“ಕಂದಮ್ಮ” ಕಿರುಚಿತ್ರ ವಿಮರ್ಶೆ : heggaddesamachar

– ಸಂದೀಪ್ ಶೆಟ್ಟಿ ಹೆಗ್ಗದ್ದೆ
ಹೀಗೆ ನೋಡಿದೆ… ಹಾಗೆ ಬರೆಯಬೇಕು ಅನ್ನಿಸ್ತಿದೆ, ಶ್ರಮಕ್ಕೆ ಶಹಬ್ಬಾಸ್ ಹೇಳಬೇಕೆನಿಸುತ್ತಿದೆ, ಹಾಗಾಗಿ ಬಹಳ ದಿನಗಳ ಬಳಿಕ ಕಿರುಚಿತ್ರವೊಂದರ ಬಗ್ಗೆ ಬರೆಯುತ್ತಿದ್ದೇನೆ…
“ಕಂದಮ್ಮ” ಕಿರು ಚಿತ್ರದ ಆರಂಭ ಹೇಗಿತ್ತೋ, ಅಂತ್ಯವೂ ಮನಕಲಕಿ, ಅರ್ಥವಂತಿಕೆಯ ತಿಳುವಳಿಕೆಯನ್ನ ಸಾರುವ ಸನ್ನಿಹಿತದಂತೆ ಕಂಡಿತು.
ಸಿನಿಮಾ ನಿರ್ದೇಶಕನ ಮಾಧ್ಯಮ. ಅದು ಚಿಕ್ಕದಿರಲಿ ದೊಡ್ಡದಿರಲಿ… ಇತ್ತೀಚಿನ ದಿನಮಾನಸದಲ್ಲಿ ಹೊಸ ಹುಡುಗರು ತಮ್ಮೊಳಗಿನ ಕಲೆಯನ್ನ ತಾವೇ ಸಾರುವ ಸಲುವಾಗಿ ಮಾಡುವ ಇಂತಹ ಪ್ರಯತ್ನದಲ್ಲಿ, ನಿರ್ದೇಶನ ಮತ್ತು ನಟನೆಯಲ್ಲಿ ಪ್ರಶಾಂತ್ ವಿ.ಯವರು ಪರಿಶ್ರಮದಾಯಕ ಪ್ರಶಂಸೆಗೆ ಅರ್ಹರಾಗಿದ್ದಾರೆ ಎನ್ನಬಹುದು.
ಇದು ಉತ್ಪ್ರೇಕ್ಷೆಯಲ್ಲ..! ಇಂತಹ ಘಟನಾವಳಿಗಳನ್ನ ನಾವೀಗಾಗಲೇ ಎಷ್ಟು ನೋಡಿರುತ್ತೇವೋ ತಿಳಿದೂ ಇರಲ್ಲ. ಆದರೆ ಮತ್ತೆ ಮತ್ತೆ ಕಂದಮ್ಮಗಳ ಅದರಲ್ಲೂ ಹೆಣ್ಣು ಮಕ್ಕಳ ಮೇಲಿನ ಈ ರೀತಿಯ, ಬಲಾತ್ಕಾರ, ಅತ್ಯಾಚಾರಗಳ ಅಸಹನೀಯ ವಿಚಾರವನ್ನ ಓರೆಗೆ ಹಚ್ಚಿ ನೋಡಿದಾಗ ಎಲ್ಲೋ ಒಂದು ಕಡೆ ನಮ್ಮನೆಯ ‘ಕಂದಮ್ಮ’ಗಳನ್ನ ನಾವೇ ಹೆಚ್ಚು ಜಾಗರೂಕರಾಗಿ ನೋಡಿಕೊಳ್ಳೋದು ಉತ್ತಮವೆನಿಸಲು ಇಂತಹ ಚಿತ್ರಗಳು ಸಾಥ್ ನೀಡುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.
ಈ ಕಿರು ಸಿನಿಮಾ ನೋಡ್ತಿರುವಾಗ ಬಹಳ ಮುಖ್ಯವಾಗಿ ಸಕ್ಸಸ್ ಕ್ರೆಡಿಟ್ ಸಲ್ಲಬೇಕೆನಿಸಿದ್ದು, ಸೌಂಡಿಂಗ್ ಮತ್ತು ವಿಡಿಯೋ ಎಡಿಟಿಂಗ್ ವಿಭಾಗಕ್ಕೆ… ಇದು ಟೆಕ್ಸಿಷಿಯನ್ಸ್ ಸಿನಿಮಾ ಅಲ್ಲದಿದ್ದರೂ 21 ನಿಮಿಷ ಜಾರಿದ್ದೇ ತಿಳಿಯದಂತೆ ಮಾಡಿದ, ಮ್ಯೂಸಿಕ್ ತಂಡದವರಿಗೆ, ಬಿ.ಜಿ.ಎಮ್ ಎಫರ್ಟ್ ಹಾಕಿದ್ದ ವಿಜೇತ್ ಮಂಜಯ್ಯಗೆ ಮತ್ತು ಫ್ರೇಮ್ ಟು ಫ್ರೇಮ್ ವರ್ಕ್ ಕ್ಯಾಚಿವ್ ಆಗಿ ನೀಟ್ ಪ್ರಸೆಂಟೇಷನ್ ನೀಡಿದ ಸಂಕಲನಕಾರನಿಗೂ ನನ್ನ ತ್ರೀ ಸ್ಟಾರ್ ಗಳು…
ಗುಡ್ ಗುಡ್ & ಗ್ರೇಟ್ ಎಫರ್ಟ್… ಎಲ್ಲ ಸಹಕಲಾವಿದರು ಹೊಸಬರಾದರೂ ಒಳ್ಳೆಯ ಪ್ರಯತ್ನಕ್ಕೆ ಶರಣಾಗಿದ್ದಾರೆ. ನಟಿ, ವಿಲನ್, ಪ್ರೊಡ್ಯೂಸರ್ & ಪುಟ್ಟಿಯ ಅಭಿನಯವೂ ಕೂಡ ಪ್ರಶಂಸೆಗೆ ಅರ್ಹ…
ಸಣ್ಣ ಸಣ್ಣ ಮಿಸ್ಟೇಕ್ಸ್ ಇಲ್ಲದೇ ಯಾವುದೂ ನಡೆಯಲ್ಲ, ಮಿತ್ರವೃಂದದವರೇ ಸೇರಿ ಮಾಡಿರುವ ಈ ಚಿತ್ರ ತಲೆಮಾರಿನಿಂದ ನಡೆಯುತ್ತಿರುವ ಹೆಣ್ಣು ಸುಖದ ವಸ್ತುವೆನ್ನುವ ಶಾಪದಿಂದ ಮುಕ್ತಿಯ ಪಥದೆಡೆಗೆ ದಿನ ತಳ್ಳಲು ಸಹಕಾರವಾಗಲಿ ಎನ್ನುವ ಮನೋಭಿಲಾಷೆ ನನ್ನದು.
ಮಿಸ್ ಮಾಡದೇ, ಈ ಕಿರುಚಿತ್ರವನ್ನ ನೀವೂ ಒಮ್ಮೆ ನೋಡಿ… ವಿಡಿಯೋ ಲಿಂಕ್: