ಕಳಪೆ ಕಾಮಗಾರಿ – ಗ್ರಾಮಸ್ಥರೇ ತಿರುಗಿ ಬಿದ್ರು ನೋಡಿ: heggaddesamachar

ತಿ.ನರಸೀಪುರ .ಮೇ.25:- ಕಳೆಪೆ ಕಾಂಕ್ರೀಟ್ ರಸ್ತೆ ನಿರ್ಮೀಸುತ್ತಿರುವ ಗುತ್ತಿಗೆದಾರ ಹಾಗೂ ಕಳೆಪೆ ಕಾಮಗಾರಿ ನೆಡಸಲು ಸಹಕಾರ ನೀಡುತ್ತಿರುವ ಇಂಜಿನಿಯರ್ ಶಬರೀಶ್ ಮೇಲೆ ಕ್ರಮ ವಹಿಸಬೇಕೆಂದು ಗ್ರಾಮದ ಮುಖಂಡ ದೇವಾಳಿ ನಂಜುಂಡನಾಯ್ಕ ಗಂಭೀರ ಆರೋಪ ಮಾಡಿದರು.
ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಎಸ್ ಟಿ.ಪಿ.ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಸೂಮಾರು 60 ಲಕ್ಷ ರೂಗಳ ವೆಚ್ಚದ ಚರಂಡಿ ಹಾಗೂ ಸಿಸಿ ರಸ್ತೆ ಸಂಪೂರ್ಣ ಕಳೆಪೆಯಿಂದ ನಿರ್ಮಾಣ ಮಾಡುತ್ತಿದ್ದರೆ ಎಂದು ಕಾಮಗಾರಿ ನೆಡೆಯುತ್ತಿದ್ದ ಸ್ಥಳದಲ್ಲಿಯೇ ಆರೋಪ ಮಾಡಿದರು.
ಜೆಲ್ಲಿ ರೋಲ್ ಮಾಡಿಲ್ಲ:- ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಹಾಕಿರುವ ಜಲ್ಲಿ ಪ್ರಮಾಣ ಕಡಿಮೆ ಇದೆ ಹಾಗೂ ಜಲ್ಲಿಗೆ ನೀರು ತಣಿಸಿ ರೋಲ್ ಮಾಡಿದ ನಂತರ ಕಾಂಕ್ರೀಟ್ ಹಾಕಬೇಕೆಂಬ ನಿಯಮ ಇದ್ದರು ಗುತ್ತಿಗೆದಾರ ನಿಯಮ ಪಾಲನೆ ಮಾಡದೆ ಬೇಕಾ ಬಿಟ್ಟಿ ಕೆಲಸ ಮಾಡುತ್ತಿದ್ದರು ಕಂಡರು ಕಾಣದಂತ್ತೆ ಇರುವ ಮೂಲಕ ಇಂಜಿನಿಯರ್ ಶಬರೀಶ್ ಗುತ್ತಿಗೆದಾರನಿಗೆ ನೇರವಾಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಸ್ಟೀಲ್ ಬಳಕೆಯಲ್ಲಿ ಲೋಪ:- ಕಾಂಕ್ರೇಟ್ ರಸ್ತೆಗೆ ಬಳಕೆ ಮಾಡಿರುವ ಸ್ಟೀಲ್ ಅಂದಾಜು ಪಟ್ಟಿಯಲ್ಲಿ ನಮೋದಿಸಿರುವಂತ್ತೆ ಬಳಸದೆ ತಿರ ಕಡಿಮೆ ಪ್ರಮಾಣದ ಸರಳುಗಳನ್ನು ಬಳಸಿದ್ದಾರೆ ಹಾಗೂ ಕಬ್ಬಿಣದ ಸರಳಗಳನ್ನು ತುಂಬಾ ವಿಸ್ತಾರವಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಮೂಲಕ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂಬುವುದು ಅವರ ಅರೋಪವಾಗಿದೆ.
ಸಿಮೆಂಟ್ ಬಳಕೆ ನಿಗದಿತ ಪ್ರಮಾಣದಲ್ಲಿ ಇಲ್ಲ:- ಜೆಲ್ಲಿ ಪುಡಿ ( ಡೆಸ್ಟ್) ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿ ಸಿಮೆಂಟ್ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಈ ರಸ್ತೆ ಒಂದು ತಿಂಗಳು ಕೂಡ ಬಾಳಿಕೆಗೆ ಬರದೆ ಕಿತ್ತು ಹೋಗುತ್ತದೆ ಈ ಬಗ್ಗೆ ಗುತ್ತಿಗೆದಾರನಿಗೆ ಅಂದಾಜು ಪಟ್ಟಿಯಲ್ಲಿರುವಂತ್ತೆ ಕಾಮಗಾರಿ ನೆಡಸಿ ಎಂದರೆ ಗುತ್ತಿಗೆದಾರ ಇಂಜಿನಿಯರ್ ಅತ್ತ ಬೊಟ್ಟು ಮಾಡಿ ತೋರಿಸುವ ಮೂಲಕ
ನುಂಗಣ್ಣನ ಕೆಲಸದಲ್ಲಿ ನಿರತನಾಗಿದ್ದಾನೆ ಹಾಗೂ ಈ ಗುತ್ತಿಗೆದಾರನಿಗೆ ಯಾವ ಅಧಿಕಾರಿಯ ಭಯವಿಲ್ಲ ಎಂಬುವುದು ಆತನ ಬೇಜವಬ್ದಾರಿತನ ವರ್ತನೆಯಿಂದ ತಿಳಿಯುತ್ತದೆ ಎಂದು ದೂರುತ್ತಿದ್ದಾರೆ.
ಇಂಜಿನಿಯರ್ ರವರು ಗುತ್ತಿಗೆ ದಾರನ ಪರವಾಗಿದ್ದಾರೆ:- ಕಾಮಗಾರಿ ಗುಣಮಟ್ಟ ನೋಡಿಕೊಳ್ಳುವ ಜವಬ್ದಾರಿ ಹೊತ್ತಿರುವ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರವರು ಗುತ್ತಿಗೆದಾರನ ಪರವಾಗಿ ನಿಂತ್ತಿರುವುದು ಗುತ್ತಿಗೆದಾರ ಮತ್ತಷ್ಟು ಕಳಪೆ ಕಾಮಗಾರಿ ನೆಡಸಲು ವರದಾನವಾಗಿದೆ ನಾವು ಕಾಮಗಾರಿ ಬಗ್ಗೆ ಏನೆ ದೂರಿದರು ಇಂಜಿನಿಯರ್ ನಮ್ಮ ದೂರಿಗೆ ಗಮನ ಕೂಡುತ್ತಿಲ್ಲ ಗುತ್ತಿಗೆದಾರನೆ ಸರಿ ಅನ್ನುವು ಮೂಲಕ ಸಮರ್ಥನೆ ಮಾಡುತ್ತಿದ್ದಾರೆ, ಕಳೆಪೆ ಕಾಮಗಾರಿಯನ್ನ ಗುಣ ಮಟ್ಟದ ಕಾಮಗಾರಿ ಎಂದು ಸಮರ್ಥಿಸಿಕೊಳ್ಳಲು ಗ್ರಾ.ಪಂ.ಸದಸ್ಯಣಿಯವರ ಪತಿಯನ್ನು ಬಳಸಿಕೊಂಡು ಸರ್ವಧಿಕಾರಿಯಾಗಿ ವರ್ತಿಸುತ್ತಿದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರ ಹಾಗೂ ಇಂಜಿನಿಯರ್ ಮೇಲೆ ಕ್ರಮವಹಿಸಬೇಕು:- ಕಳಪೆ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಗುತ್ತಿಗೆದಾರ ಮಹದೇವ್ ಮೇಲೆ ಕ್ರಮವಹಿಸುವುದರ ಜೊತೆಗೆ ಆತನ ಲೈಸೆನ್ಸ್ ನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಗುತ್ತಿಗೆದಾರನಿಗೆ ಸಹಕಾರ ನೀಡಿರುವ ಇಂಜಿನಿಯರ್ ಶಬರೀಶ್ ಮೇಲೆ ಇಲಾಖಾ ತನೆಕೆ ನೆಡಸಿ ಕ್ರಮ ವಹಿಸುವಂತ್ತೆ ಒತ್ತಾಯಮಾಡುತ್ತೇನೆ ಎಂದರು.
ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ:- ಕಳಪೆ ಕಾಂಕ್ರೀಟ್ ರಸ್ತೆ ನಿರ್ಮಾಣದ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಹಾಗೂ ರಸ್ತೆಯ ಗುಣಮಟ್ಟವನ್ನು ಪರಿಶೀಲನೆ ಮಾಡುವಂತ್ತೆ ಮನವಿ ಕೂಡ ಮಾಡುತ್ತೇನೆ ಒಂದು ವೇಳೆ ಅಧಿಕಾರಿಗಳು ನನ್ನ ದೂರಿಗೆ ಸ್ಪಂದಿಸದಿದ್ದಲ್ಲಿ ಲೋಕಯುಕ್ತಕ್ಕೆ ದೂರು ಸಲ್ಲಿಸುತ್ತೇನೆ ಎಂದರು.