News (ಸುದ್ದಿ)

ಕುಂದಾಪುರದ ಕುವರ ಈಗ ಬಿಗ್ ಬಾಸ್: ಸಿಕ್ಕಿದ್ದು ಎಷ್ಟು ಲಕ್ಷ ಗೊತ್ತಾ!? heggaddesamachar.com

Spread the love

ಬೆಂಗಳೂರು: ಕಳೆದ ೧೧೩ ದಿನಗಳ ಬಿಗ್ ಬಾಸ್ ಮನೆಯ ಸೋಜಿಗದ ಆಟಕ್ಕೆ ಬ್ರೇಕ್ ಬಿದ್ದಿದೆ. ಕುಂದಾಪುರದ ಶೈನ್ ಶೆಟ್ಟಿ ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಬಾರಿಯ ಬಿಗ್ ಬಾಸ್ ನಲ್ಲಿ ೧೮ ಜನ ಸ್ಪರ್ಧಿ ಗಳು ಭಾಗವಹಿಸಿದ್ದರು. ಅವರಲ್ಲಿ ಕೊನೆಯವರಾಗಿ ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ಇಬ್ಬರೇ ಉಳಿದುಕೊಂಡಿದ್ದರು.

ಅಂದ ಹಾಗೆ ಶೈನ್ ಗೆ ದೊರಕಿದ ಬಹುಮಾನದ ಮೊತ್ತ ಎಷ್ಟು ಗೊತ್ತಾ!?:

ಬಿಗ್ ಬಾಸ್ ವಿನ್ನರ್ ಆದ ಶೈನ್ ಗೆ ಸಿಕ್ಕಿದ್ದು ಬರೋಬ್ಬರಿ ೬೦ ಲಕ್ಷ ರೂಪಾಯಿ. ಮತ್ತು ಹುಂಡೈ ಕಂಪೆನಿಯ ಒಂದೊಳ್ಳೆ ಕಾರು.

ಮೂಲಗಳ ಪ್ರಕಾರ,ಇದುವರೆಗೂ ಆರು ಸೀಸನ್ ನಲ್ಲಿ ಗೆದ್ದಿರುವ ಎಲ್ಲಾ ಸ್ಫರ್ಧಿಗಳಿಗಿಂತ ಶೈನ್ ಗೆ ಅತ್ಯಧಿಕ ಹಣ ದೊರಕಿರುವುದು ಎನ್ನಲಾಗಿದೆ.

ಶೈನ್ ಕಳೆದ ಆರೇಳು ವರ್ಷಗಳಿಂದ ಕಿರುತೆರೆಯಲ್ಲಿ ನಟನಾಗಿ, ನಿರೂಪಕನಾಗಿ, ಗಾಯಕನಾಗಿ ಕಾಣಿಸಿಕೊಂಡಿದ್ದರು ಆದರೆ ಕಾರಣಾಂತರಗಳಿಂದ ಇವೆಲ್ಲದರಿಂದ ದೂರವೇ ಉಳಿದಿದ್ದರು… ಈಗ ಮತ್ತೆ ಕಮ್ ಬ್ಯಾಕ್ ಎಂಬಂತೆ ಶೈನ್ ಹವಾ ಸೃಷ್ಟಿಸಿದ್ದು, ಅವರಿಗಾಗಿ ಅನೇಕ ಆಫರ್ ಗಳು ಕಾದು ಕುಳಿತಿವೆ ಎನ್ನಲಾಗಿದೆ.

Leave a Reply

Your email address will not be published. Required fields are marked *