Literature (ಸಾಹಿತ್ಯ)

ಕುಂದಾಪುರ ತಾಲೋಕಿನ ಮೂಕಾಂಬಿಕಾ ಪ್ರೌಢ ಶಾಲೆ ಹೊಸೂರಿನಲ್ಲಿ ವಿದ್ಯಾಗಮ 02 ಮತ್ತು ಎಸ್.ಎಸ್.ಎಲ್.ಸಿ ತರಗತಿಗಳು ಆರಂಭ: heggaddesamachar

Spread the love

 ॥ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ॥

ಗುರುಗಳಿಂದ ಗುರುದಕ್ಷಿಣೆ ಎಂಬಂತೆ, ಶಿಕ್ಷಣ ಎಂಬ ಕಾಣಿಕೆಯನ್ನು ನಾವು ಪಡೆದರೆ ಮಾತ್ರ ಗೌರವಯುತ ಮಾನವರಾಗಿ ಬಾಳಲು ಸ್ಪೂರ್ತಿ ಮತ್ತು ಕೀರ್ತಿ.

ಬನ್ನಿ ಮಹಾಮಾರಿ ಕೊರೋನಾ ಓಡಿಸೋಣ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಓದಿಸೋಣ ಎಂದು ಹೇಳುತ್ತಾ ಕೊರೋನಾ ನಂತರ ಶಾಲೆಗಳು ತೆರೆಯುತ್ತಿದ್ದು, ಕುಂದಾಪುರ ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆ, ಹೊಸೂರಿನ ಎಂಟು ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ‘ವಿದ್ಯಾಗಮ 02’ ಎಂಬ ಯೋಜನೆಯೊಂದಿಗೆ ತರಗತಿಗಳು ಆರಂಭಗೊಂಡರೆ, ಇನ್ನು ಬಹುಮುಖ್ಯ ಘಟ್ಟ ಎನಿಸಿಕೊಳ್ಳುವ ಎಸ್ ಎಸ್ ಎಲ್ ಸಿ ತರಗತಿಯನ್ನು ಪ್ರಸಕ್ತ ಸಾಲಿನಲ್ಲಿ ದಿನಾಂಕ 01-01-2021ರಿಂದ ಆರಂಭಿಸಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

ಕೊರೋನಾ ಬಂದು ಎಲ್ಲಾ ಕಡೆ ಶಿಕ್ಷಣ ವ್ಯವಸ್ಥೆಯೇ ಶಿಕ್ಷೆಯೆಂಬಂತೆ ತೋರಿದರೂ, ಭವ್ಯ ಭವಿಷ್ಯಕ್ಕೆ ವಿದ್ಯೆಯೇ ಸಕಲವೂ ಆಗಿದೆ ಎಂದರೆ ತಪ್ಪಿಲ್ಲ . ಅದರಂತೆ ವಿದ್ಯೆಯೊಂದಿದ್ದರೆ ವಿದೇಶದಿಂದಾಚೆಗೂ ವಿಶ್ವಾಸದ ಹೆಜ್ಜೆ ಇಡಬಹುದು. ಕೊರೋನಾ ಭಯದಿಂದ ಹೊರಬಂದು, ಕೊರೋನಾ ಸುರಕ್ಷತೆ ಪಾಲಿಸಿಕೊಂಡು, ಮಾಸ್ಕ್ ಧರಿಸಿ, ಆಗಾಗ ಕೈ ತೊಳೆದು, ದೈಹಿಕ ಅಂತರ ಕಾಯ್ದುಕೊಳ್ಳುತ್ತಾ, ಹೊಸ ವರುಷದ ವಿದ್ಯಾಗಮ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸುತ್ತಿರುವ ಶಿಕ್ಷಣ ಸಂಸ್ಥೆ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರು, ಅಧ್ಯಾಪಕೇತರ ವೃಂದ ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆ, ಹೊಸೂರು ಕುಂದಾಪುರ ತಾಲೂಕು ಉಡುಪಿ ಜಿಲ್ಲೆ 576233… ಇವರೆಲ್ಲರ ಈ ಕೆಲಸ ನಿಜಕ್ಕೂ ಅಭಿನಂದನೀಯ.

ರಿ: ಹೆಗ್ಗದ್ದೆ ಸಮಾಚಾರ್.ಕಾಮ್

Leave a Reply

Your email address will not be published. Required fields are marked *