News (ಸುದ್ದಿ)
ಕೃಷ್ಣನೂರಿನಲ್ಲಿ ಕೊರೋನಾ ಕಂಟಕ – ಉಡುಪಿಯಲ್ಲಿ ಕೊರೊನಾಗೆ ಮೊದಲ ಬಲಿ: heggaddesamachar.com

ಉಡುಪಿ ಜಿಲ್ಲೆ ಕೊರೊನಾ ಮುಕ್ತವಾಗಿ, ನಿಟ್ಟುಸಿರು ಬಿಡುವ, ಹಸಿರು ಝೋನ್ ಆಗಿ ಮಾರ್ಪಾಡಾಯಿತು ಎನ್ನುವಷ್ಟರಲ್ಲೆ ಉಡುಪಿ ಜಿಲ್ಲೆಯಲ್ಲಿ ಇಂದು ಒಬ್ಬರು ಕೊರೋನ ಮಹಾಮಾರಿಗೆ ಬಲಿಯಾದರು.
ಇಂದು ಬಲಿಯಾದ ಅವರು ಮಹಾರಾಷ್ಟ್ರದಿಂದ ತನ್ನ ಊರು ಕುಂದಾಪುರಕ್ಕೆ ಮರಳಿದ್ದರು.
ಮೇ 12ರಂದು ಊರಿಗೆ ಮರಳಿದ್ದು, ನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಮೇ 13ರಂದು ಹೃದಯಾಘಾತವಾಗಿತ್ತು ಆದರೆ ಮೇ 14ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು, ಅವರ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದಾಗ (ಮೇ 16) ಇಂದು ಅದರ ಫಲಿತಾಂಶ ಧನಾತ್ಮಕ ವಾಗಿದೆ (ಪಾಸಿಟಿವ್) ಎಂದು ಉಡುಪಿ ಜಿಲ್ಲಾಧಿಕಾರಿ ಮಾಹಿತಿ ನೀಡಿರುತ್ತಾರೆ.
ಹಾಗಾಗಿ ಮಣಿಪಾಲ ಆಸ್ಪತ್ರೆಯಲ್ಲಿನ ಸಿಬ್ಬಂದಿ ದಾದಿಯರು ಹಾಗೂ ವೈದ್ಯರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ