News (ಸುದ್ದಿ)

ಕೆ.ಆರ್.ನಗರದಲ್ಲಿ ಮೊದಲ ಕೊರೋನಾ ಪಾಸಿಟಿವ್ ಕೇಸ್ – ಸೀಲ್ ಡೌನ್: heggaddesamachar

Spread the love

ಕೆ.ಆರ್.ನಗರದಲ್ಲಿ ಮೊದಲನೆ ಕೊರೊನಾ ಪಾಸಿಟಿವ್ ಪತ್ತೆಯ ಹಿನ್ನಲೆಯಲ್ಲಿ ಮುಸ್ಲಿಂ ಬಡವಣೆಯ 19ನೇ ವಾರ್ಡ್ ನ ಕೇಲವೂಂದು ಬೀದಿಯನ್ನು ಸೀಲ್ ಡೌನ್ ಮಾಡಲಾಗಿತ್ತು ಹಾಗೂ ಪಾಸಿಟಿವ್ ಹೊಂದಿರುವ ಮಹಿಳೆಯನ್ನು ತಕ್ಷಣ ಮೈಸೂರಿನ ಕೊವೀಡ್ ಆಸ್ಪತ್ರೆ ಕಳುಹಿಸಲಾಗಿದೆ. ಸೀಲ್ ಡೌನ್ ಆಗಿರುವ 19 ನೇ ವಾರ್ಡ್ ಮುಸ್ಲೀಂ ಬಡಾವಣೆಗೆ ಇಂದು ಶಾಸಕ ಸಾ.ರಾ.ಮಹೇಶ್ ಅವರು ತಾಲೂಕು ಆಡಳಿತದೊಂದಿಗೆ ಬೇಟಿ ನೀಡಿ ಪರಿಶೀಲಿಸಿದ ಅವರು


ಸಾರ್ವಜನಿಕರು ಯಾವುದೇ ಆತಂಕವನ್ನು ಪಡುವ ಅಗತ್ಯವಿಲ್ಲ ಆರೋಗ್ಯ ಇಲಾಖೆಯ ನಿಯಮಗಳನ್ನು ಕಡ್ಡಾಯ ವಾಗಿ ಪಾಲನೆ ಯನ್ನು ಮಾಡಿ. ಕೂಡಲೇ ಜಿಲ್ಲಾಧಿಕಾರಿಗಳು ಬೇಟಿ ನೀಡಿ ಸೂಕ್ತ ಕ್ರಮವಹಿಸುತ್ತಾರೆ. ಸೀಲ್ ಡೌನ್ ಆಗಿರುವ ರಸ್ತೆಯ ಕುಟುಂಬದವರಿಗೆ ತಾಲೂಕು ಆಡಳಿತ ಆಹಾರ ಸಾಮಾಗ್ರಿ ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.

Leave a Reply

Your email address will not be published. Required fields are marked *