“ಕಲ್ಪನೆಗೂ ಮೀರಿದ್ದು ಈ ಬದುಕು” : heggaddesamachar.com

Spread the love

ನಾನು ನನ್ನದು ಎಂದು ಬದುಕುತ್ತಿದ್ದವರು ಹಣ ಆಸ್ತಿಯ ಸಂಪಾದನೆಗೆ ಊರುಕೇರಿ ಮನೆ-ಮನವನ್ನು ಬಿಟ್ಟುಹೋಗಿದ್ದರು ಸಮಯದ ಅಭಾವದಿಂದ ಮನಸ್ಸಿನ ಒತ್ತಡವನ್ನು ಹೆಚ್ಚಿಸಿಕೊಂಡು ಮನೆಯರೊಡನೆ ಕಾಲ ಕಳೆಯದೆ ಪ್ರೀತಿ ವಾತ್ಸಲ್ಯದ ಅತ್ಯಮೂಲ್ಯ ಸಮಯಗಳನ್ನು ಕಳೆದುಕೊಂಡಿದ್ದರು. ನಾನು ಎಂಬ ಸ್ವಾರ್ಥದ ಬದುಕಿನಲ್ಲಿ ತನ್ನ ಸುತ್ತಮುತ್ತಲಿನವರನ್ನು ಮತ್ತು ನಿಷ್ಕಲ್ಮಶವಾದ ಪರಿಸರವನ್ನು ಕಲ್ಮಶವ ಮಾಡಿ ಹೋಗುತ್ತಿದ್ದರು.
ಹಣವೆಂಬ ಹುಚ್ಚು ಕುದುರೆಯ ಹಿಂದೆ ಬೆನ್ನತ್ತಿ ಸಾಂಪ್ರದಾಯಿಕ ಜೀವನವನ್ನು ತೊರೆದು ಬಿಟ್ಟಿದ್ದರು ಹಳ್ಳಿ ಸೊಗಸು, ಅಜ್ಜಿಕಥೆ, ಮುದ್ದೆ ಊಟದ ಸವಿ ರುಚಿಯನ್ನು ಒಳಗೊಂಡ ತನ್ನತನವನ್ನು ಕಳೆದುಕಂಡಿದ್ದರು. ದುಡ್ಡೆ ಪ್ರಪಂಚ ದುಡ್ಡಿದ್ದರೆ ಭಗವಂತನನ್ನು ಕೊಂಡುಕೊಳ್ಳ ಬಹುದು ಎಂದುಕೊಂಡಿದ್ದರು
ಪ್ರಕೃತಿಗೆ ಹಾನಿ ಮಾಡಿ ಗಿಡ ಮರಗಳನ್ನು ಕಡಿದು ಮಹಡಿ ಮೇಲೆ ಮಹಡಿ ಕಟ್ಟಿಸಿಕೊಂಡು ಕೃಷಿಯನ್ನು ಮರೆತುಬಿಟ್ಟಿದ್ದರು.

ಆದರೆ ಪ್ರಕೃತಿಯೇ ನಮಗೆಲ್ಲ ಈಗ ಪಾಠ ಕಲಿಸುತ್ತಿದೆ ,ಏಕೆ ಅಂತ ನಮಗೆಲ್ಲ ಈಗಾಗಲೇ ತಿಳಿದಿದೆ.
ದುಡ್ಡೇ ದೊಡ್ಡಪ್ಪ ಎಂದವರು ಈಗ ಬದುಕಿದರೆ ಸಾಕಪ್ಪ ಎಂದು ಹೆಡೆಮುರಿ ಕಟ್ಟಿ ಕೊಂಡು ಊರಿಗೆ ಬಂದು ಸೇರಿಕೊಳ್ಳುತ್ತಿದ್ದಾರೆ.

ಮಾತನಾಡಲು ಸಮಯವಿಲ್ಲ ನನ್ನ ಭಾವನೆಗಳನ್ನು ಹಂಚಿಕೊಳ್ಳೋಣ ಎಂದರೆ ಕೇಳಲು ಒಂದು ಮನಸ್ಸಿಲ್ಲ ಎನ್ನುವ ಎಷ್ಟೋ ಮನಸ್ಸುಗಳಿಗೆ ಈಗ ತುಂಬಾ ಸಮಯ ಸಿಕ್ಕು ಪ್ರೀತಿ-ವಿಶ್ವಾಸದಿಂದ ತಮ್ಮ ಭಾವನೆಗಳನ್ನು ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ .

ಎಷ್ಟೋ ಪುರುಷರ ಪಾಲಿಗೆ ಕೈಗೆ ರಿಮೋಟ್ ಸಿಗುವುದೇ ಕಷ್ಟವಾಗಿತ್ತು ಆದರೆ ಈಗ ಅವರೇ ರಿಮೋಟ್ ಅನ್ನು ಎತ್ತಿಟ್ಟು ಮನೆ ಮಂದಿಯೊಡನೆ ಮಾತನಾಡಲು ಬಯಸುತ್ತಿದ್ದಾರೆ.

ವಿದೇಶಿ ಅಡುಗೆಗೆ ಮಾರು ಹೋಗಿದ್ದವರಿಗೆ ಸ್ವದೇಶದ ಊಟದ ಬೆಲೆ ತಿಳಿದಿದೆ. ಅಯ್ಯೋ ಒಂದು ಸಾರಿಯಾದರೂ ಈ ಪರೀಕ್ಷೆ ಇಲ್ಲದೆ ಉತ್ತೀರ್ಣರಾಗ ಬೇಕು ಎಂದು ಎಷ್ಟೋ ಮಕ್ಕಳು ಬೇಡಿಕೊಳ್ಳುತ್ತಿದ್ದರು, ಈಗ ವಿದ್ಯಾರ್ಥಿಗಳಿಗೆ ಬೆಲ್ಲವೆ ಸಿಕ್ಕಂತಾಗಿದೆ ಅವರ ಕೋರಿಕೆಯನ್ನು ಕೇಳಿಸಿಕೊಂಡ ಭಗವಂತನು ಈ ಸಲ ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳು ಉತ್ತೀರ್ಣರಾಗಿಸಿದ್ದಾನೆ.ಎಷ್ಟೋ ಮಹಿಳೆಯರು ಹುಡುಗಿಯರು ಕೆಲವು ಹುಡುಗರು ಅಡುಗೆ ಮನೆ ಕಡೆ ಹೋಗಿ ಹಲವಾರು ಹೊಸ ಹೊಸ ಅಭಿರುಚಿಯನ್ನು ತಯಾರಿಸಿ ಮನೆಯ ಮುಂದೆ ಹಂಚಿಕೊಂಡರು ಪ್ರೀತಿಯಿಂದ ತಿಂದು ವಾಟ್ಸಪ್ ಸ್ಟೇಟಸ್ ಹಾಕುತ್ತಿದ್ದಾರೆ.

ಹಳೆಯ ಕಾಲದ ಊಟ ಲಾಲನೆ-ಪಾಲನೆಗಳು ಮತ್ತೆ ಶುರುವಾಗಿದೆ ,ಕೈ ಕುಲುಕಿದವರು ಕೈಮುಗಿದು ಮಾತನಾಡುತ್ತಿದ್ದಾರೆ.

ಹಳ್ಳಿ ಸೋಗಸು ಬಾಲ್ಯದಲ್ಲಿ ಕಳೆದ ಹಳೆಯ ನನೆಪುಗಳನ್ನು ಮತ್ತೆ ಮೆಲುಕು ಹಾಕುವ ಅವಕಾಶ ಸಿಕ್ಕಿದೆ ಊರಿನಲ್ಲಿ ಒಂದು ವಾರವೇ ಇರುವುದು ಹೆಚ್ಚಾಗಿತ್ತು ಎಂದವರಿಗೆ ತಿಂಗಳಾನುಗಟ್ಟಲೆ ಮನೆಯಲ್ಲಿ ಕಾಲ ಕಳೆಯುವಂತಾಗಿದೆ.

ದುಡ್ಡಿಗೋಸ್ಕರ ಬದುಕುತ್ತಿದ್ದವರಿಗೆ ಆರೋಗ್ಯಕ್ಕಾಗಿ ಬದುಕಬೇಕು ಎಂದು ತಿಳಿಸಿಕೊಟ್ಟಿದೆ.ಇಷ್ಟಾದಮೇಲೂ ಕೆಲವು ಜನಗಳಿಗೆ ಇನ್ನು ಬುದ್ಧಿ ಬಂದಿಲ್ಲ, ಕೋತಿ ತಾನು ಕೆಡುವುದಲ್ಲದೆ ಇಡೀ ವನವನ್ನೆ ಕೆಡಿಸಿದಂತೆ, ತಾವು ಸಾಯುವುದಲ್ಲದೆ ತಮ್ಮ ಜೊತೆಗಿದ್ದವರನ್ನು ಸಾಯಿಸುತ್ತಿದ್ದಾರೆ .

ಯಾರೋ ಮಾಡಿದ ತಪ್ಪಿಗೆ ಎಷ್ಟೋ ಜೀವಗಳು ಬಲಿಯಾಗುತ್ತಿವೆ ,ಒಂದು ಹೊತ್ತಿನ ಊಟಕ್ಕಾಗಿ ದಿನವೆಲ್ಲಾ ದುಡಿಯುತ್ತಿದ್ದವರ ಪಾಲಿಗೆ ಮುಳ್ಳಾಗಿ ಬಿಟ್ಟಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದ್ದರು ಇನ್ನು ಹಲವಾರು ಜನರು ಹದ್ದುಬಸ್ಥಿನಲ್ಲಿರದೆ ಹೊರಗೆಲ್ಲ ಕಾರಣವಿಲ್ಲದೆ ತಿರುಗಾಡುತ್ತಿದ್ದಾರೆ .

ವಿದ್ಯಾವಂತರೇ ಬುದ್ದಿ ಇಲ್ಲದಂತಾಡಿದರೆ ಹೇಗೆ?.
ಇದು ಪ್ರಕೃತಿ ನಮಗೆ ಕೊಟ್ಟಿರುವ ಅವಕಾಶ ನಿಮಗೆ ಬದುಕಲು ಇಷ್ಟವಿಲ್ಲದಿದ್ದರೆ ನೀವು ಮಾತ್ರ ಸಾಯಿರಿ ನಿಮ್ಮನ್ನು ನಂಬಿದ ಕುಟುಂಬವನ್ನು ನೀವು ಬದುಕುತ್ತಿರುವ ವಾತಾವರಣವನ್ನು ಸಾವಿನ ದವಡೆಗೆ ನೂಕಬೇಡಿ.

ಕಲ್ಪನೆಗೆ ಮೀರಿದ್ದು ಈ ಬದುಕು
ನೀನು ನಿನಗಾಗಿ ನಿಮ್ಮ ಮನೆಯವರಿಗಾಗಿ ಶರತ್ತುಗಳನ್ನು ಪಾಲನೆ ಮಾಡಬೇಕು
ಆರೋಗ್ಯದ ಸಮಸ್ಯೆ ಬಂದರೆ ತಕ್ಷಣ ದವಾಖಾನೆಗೆ ಹೋಗಿ ತೋರಿಸಿಕೊಳ್ಳಬೇಕು.

ಮೆರೆಯಬೇಡವೋ ಮನುಜ ಬಹಳ ದಿನ
ಬಂದಿದೆ ನಿನ್ನ ಬದುಕಿನ ಪಾಲಿಗೆ ಕೊನೆಯ ದಿನ.

ಉಷಾ ಹೆಚ್ ವೈ
ಇಟ್ಟಿಗೆಹಳ್ಳಿ

One thought on ““ಕಲ್ಪನೆಗೂ ಮೀರಿದ್ದು ಈ ಬದುಕು” : heggaddesamachar.com”

Leave a Reply

Your email address will not be published. Required fields are marked *