ಕಾಡ್ಗಿಚ್ಚು  ಮಾನವ ನಿರ್ಮಿತವೋ… ನೈಸರ್ಗಿಕ ಅನಾಹುತವೋ…: heggaddesamachar

Spread the love

    ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಅಧಿಕೃತ ಅಂಕಿಸಂಖ್ಯೆಗಳ ಪ್ರಕಾರ  ಇದೆ ಫೆಬ್ರವರಿ ಯಿಂದ ಎಪ್ರಿಲ್ 5 ತನಕ  ಕರ್ನಾಟಕದ 11 ಅರಣ್ಯ ಗಳಲ್ಲಿ 42 ಕಾಡ್ಗಿಚ್ಚು ಪ್ರಕರಣಗಳು  ಘಟಿಸಿವೆ.   ಹಲವು ಅರಣ್ಯಗಳಲ್ಲಿ ಕಾಡ್ಗಿಚ್ಚು ಅಬ್ಬರಿಸತೊಡಗಿದ್ದು. ಕೊಡಗಿನ ದುಬಾರೆ , ಗದಗದ ಕಪ್ಪತ್ ಗುಡ್ಡ, ಚಿಕ್ಕ ಮಂಗಳೂರು ಭದ್ರ ಅರಣ್ಯ ಉತ್ತರ ಕನ್ನಡದ ದಾಂಡೇಲಿ, ಮೈಸೂರು ನಾಗರ‌ಹೊಳೆ ಅಭಯಾರಣ್ಯ, ಚಾಮರಾಜನಗರದ ಎಂ ಎಂ‌ ಹಿಲ್ಸ್ ಬಿಳಿಗಿರಿ ರಂಗನ ಬೆಟ್ಟ, ಬಂಡಿಪುರ ಅಭಯಾರಣ್ಯದಲ್ಲಿ ನಿರಂತರವಾಗಿ ಕಾಡಿನ ಬೆಂಕಿ ಕಾಣಿಸಿಕೋಳ್ಳುತ್ತಿರುವ  ವರದಿಗಳು ಬರುತ್ತಿವೆ. ಕರ್ನಾಟಕದಲ್ಲಿ ಕಾಡ್ಗಿಚ್ಚು ಪ್ರಕರಣಗಳು ಗಣನೀಯ ಏರಿಕೆ ಕಾಣುತ್ತಿದ್ದು. ದೇಶದಲ್ಲಿ ಪ್ರತಿ ವರ್ಷ ಕನಿಷ್ಠ 3,000 ಕಾಡ್ಗಿಚ್ಚು ಘಟನೆ ವರದಿಯಾಗುತ್ತಿದ್ದು ಅರಣ್ಯದೊಂದಿಗೆ ವನ್ಯಜೀವಿಗಳು ಬಲಿಯಾಗುತ್ತಿದೆ. 


     ಬಿರು ಬೇಸಿಗೆ ಫಲವಾಗಿ ಕಾಡಿಗೆ ಬೆಂಕಿ ಬೀಳುವುದು ಅಲ್ಲದೆ ಕೀಡಿಗೆಡಿಗಳು ಬೆಂಕಿ ಹಾಕುವುದು ಸಹಜ ಎನ್ನಲಾಗುತ್ತದೆ. ಬೆಂಕಿ ಆಕಸ್ಮಿಕವಾಗಿರಲಿ, ದುಷ್ಕರ್ಮಿಗಳ ಕೈವಾಡವಿರಲಿ ಆದ ನಷ್ಟ ತುಂಬಿಸಲಾರದು. ಈಗಾಗಲೇ ಕಾಡು ವಿನಾಶದ ಅಂಚಿನಲ್ಲಿದೆ .ಅರಣ್ಯ ನಾಶಕ್ಕೆ  ಕಡಿವಾಣ ಅನಿವಾರ್ಯ. ವನದಹನ ಮನು ಕುಲಕ್ಕೆ ಅಪಾಯ. ವಿಜ್ಞಾನ ಎಷ್ಟೇ ಮುಂದುವರಿದರು  ಅದ್ಬುತ ಸೃಷ್ಟಿಯ ಪ್ರಕೃತಿಯನ್ನು ಬಿಟ್ಟು ಮಾನವ ಬದುಕಲಾರ . ಪ್ರತಿ ವರ್ಷ ಒಂದಲ್ಲ‌ ಒಂದು ‌ಕಡೆ ಅರಣ್ಯಕ್ಕೆ  ಬೆಂಕಿ ಎಂಬ ಅವಘಡದಲ್ಲಿ  ಕಾಡ್ಗಿಚ್ಚು ಕಾಣಿಸಿಕೊಳ್ಳುವುದು  ಸಾಮಾನ್ಯವಾಗುತ್ತಿದೆ. ಇದು ಅಪಾಯದ ಕರ‌ಗಂಟೆ. 


    ಧನದಾಹಕ್ಕೆ ಸುಟ್ಟು ಬೂದಿಯಾಯಿತೆ ಅರಣ್ಯ. ಮಾನವನ ಹಸ್ತಕ್ಷೇಪ ಕಾಡು ಹಾಗೂ ಕಾಡುಪ್ರಾಣಿಗಳಿಗೆ ಕಂಟಕವೇ ಆಗಿದೆ. ಅಪಾರ ಸಂಖ್ಯೆಯಲ್ಲಿ ಪ್ರಾಣಿ ಪಕ್ಷಿಗಳ ಜೀವಹಾನಿಗೆ ಕಾರಣವಾಗಿರುವುದು ದಾಖಲಾಗಿದೆ.  ಕೆಲವೆಡೆ ಕಾಡ್ಗಿಚ್ಚು ಉದ್ದೇಶ ಪೂರ್ವಕವಾಗಿ ಹಚ್ಚಿದ್ದು ಎಂಬ  ಆರೋಪ ಗಂಭೀರತೆ ಪಡೆಯುತ್ತಿದ್ದು ಮಾನವ ನಿರ್ಮಿತ ಕಾಡ್ಗಿಚ್ಚು ಅಕ್ಷಮ್ಯ ಅಪರಾಧ. ಕಾಡ್ಗಿಚ್ಚು ಪ್ರಕರಣಗಳನ್ನು ತಡೆಯಲು ಸರ್ಕಾರ ಅತ್ಯಂತ ತುರ್ತು ಕ್ರಮ  ಕೈಗೊಳ್ಳಬೇಕಾಗಿದೆ. ಅರಣ್ಯದ ಮಾರಣ ಹೋಮದಿಂದ ಭವಿಷ್ಯದಲ್ಲಿ ಒದಗ ಬಹುದಾದ  ವಿಪತ್ತುಗಳ ಬಗ್ಗೆ ಈಗಿಂದಲೇ ಎಚ್ಚರವಹಿಸ‌ಬೇಕಾಗಿದೆ.


     ಕಾಡ್ಗಿಚ್ಚು ಹಚ್ಚುವ ಕೆಲಸ ನಿರಂತರ ನಡೆಯುತ್ತಿದ್ದರು ಜಾಣಮೌನವನ್ನು ಅರಣ್ಯಾಧಿಕಾರಿಗಳು ಹಾಗೂ ಸರಕಾರ ವಹಿಸಿದೆ. ” ಕಿಡಿಗೆಡಿಗಳು ಮಾಡಿದ ಕೆಲಸ ವಿದು, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ದುಷ್ಕರ್ಮಿಗಳನ್ನು ಪತ್ತೆಹಚ್ಚುವ ಕ್ರಮವನ್ನು ಕೈಗೊಳ್ಳಲಾಗುವುದು. ” ಎಂದು ನುಣಿಚಿಕೊಳ್ಳುವ ಸರಕಾರಿ ಅಧಿಕಾರಿಗಳು. ಕಾಡು ಪ್ರಾಣಿಗಳ ಬೇಟಿ, ಮರಗಳ ಕಳ್ಳತನ, ಮತ್ತಿತರ ಪ್ರಕರಣಗಳಲ್ಲಿ‌ ಅರಣ್ಯ ಇಲಾಖೆಯಿಂದ ಬೆದರಿಕೆಗೂ ಒಳಗಾದವರು ಕಾಡಿಗೆ ಬೆಂಕಿ ಇಡುವ ಪ್ರಕರಣಗಳನ್ನು ಅಲ್ಲಗಳೆಯುವಂತಿಲ್ಲ. ವೈಜ್ಞಾನಿಕ ವರದಿ ಪ್ರಕಾರ ಕಾಡ್ಗಿಚ್ಚಿಗೆ ಆಹುತಿಯಾದ ಅರಣ್ಯ ಸಹಜ ಸ್ಥಿತಿಗೆ ಬರಲು ಏಳೆಂಟು ವರ್ಷ ಗಳೆ‌ಬೇಕು.
      ಕಾಡು ಅಳಿದರೆ  ನಾಡಿಗೆ ಉಳಿಗಾಲವಿಲ್ಲ ಎಂಬ ಸಾಮಾನ್ಯ ಜ್ಞಾನವು ಮಾನವನಿಗೆ ಅರ್ಥವಾಗುತ್ತಿಲ್ಲ. ಅರಣ್ಯ ನಾಶವಾದರೆ ಹಲವು ಅನಾಹುತಕ್ಕೆ ಆಹ್ವಾನ ನೀಡಿದಂತೆ. ಕಾಡು ಪ್ರಾಣಿಗಳಿಗೆ ಆಶ್ರಯ ಕೊಡುತ್ತಾ ಪ್ರಕೃತಿಯ ಸಮತೋಲನದಲ್ಲಿ ಭಾಗಿಯಾಗುತ್ತದೆ. ಕಾಡು‌ಮಣ್ಣಿನ  ರಕ್ಷಣೆ ಹಾಗೂ ಸತ್ವ ಹೆಚ್ಚಿಸಿ‌ ತಾಪಮಾನ ನಿಯಂತ್ರಣದಲ್ಲಿಡುತ್ತದೆ.  ನೀರನ್ನು ಹಿಡಿದಿಡಲು ಗಿಡ ಮರಗಳು ಇಲ್ಲವಾದಾಗ  ಜಲಪ್ರಳಯ ಆಗ ಬಹುದು.ಅಷ್ಟೇ ಅಲ್ಲದೇ ಕಾಡು ನಾಶ ಅಂತರ್ಜಲ ಬತ್ತುವಿಕೆಗೆ ಕಾರಣವಾಗುತ್ತದೆ. ಕಾಡು ಉಳಿದರೆ ನಾಡು ಉಳಿದಿತು. ಕಾಡ್ಗಿಚ್ಚು ಸಮಸ್ಯೆಗೆ ಬೇಕಿದೆ ಶಾಶ್ವತ ‌ಪರಿಹಾರ. ಅರಣ್ಯದೊಳಗೆ  ಕಾಣಿಸಿಕೊಳ್ಳುವ ಬೆಂಕಿಯ ಹಿಂದೆ ಮಾನವ ಕೈವಾಡವಿದ್ದು ಕಾಡನ್ನು ಮಾನವ ತನ್ನ ಸ್ವಾರ್ಥಕ್ಕಾಗಿ ಬಳಸಿದ್ದು ಹೌದು.


      ಕಾನನ ಬರಿದಾದರೆ ಮಾನವ ಬದುಕು  ಬರೀ ಗೊಳು .ಕಾಡಿಗೆ ಬೆಂಕಿ ಹಚ್ಚುವ ಕಿಡಿಗೇಡಿಗಳ‌ ವಿರುದ್ದ ಕಠಿಣ ಕಾನೂನು ‌ಕ್ರಮ ಕೈಗೊಳ್ಳಬೇಕು. ಅರಣ್ಯಕ್ಕೆ ಬೆಂಕಿ ಬಿಳುವುದನ್ನು ವಿವಿಧ ಆಯಾಮಗಳಲ್ಲಿ ನೋಡಲಾಗುತ್ತದೆ. ಒಟ್ಟಿನಲ್ಲಿ  ಹಸಿರಿನಿಂದ‌ ಕಂಗೊಳಿಸುತ್ತಿದ್ದ ಕಾಡು ಸುಟ್ಟು ಕರಕಲಾಗಿದೆ. ಕಾಡು ಪ್ರಾಣಿಗಳು ದಿಕ್ಕೆಟ್ಟು ಓಡುವ ಪರಿಸ್ಥಿತಿ ಬಂದೊದಗಿದೆ. ಮಾನವ ಅಕ್ರಮ ,ಕಾನೂನು ಬಾಹಿರ ಚಟುವಟಿಕೆಗಳನ್ನು ಮರೆಮಾಡಲು ಕಾಡಿಗೆ ಬೆಂಕಿ ಹಾಕಿ‌ ಕಾಡ್ಗಿಚ್ಚು ಬಿದ್ದಿದೆ ಎಂದು ಹೇಳಲಾಗುತ್ತದೆ ಎನ್ನವುದನ್ನು  ಅಲ್ಲ ಗಳೆಯುವಂತಿಲ್ಲ. ಜೀವ ವೈವಿಧ್ಯತೆಗಳ ತಾಣ‌ಹೊತ್ತಿ ಉರಿದದ್ದು  ಹೌದು.

     ಭಾರತದಲ್ಲಿ ಸಮೃದ್ಧವಾದ ಅರಣ್ಯ ‌ಪ್ರದೇಶವಿದೆ. ಕಾಡ್ಗಿಚ್ಚಿನ ಅನಾಹುತದಿಂದ ತಪ್ಪಿಸಿ ಕೊಳ್ಳಲು ಡ್ರೋನ್ ಡೊಡ್ಡ ಡೊಡ್ಡ ಕಾಡುಗಳಲ್ಲಿ  ನಿಗದಿತ ಕಾರ್ಯ ವೆಸಗುತ್ತಿ ರ ಬೇಕು. ಬೆಂಕಿ ಹರಡದಂತೆ ಫೈರ್ ಲೈನ್ ಗಳ ನಿರ್ಮಾಣ ವಿರಬೇಕು.ಕಾಡಿಗೆ  ಬೆಂಕಿ‌ ಬಿದ್ದರೆ ಅತೀ ಹೆಚ್ಚು ಲಾಭವಾಗುವುದು  ಮರಗಳ್ಳರಿಗೆ. ಕಾಡ್ಗಿಚ್ಚಿನಲ್ಲಿ ಸತ್ತ ಮರಗಳನ್ನು ಕರಿದಿಸುವವರು ಅವರೇ ಸ್ವಾರ್ಥಕ್ಕಾಗಿ ಬೆಂಕಿ ‌ಹಚ್ಚಿರ ಬಹುದು  ಎಂಬ ಗುಮಾನಿಯಿರುವುದು ಸತ್ಯ. ಒಟ್ಟಿನಲ್ಲಿ ಕಾಡ್ಗಿಚ್ಚು ಮಾನವ ನಿರ್ಮಿತವೋ…ನೈಸರ್ಗಿಕ ಅನಾಹುತವೋ…ಎಂಬ‌ ಯಕ್ಷ ಪ್ರಶ್ನೆ ಉಳಿದಿರುವುದು  ಹೌದು.

Leave a Reply

Your email address will not be published. Required fields are marked *