News (ಸುದ್ದಿ)

ಕುಕ್ಕೆಯಲ್ಲಿ ಮಧ್ಯಾಹ್ನ ಪೂಜೆ ಬೆಳಗ್ಗೆ ಮಾಡಿದ ಅರ್ಚಕ – ಕ್ರಮಕ್ಕೆ ಆಗ್ರಹ: heggaddesamachar

Spread the love

ಕುಕ್ಕೆಯಲ್ಲಿ ಮಧ್ಯಾಹ್ನ ಪೂಜೆ ಬೆಳಗ್ಗೆ ಮಾಡಿದ ಅರ್ಚಕರ ಮೇಲೆ ಕ್ರಮ ಕೈಗೊಳ್ಳಲು ಕಾರ್ಯನಿರ್ವಹಣಾಧಿಕಾರಿಗೆ ಮನವಿ.

ಸುಬ್ರಹ್ಮಣ್ಯ-ದಕ್ಷಿಣ ಕನ್ನಡದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೂ.08ರಂದು ಮಧ್ಯಾಹ್ನ ಪೂಜೆಯನ್ನು ಬೆಳಗ್ಗೆ ಮಾಡಿ ಮುಗಿಸಿದ ಅರ್ಚಕರ ಮೇಲೆ ಕ್ರಮ ಕೈಗೊಳ್ಳುವಂತೆ ಕುಕ್ಕೆ ಶ್ರೀ ದೇವಸ್ಥಾನದ ಭಕ್ತ ಹಿತರಕ್ಷಣಾ ವೇದಿಕೆಯವರು ದೇಗುಲದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ. ಎಚ್. ಅವರಿಗೆ ಮನವಿ ಸಲ್ಲಿಸಿದ್ದಾರೆ.

ದೇವಸ್ಧಾನದಲ್ಲಿ ಒಂದು ಹೊತ್ತಿನ ಪೂಜೆಯನ್ನು ನಿಲ್ಲಿಸಿ ದೇವಸ್ಥಾನದ ಶಿಷ್ಟಾಚಾರ,ಸಂಪ್ರದಾಯಕ್ಕೆ,ಭಕ್ತಾದಿಗಳ ಧಾರ್ಮಿಕ ಭಾವನೆ ಧಕ್ಕೆ ತಂದಿರುವ ಮತ್ತು ಇದಕ್ಕೆ ಕಾರಣರಾದ ದೇವಸ್ಥಾನದ ಆರ್ಚಕರನ್ನು ತಕ್ಷಣ ವಜಾಗೊಳಿಸಬೇಕು ಮತ್ತು ಪ್ರಕರಣದ ತನಿಖೆಯನ್ನು ನಡೆಸಿ ಆಗಿರುವ ಪ್ರಮಾದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿವರಿಸಲಾಗಿದೆ.

ಇದಕ್ಕೆ ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *