News (ಸುದ್ದಿ)

ಕಪಾಲಿ ಮೋಹನ್ ಆತ್ಮಹತ್ಯೆ | heggaddesamchar.com

Spread the love

ಬೆಂಗಳೂರು : ಕನ್ನಡ ಚಿತ್ರರಂಗದ ಜೊತೆ ನಿಕಟ ಸಂಪರ್ಕ ಹೊಂದಿದ್ದ ಉದ್ಯಮಿ ಹಾಗೂ ಫೈನಾನ್ಷಿಯರ್ ಕಪಾಲಿ ಮೋಹನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನ ಗಂಗಮ್ಮನ ಗುಡಿ ಪೋಲಿಸ್ ಠಾಣೆಯ ವ್ಯಾಪ್ತಿಯ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೀಣ್ಯ ಸಮೀಪದ ಬಸವೇಶ್ವರ ಬಸ್ ಟಮಿರ್ನಲ್ ಬಳಿಯಿರುವ ಸುಪ್ರೀಂ ಹೋಟೇಲ್ ನಲ್ಲಿ ರಾತ್ರಿ ರೂಮ್ ಪಡೆದಿದ್ದ ಅವರು ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು ಈಗ ಬೆಳಕಿಗೆ ಬಂದಿದೆ.
ಕಪಾಲಿ ಮೋಹನ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ 2018ರಲ್ಲಿ ಸಿಸಿಬಿ ಪೋಲಿಸರು ಮತ್ತು 2019ರಲ್ಲಿ ಐಟಿ ಅಧಿಕಾರಿಗಳು ಇವರ ಮನೆ ಹಾಗೂ ಕಛೇರಿ ಮೇಲೆ ಏಕಕಾಲದಲ್ಲಿ ದಾಳಿ ಮಾಡಿ ನಗದು ಹಾಗೂ ಕೆಲದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಇತ್ತೀಚೆಗಷ್ಟೆ ತಮ್ಮ ಮಗಳ ಮದುವೆಯನ್ನು ಮಾಡಿದ್ದರು.

ರೀ. ಹೆಗ್ಗದ್ದೆ ಸಮಾಚಾರ್

Leave a Reply

Your email address will not be published. Required fields are marked *