮುಗಿದ ತಕ್ಷಣ ಸಿನಿಮಾ ತೆರೆ ಕಾಣಲಿದ್ದು, ಕೊರೋನಾ ಆತಂಕ ಮುಗಿದು ಲಾಕ್ಡೌನ್ ತೆರವಿನ ನಂತರ ಥಿಯೆಟರ್ ನಲ್ಲಿ ವೈಕುಂಠದೆಡೆಗಿನ ದಾರಿ ಯಾವುದು ಎಂದು ನೀವೂ ನೋಡಬಹುದಾಗಿದೆ…

-heggaddesamachar.com

Leave a Reply

Your email address will not be published. Required fields are marked *