Literature (ಸಾಹಿತ್ಯ)

ಕರಗಿ ಕೊರಗುವ ಕಾರ್ಮಿಕ ದಿನ : heggaddesamachar.com

Spread the love

ಕೆಲಸ ಕಾರ್ಯಗಳು ನಡೆಯದೆ ಜೀವನ ಮುಂದೆ ಸಾಗದು, ಜೀವನೋಪಾಯಕ್ಕಾಗಿ ಧನ ವಿನಿಯೋಗಿಸಬೇಕು, ಆದರೆ ಅದು ಒಂದು ಪುಟ್ಟ ಸಸಿ ನೆಟ್ಟು, ಅದು ಹೆಮ್ಮರವಾಗಿ ಬೆಳೆದು, ಆ ಮರದಿಂದ ದರ ಪಡೆಯಲು ಸಾಧ್ಯವಿಲ್ಲ… ಅದಕ್ಕಾಗಿ ಕೆಲಸಗಳನ್ನು ಹುಡುಕುತ್ತಾ, ಆ ಕೆಲಸಗಳನ್ನು ಕಾರ್ಯರೂಪಕ್ಕೆ ತಂದು, ಅದಕ್ಕೆ ಸಂಬಳ ಎಂಬಂತೆ ದರ ನಿಗದಿ ಮಾಡಿ, ಆ ಮೂಲಕ ಹಣ ಸಂಪಾದನೆ ಮಾಡುವ ಒಂದು ಯೋಚನೆ ಮನುಜನಿಗೆ ಲಭಿಸಿತು. ಇದರಿಂದ ಹಣದ ಬೆನ್ನ ಹಿಡಿದ ಮನುಜ ಹಣದಿಂದಲೇ ಎಲ್ಲವೂ ಸಾಧ್ಯ! ಹಣವಿಲ್ಲದಿದ್ದರೆ ಶೂನ್ಯ ಎನ್ನುವ ಪ್ರಸ್ತುತ ಜಗತ್ತಿನ ಕಲಿಯುಗದಲ್ಲಿ ನಾವಿದ್ದೇವೆ.
ಹಿರಿಯರಾದವರು ಒಂದಿಷ್ಟು ಯೋಚನೆಯನ್ನು ಮಾಡಿ ಒಂದು ದಿನದ ಎಂಟು ಗಂಟೆಯ ಕಾಲ, ವರ್ಷದಲ್ಲಿ ಒಂದು ದಿನ ಅದನ್ನು ಕಾರ್ಮಿಕ ದಿನ ಎಂದು ಆಚರಿಸುವಂತೆ ಮುನ್ನುಡಿ ಹಾಡಿದರು.
ಅಂದಿನಿಂದ ಇಂದಿನವರೆಗೆ ಕಾರ್ಮಿಕ ದಿನ MAY DAY (MAY 1) ಎಂದು ಅಚರಿಸುತ್ತಾ ಬಂದಿದ್ದೇವೆ.
ಬಿಡುವಿಲ್ಲದೆ ದುಡಿಯುವ ಜೀವಗಳಿಗೂ, ಬಿಡುವಿನ ಸಮಯ ಸಿಗುವಂತಿರಲಿ… ಎಂಬ ಯೋಚನೆಯೂ ಇರಬಹುದು, ಕೆಲಸ ಕೆಲಸ ಎಂದು ಸೋತು ಕರಕಲಾದ ಜೀವಗಳಿಗೆ ಒಂದು ದಿನ ಮಿಸಲಿರಲಿ ಎಂಬ ಅಶಾಭಾವವೂ ಇರಬಹುದು!!!

ಇಪ್ಪತ್ತನೇ ಶತಮಾನದ ಹೊಸ್ತಿಲಲ್ಲಿ ನಿಂತ ನಾವು,
ಇಂದಿನ ದಿನ ನಮ್ಮ ಆರೋಗ್ಯಕ್ಕಾಗಿ, ನಮ್ಮ ಹಿತರಕ್ಷಣೆಗಾಗಿ, ನಮಗಾಗಿಯೇ ಹೆಚ್ಚುಕಡಿಮೆ ಒಂದು ತಿಂಗಳುಗಳಿಂದ ಮನೆಯಲ್ಲೇ ಇದ್ದೇವೆ.
ಪ್ರಾಣದ ಹಂಗು, ಆರೋಗ್ಯದ ಗುಂಗು ಎಂಬಂತೆ.
ಆದರೆ ಕೊರೋನಾ ಮಹಾಮಾರಿಗೆ ಇಡೀ ವಿಶ್ವವೇ ದಂಗಾಗಿ ಬಿಟ್ಟಿದೆ, ಪ್ರತಿಯೊಬ್ಬರೂ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು, ಧನ ಲಾಭದ ಮೇಲಿನ ಮೋಹವನ್ನು ಬಿಟ್ಟು, ಸುರಕ್ಷಿತವಾಗಿ ಜಾಗರೂಕರಾಗಿದ್ದಾರೆ…
ಆದರೆ ಎಲ್ಲೋ ಒಂದಿಷ್ಟು ಮಂದಿ ನಾನೊಬ್ಬನೇ ಸಾಯೋದ್ಯಾಕೆ ಅಳಿಯುವುದಾದರೆ ಇಡೀ ಜಗತ್ತೇ ಅಳಿಯಲಿ ಎಂಬ ಯೋಚನೆ ಅವರಿಗೆ ಬಂದಿದೆಯೋ ಏನು ಗೊತ್ತಿಲ್ಲ, ಊರುಪೂರಾ ಸುತ್ತುತ್ತಾ ರಾಜರೋಷವಾಗಿ ತಿರುಗುವವರೂ ಇದ್ದಾರೆ. ಕೊರೋನಾ ಬಂದ್ರೆ ಏನಂತೆ ಏನು ಆಗಿಲ್ಲ, ಮಾಮೂಲಿ ಜ್ವರ ಎಂಬಂತೆ ವರ್ತಿಸುವಂತೆ ಕಾಣ್ತಿದೆ.
ಅತ್ತ ಕಡೆ ಪೋಲಿಸರು ಕಿರುಚಾಡಿ, ಬುದ್ದಿ ಮಾತು ಹೇಳಿ, ಕಿವಿಮಾತು ಹೇಳಿ, ಧ್ವನಿಯಾಗಿ ದಣಿದು ಸವೆದು ಹೋಗ್ತಾ ಇದ್ದಾರೆ,
ಇನ್ನೊಂದೆಡೆ ವೈದ್ಯಲೋಕ ಸಾವಿನ ಅಂಚಿನಲ್ಲಿ ನಿಂತು, ಒಂದಷ್ಟು ಜಾಗರೂಕತೆಗಳನ್ನು ಪಾಲಿಸಿ, ಹಗಲು ರಾತ್ರಿ ಎನ್ನದೆ ದುಡಿದು, ನಮ್ಮ ಆರೋಗ್ಯದ ರಕ್ಷಣೆಗಾಗಿ ನಿಂತಿದ್ದಾರೆ.
ಇನ್ನೊಂದಿಷ್ಟು ಶ್ರಮಿಕ ವರ್ಗ ಮಾಹಿತಿ ಕಲೆಹಾಕಿ, ಸುದ್ದಿ ಮಾಧ್ಯಮದೊಂದಿಗೆ ಧ್ವನಿಯನ್ನು ಮತ್ತೆ ಮತ್ತೆ ಕಿವಿಮಾತಾಗಿ, ಬಡಿದೆಬ್ಬಿಸುವ ಸುತ್ತೋಲೆಯನ್ನು ಹೊರಡಿಸುವ ಕಾರ್ಯದಲ್ಲಿ ತೊಡಗಿರುವ ಮಾಧ್ಯಮಗಳು, ಸಾವು ಎಷ್ಟು ಹತ್ತಿರದಲ್ಲಿ ಇದೆ ಎಂಬುದನ್ನು ಭಿನ್ನ ವಿಭಿನ್ನವಾಗಿ ಅರ್ಥ ಮಾಡಿಸುತ್ತಿರುವ ಇವರು.
ಇವರು ಇಂದು ಒಂದು ದಿನ ಕಾರ್ಮಿಕ ದಿನ ಎಂದು ಮನೆಯಲ್ಲಿ ಕೂತರೆ,
ಇವೆರೆಲ್ಲಾ ಬೇಡ!!!
ವೈದ್ಯಲೋಕ ಮತ್ತು ಸೈನಿಕ ವರ್ಗ ಒಂದು ದಿನ ವಿರಾಮಕ್ಕಾಗಿ?, ವಿಶ್ರಾಂತಿಗೆಂದು ಎಂಟು ಗಂಟೆಗಳ ಕಾಲ ಮನೆಯಲ್ಲಿ ಕುಳಿತರೆ ???
ನಾಳೆಯ ದಿನವನ್ನು ನಾವ್ಯಾರೂ ಕಾಣುವುದಕ್ಕೆ ಸಾಧ್ಯನೇ ಇಲ್ಲಾ…!!!
ದೇಶ ಪರದೇಶಿಯಾಗಿ ನಿಲ್ಲಬಹುದು,
ಜೀವನ್ಮರಣದ ನಡುವೆ ದೇಹಗಳು ಬರಡಾಗಬಹುದು…

ಇನ್ನಾದರೂ ಕೊರೋನಾದ ಬಗೆಗೆ ಎಚ್ಚೆತ್ತುಕೊಳ್ಳಬೇಕಿದೆ.
ನಮ್ಮ ಆರೋಗ್ಯ, ನಮ್ಮ ಕುಟುಂಬ, ನಮ್ಮ ಸಮಾಜ, ನಮ್ಮ ದೇಶದ ಆಯಸ್ಸು ನಮ್ಮ ಕೈಯಲ್ಲಿದೆ.

:ಅತ್ರಿ

Leave a Reply

Your email address will not be published. Required fields are marked *