News (ಸುದ್ದಿ)

ಕೆಸಿಸಿ ಬೆಳೆಸಾಲ ವಿತರಣಾ ಸಮಾರಂಭ: heggaddesamachar

Spread the love

ತಿ.ನರಸೀಪುರ: ಕೆಸಿಸಿ ಬೆಳೆಸಾಲ ವಿತರಣಾ ಸಮಾರಂಭ. ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮ.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಜಿಟಿ ಹರೀಶ್ ಗೌಡ. ರೈತರಿಗೆ ಕೆಸಿಸಿ ಬೆಳೆಸಾಲದ ಚೆಕ್ ವಿತರಣೆ ಮಾಡಿದ ಎಂಡಿಸಿಸಿ ಬ್ಯಾಂಕ್ ಜಿಟಿ ಹರೀಶ್ ಗೌಡ. ಬಳಿಕ ಸಮಾರಂಭ ಕುರಿತು ಮಾತನಾಡಿದ ಎಂಡಿಸಿಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಬಸವೇಗೌಡ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಂದ 30ಲಕ್ಷ ರೂ ಗಳ ಬೆಳೆ ಸಾಲ ವಿತರಣೆ ಮಾಡುತ್ತಿದ್ದೇವೆ. ರೈತರು ಬೆಳೆಸಾಲ ವಿತರಣೆಯ ಸದುಪಯೋಗ ಪಡೆದುಕೊಳ್ಳಬೇಕು.

ಯಾಚೇನಹಳ್ಳಿ ಪ್ರಾಥಮಿಕ ಸಹಕಾರ ಒಂದು ಮಾದರಿ ಸಹಕಾರ ಸಂಘವಾಗಿ ಬೆಳೆದಿದೆ. ಸರ್ಕಾರಗಳು ಕೂಡ ರೈತರಿಗೆ ನೆರವಾಗುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ನೀಡುತ್ತಿದೆ. ಸಹಕಾರ ಸಂಸ್ಥೆಯ ಬೆಳವಣಿಗೆಗೆ ರೈತರೇ ಮೂಲ ಕಾರಣ ಎಂದು ಮಾತನಾಡಿದರು.ಮತ್ತು ಚಾಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕಿಗೆ ನೂರು ಜನಕ್ಕೆ ಐವತ್ತಾರು ಲಕ್ಷ ರೂಗಳ ಚೆಕ್ಕನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಚಾಮನಳ್ಳಿ ಕೃಷಿ ಪತ್ನಿ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಹನುಮನಾಳ್ ಚಾಮೇಗೌಡ ಉಪಾಧ್ಯಕ್ಷ ನಂಜುಂಡ ಶೆಟ್ಟಿ ನಿರ್ದೇಶಕರುಗಳಾದ ಸಿದ್ದೇಗೌಡ, ಕೃಷ್ಣೇಗೌಡ, ಪ್ರಸನ್ನ, ಸುನೀತಾ ವೀರಪ್ಪಗೌಡ ಚನ್ನಮಲ್ಲು, ಕಾಂತರಾಜು, ಮಹದೇವಮ್ಮ, ಗೋಪಾಲ, ಲಕ್ಷ್ಮಮ್ಮ ,ಶಂಕರೇಗೌಡ ಇದ್ದರು .

ಈ ಸಂದರ್ಭ ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಸದಾನಂದಗೌಡ,ಯಾಚೇನಹಳ್ಳಿ ಪ್ರಾಥಮಿಕ ಸಹಕಾರ ಸಂಘದ ಗೌರವಾಧ್ಯಕ್ಷ ವೈ.ಎನ್ ಶಂಕರೇಗೌಡ,ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *