News (ಸುದ್ದಿ)

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಪ್ರತಿಭಟನೆ ಯಾಕೆ ಗೊತ್ತಾ!?: heggaddesamachar

Spread the love

ಕೇಂದ್ರ ಸರ್ಕಾರ ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ‌ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಮಾತನಾಡಿ ಕೊರೊನಾ ಹಿನ್ನಲೆ‌ ಸರ್ಕಾರ ಲಾಕ್ ಡೌನ್ ಮಾಡಿತು.ಈ ಲಾಕ್ ಡೌನ್ ಪರಿಣಾಮ ಕಾರ್ಮಿಕರು‌ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ.

ಸರ್ಕಾರ ಲಾಕ್ ಡೌನ್ ಅವಧಿಯಲ್ಲಿಯೂ ವೇತನ ನೀಡಬೇಕೆಂದು ತಿಳಿಸಿದರೂ ಸಹ ಕಾರ್ಖಾನೆ‌ ಮಾಲೀಕರು‌ ಇದುವರೆಗೂ ವೇತನ ನೀಡಿಲ್ಲ.ಇನ್ನೂ ಕೆಲವು ಕಾರ್ಖಾನೆಗಳು ಮುಚ್ಚುತ್ತಿದ್ದು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.ಆದ್ದರಿಂದ ಮೈಸೂರಿನ ಎಲ್ಲಾ ಕಾರ್ಖಾನೆ ಪ್ರಾರಂಭಿಸಬೇಕು.ಮಾಸಿಕ 7500 ಹಣ ವರ್ಗಾವಣೆ ಮಾಡಬೇಕು.ಲಾಕ್ ಡೌನ್ ಅವಧಿಯ ವೇತನ ನೀಡಬೇಕು.

ಕೆಲಸ ನಿರಾಕರಣೆ ಮಾಡಿರುವ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶೇಷಾದ್ರಿ, ಜಿ.ಜಯರಾಂ,ಚಂದ್ರಶೇಖರ್ ಮೇಟಿ,ಅನಿಲ್ ಕುಮಾರ್ ಸೇರಿದಂತೆ ಇತರೆ ಕಾರ್ಮಿಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *