ಕಾಯಿಲೆಯ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಒಂದೂ ಥ್ಯಾಂಕ್ಸ್ ಹೇಳೋಣ: heggaddesamachar.com

ನಿರಂತರವಾಗಿ ಎರಡು ತಿಂಗಳುಗಳಿಂದ ಇಡೀ ಪ್ರಪಂಚಕ್ಕೇ ಅಷ್ಟಧಿಗ್ಬಂಧನ ಹಾಕಿದ್ದು ಈ ಕೊರೋನೊ ವೈರಸ್. ಚೀನಾದ ಗಡಿಯಿಂದ ಶುರುವಾದ ಈ ಮಹಾಮಾರಿಯ ರೌದ್ರನರ್ತನ ಎಲ್ಲಾ ದೇಶಕ್ಕೂ ತನ್ನ ಪ್ರಭಾವವನ್ನು ಹಬ್ಬಿಸಿ ಮಾರಣಹೋಮವನ್ನೇ ನೆಡೆಸುತ್ತಿದೆ. ವೈರಸ್ ನ ತೀವ್ರತೆ ಹೆಚ್ಚಾಗುತ್ತಿದ್ದಂತೆ ಎಲ್ಲಾ ಕಡೆಯೂ ಅದೇಷ್ಟೋ ನಿಯಂತ್ರಣಕಾರಿ ಕ್ರಮಗಳನ್ನ ಕೈಗೊಂಡರು ಪರಿಸ್ಥಿತಿ ಹತೋಟಿಗೆ ಸಿಗುತ್ತಿಲ್ಲಾ. ಶಾಲಾ-ಕಾಲೇಜುಗಳು, ಮಸೀದಿ, ಮಂದಿರ, ಚರ್ಚುಗಳು , ಆಫೀಸ್ , ಜಿಮ್, ಮಾರುಕಟ್ಟೆಗಳು ಹೀಗೆ ಎಲ್ಲವೂ ಬಂದ್ ಆಗಿ ಎಲ್ಲರೂ ಹೆದರಿ ಒಳಗೆ ಕುಳಿತುಕೊಂಡಿದ್ದರೆ, ಅಲ್ಲಿ ನಮ್ಮ ವೈದ್ಯರು ತಮ್ಮ ಜೀವದ ಹಂಗು ತೊರೆದು, ತಮ್ಮ ಸಂಸಾರದ ಬಗ್ಗೆ ಒಂದು ಕ್ಷಣವೂ ಆಲೋಚಿಸದೇ ರಾತ್ರಿ ಹಗಲು ಕಾಯಿಲೆಗೆ ಒಳಪಟ್ಟ ವ್ಯಕ್ತಿಯನ್ನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಎಲ್ಲರಂತೆ ನಾನು ಸುರಕ್ಷಿತವಾಗಿ ಇರಬೇಕೆಂದೂ ಆತನೂ ತನ್ನ ವೃತ್ತಿ ಬಿಟ್ಟು ಮನೆ ಸೇರಿಕೊಂಡರೆ ಬಹುಶಃ ಸ್ವಲ್ಪ ದಿನದಲ್ಲಿಯೇ ಸ್ಮಶಾನದಲ್ಲಿಯೂ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬರ್ತಾ ಇತ್ತು. ಎಲ್ಲೋ ಒಂದು ಕಡೆ ಕಾಯಿಲೆ ಬಂದಿರುವ ವಿಚಾರ ತಿಳಿದರೂ ಆ ವ್ಯಕ್ತಿ ಧೃತಿಗೆಡದೆ ಎದುರಿಸುತ್ತಾನೆಂದರೆ ಅದು ನಮ್ಮ ವೈದ್ಯರ ಮೇಲಿರುವ ತೀರವಾದ ನಂಬಿಕೆ ಅಲ್ಲದೇ ಇನ್ನೇನೂ.

ಮೊನ್ನೆ ನೆಡೆದ ಒಂದು ಭಾಷಣದಲ್ಲಿ ಮೋದಿ ಜನತಾ ಕರ್ಪ್ಯೂ ಮತ್ತು ನಮ್ಮ ವೈದ್ಯರಿಗೆ ಹಾಗೂ ಈ ಕಾಯಿಲೆಯ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಒಂದೂ ಥ್ಯಾಂಕ್ಸ್ ಹೇಳೋಣ ಎನ್ನುವ ಒಂದು ಮಾತು ಇಂದು ಸಂಜೆ ಐದು ಗಂಟೆಗೆ ಒಂದು ಕ್ಷಣ ಎಲ್ಲರ ಮೈ ರೋಮಾಂಚನಗೊಳಿಸಿತ್ತು. ಹೌದು ಪ್ರಧಾನಿಯವರ ಮಾತಿಗೆ ಜನರ ಸ್ಪಂದನೆ ಖಂಡಿತವಾಗಿಯೂ ಸಾರ್ಥಕತೆಯನ್ನ ತೋರಿಸುತ್ತಿದೆ.

ಇನ್ನೂ ಕೇವಲ ವೈದ್ಯರಲ್ಲದೇ , ನಮ್ಮ ಯೋಧರು , ಆರಕ್ಷಕರೂ, ಮಾಧ್ಯಮ ಮಿತ್ರದವರೂ ಕೂಡ ತಮ್ಮೆಲ್ಲಾ ಸಮಸ್ಯೆಗಳ ನಡುವೆ ನಮ್ಮ ಸಹಾಯಕ್ಕಾಗಿ ನಿಂತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳೂ.
-ರಂಜನಾ ಶೆಟ್ಟಿ ಹಟ್ಟಿಯಂಗಡಿ