News (ಸುದ್ದಿ)
ಕನ್ನಡದ ಬಿಗ್ ಬಾಸ್ ನಲ್ಲಿ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹ್: heggaddesamachar.com

ಹೌದು… ಅತೀ ಹೆಚ್ಚು ಟಿ.ಆರ್.ಪಿ ಇರುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೭ರ ಕಿಚ್ಚ ಸುದೀಪ್ ರ ವಾರದ ವಿಕೆಂಡ್ ಶೋ ನಲ್ಲಿ ಸಲ್ಮಾನ್ ಖಾನ್ ಮತ್ತವರ ತಂಡ ಭಾಗವಹಿಸಿದ್ದು, ಈ ವಾರ ಅವರು ನಿಮ್ಮ ಮನೆಗೆ ಬರಲಿದ್ದಾರೆ.
ಅಂದಹಾಗೆ ಅವರು ಕಾಣಿಸಿಕೊಳ್ಳುತ್ತಿರುವುದು ಬಿಗ್ ಬಾಸ್ ಸ್ಟೇಜ್ ನಲ್ಲೇ ಆದರೂ ಅದು ಮುಂಬೈಯಿಂದ ಲೈವ್ ಆಗಿ, ಹಿಂದಿ ಬಿಗ್ ಬಾಸ್ ವೇದಿಕೆಯಿಂದ, ಇಲ್ಲಿನ ಕನ್ನಡದ ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ರವರ ಜೊತೆ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡು ನಿಮ್ಮನ್ನ ರಂಜಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಕಿರುತೆರೆ ಇಂತಹದ್ದೊಂದು ಹೊಸ ಪ್ರಯತ್ನಕ್ಕೆ ತೆರೆದುಕೊಂಡಿದ್ದು, ವಾರದ ಕಥೆಯಲ್ಲಿ ದಬಾಂಗ್ ೩ ಚಿತ್ರದ ಪ್ರಮೋಷನ್ ಗೆ ಈ ಪ್ರಯತ್ನ ಎನ್ನಲಾಗಿದೆ.
ಅಂದಹಾಗೆ ದಬಾಂಗ್ ೩ ಚಿತ್ರ ಇದೇ ೨೦ ಕ್ಕೆ ತೆರೆಕಾಣುತ್ತಿದ್ದು, ಸಲ್ಮಾನ್ ಜೊತೆ ಸುದೀಪ್ ತೆರೆ ಹಂಚಿಕೊಂಡಿದ್ದಾರೆ.