News (ಸುದ್ದಿ)

ಕಣ್ಣಿಗೆ ಕಾಣದು ಕೊರೊನಾ…ನಾವೆಲ್ಲ ಮನೆಯಲ್ಲಿ ಇರೋಣ… – ಮೈಸೂರಿನ ಪೋಲಿಸರೊಬ್ಬರ ಕೋರೊನಾ ಜಾಗೃತಿ ಹಾಡು : heggaddesamachar.com

Spread the love

ಕಣ್ಣಿಗೆ ಕಾಣದು ಕೊರೊನಾ……ನಾವೆಲ್ಲ ಮನೆಯಲ್ಲಿ ಇರೋಣ…….
ಜನ ಸಂಪರ್ಕ ನಿಲ್ಲಿಸೋಣ ದೂರ ಇರೋಣ….. ತೊಲಗಲಿ ಈ ಕ್ರೂರಿ ಕೊರೋನಾ…….

ಎಂದು ಕೊರೊನಾ ವಿರುದ್ದ ಹೋರಾಟ ನಡೆಸುತ್ತಾ ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರಿನ ಪೋಲಿಸರೊಬ್ಬರು ಕೋರೊನಾ ಜಾಗೃತಿ ಹಾಡಿನ ಮೂಲಕ ಗಮನ ಸೆಳೆದಿದ್ದಾರೆ.

ಜಾಗೃತಿ ಹಾಡು ಹಾಡಿದವರು ಇನ್ಸ್ಪೆಕ್ಟರ್ ಸುರೇಶ್ ಕುಮಾರ್.ಇವರು ಮೈಸೂರಿನ ಲಷ್ಕರ್ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕೊರೊನಾ ಜಾಗೃತಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಸಖತ್ ವೈರಲ್ ಆಗುತ್ತಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಬೈಲು ನಿವಾಸಿ. ಕಡಬದ ದುರ್ಗಾಂಬಿಕಾ ಭಜನಾ ಮಂಡಳಿಯಲ್ಲಿ ಸುರೇಶ್ ಅವರು ಭಜನೆ ಹಾಡುಗಳನ್ನು ಹಾಡುತ್ತಿದ್ದರು.


1997ರಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡ ಸುರೇಶ್ ಕುಮಾರ್ ಕೋಡಿಬೈಲು ರವರು
ಮೈಸೂರು, ಚಿಕ್ಕಮಗಳೂರು, ಸೋಮವಾರಪೇಟೆ, ಗೋಣಿಕೊಪ್ಪ, ಶುಂಠಿಕೊಪ್ಪ,ಮೈಸೂರು ಲಷ್ಕರ್ ಪೋಲಿಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದವರು. 2016ರಲ್ಲಿ ಇನ್ಸ್ ಪೆಕ್ಟರ್ ಆಗಿ ಸೇವಾ ಭಡ್ತಿಗೊಂಡು ಚಾಮರಾಜನಗರ, ಜಯಲಕ್ಷ್ಮಿಪುರ (ಮೈಸೂರು) ಗಳಲ್ಲಿ ಕರ್ತವ್ಯ ಮಾಡಿದ್ದು ಪ್ರಸ್ತುತ ಮೈಸೂರಿನ ಲಷ್ಕರ್ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಶ್ವಿನಿ ಮುರಳಿ
ಹಾಡಿನ ರಚನೆ, ರಾಕೇಶ್ ಸುಧೀರ್ ಸಂಗೀತ
ನೀಡಿದ್ದಾರೆ.ಸಂಗೀತ ಸಂಯೋಜನೆಯನ್ನು ಸ್ಟಾಂಡ್ಲಿ ಪೀಟರ್, ವೀಡಿಯೋಗ್ರಾಫಿಯನ್ನು ಪವನ್ ಪ್ರಕಾಶ್ ಮಾಡಿದ್ದಾರೆ.ಕೊರೊನಾ ಜಾಗೃತಿ ಹಾಡು 3 ನಿಮಿಷ 44 ಸೆಕೆಂಡ್ ಇದೆ.

ಪೊಲೀಸ್ ಉನ್ನತ ಅಧಿಕಾರಿಗಳು
ಇನ್ಸ್ಪೆಕ್ಟರ್ ಸುರೇಶ್ ಕುಮಾರ್ ರವರ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *