News (ಸುದ್ದಿ)
ಕಬಿನಿ ಜಲಾಶಯ ಹಿನ್ನಿರಿನಲ್ಲಿ ಸ್ಥಳೀಯ ಮೀನುಗಾರರಿಗೆ ಲೈಸೆನ್ಸ್ ಕೊಡಿಸಬೇಕೆಂಬ ಒತ್ತಾಯ: heggaddesamachar

ಕಬಿನಿ ಜಲಾಶಯ ಹಿನ್ನಿರಿನಲ್ಲಿ ಸ್ಥಳೀಯ ಮೀನುಗಾರರಿಗೆ ಲೈಸೆನ್ಸ್ ಕೊಡಿಸಬೇಕೆಂಬ ಒತ್ತಾಯ. 35 ಹಳ್ಳಿ ಕುಟುಂಬಸ್ಥರಿಗೆ ಲೈಸೆನ್ಸ್ ನೀಡಿ.
ಕಬಿನಿ ಗಿರಿಜನ ಮೀನುಗಾರರ ಸಹಕಾರ ಸಂಘ ಈ ಹಿಂದೆ 2011 ರಿಂದ 16 ರವರಗೆ ಗುತ್ತಿಗೆ ಪಡೆದಿತ್ತು. ಮೀನು ಹಿಡುವಳಿಯ ಲೆಕ್ಕ ಪತ್ರ ನಿರ್ವಹಣೆ ಮಾಡದೇ ಆಡಳಿತ ಮಂಡಳಿಯು ಅವ್ಯವಹಾರ ನಡೆಸಿದ್ದಾರೆ.
15 ವರ್ಷಗಳಿಂದ ಅಕ್ರಮವಾಗಿ ಗುತ್ತಿಗೆ ತೆಗೆದುಕೊಂಡು ಸ್ಥಳೀಯ ಮೀನುಗಾರಿಗೆ ಮೋಸ ಮಾಡಿದ್ದಾರೆ.

ಹಾಲಿ ಅಧ್ಯಕ್ಷ ಎನ್.ನಂಜೇಗೌಡ ವಿರುದ್ದ ಆರೋಪ. ಸ್ಥಳಿಯ ಎಂ ಎಲ್ ಎ ಕೂಡ ಸಪೋರ್ಟ್ ಮಾಡುತ್ತದೆ. ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಲ್ಲಿ ಮೀನುಗಾರಿಕೆ ನಿಯಮಾವಳಿಯಂತೆ ಸ್ಥಳೀಯ ಮೀನುಗಾರರಿಗೆ ಪರವಾನಿಗೆ ನೀಡಿವಂತೆ ಸಚಿವ ಕೋಟ ಶ್ರೀನಿವಾಸ್ ಗೆ ಮನವಿ ಮಾಡಿದ್ದೇವೆ.

ಸ್ಥಳೀಯ ಮೀನುಗಾರರ ಹಿತದೃಷ್ಟಿಯಿಂದ ಕೆ.ಆರ್.ಜಲಾಶಯ,ಹೇಮಾವತಿ ಜಲಾಶಯ ಇನ್ನತರ ಜಲಾಶಯ ನಿಯಮಾವಳಿಯಂತೆ ಸ್ಥಳೀಯ ಮೀನುಗಾರರಿಗೆ ಲೈಸೆನ್ಸ್ ನೀಡಬೇಕು ಅಧ್ಯಕ್ಷ ಜಗದೀಶ್ ಗೌಡ ಮನವಿ. ರಜೀನಿ ಕಾಂತ್,ಮಾಜಿ ಅಧ್ಯಕ್ಷ ಚನ್ನಪ್ಪ, ಭಾಗಿ.