News (ಸುದ್ದಿ)

ಒಂದೇ ಸಾರಿ 300 ಕ್ಕೂ ಹೆಚ್ಚು ಅರಳಿದ ಬ್ರಹ್ಮಕಮಲ – ಅಚ್ಚರಿಯ ವಿಶೇಷ: heggaddesamachar

Spread the love

ಹೂಗಳೆಂದರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅದರಲ್ಲೂ ವರ್ಷಕ್ಕೊಮ್ಮೆ ಕಾಣಸಿಗುವ ವಿಶೇಷ ಹೂಗಳೆಂದರೆ ಕಾದು ನೋಡುವ ಕಾತುರತೆ ಇದ್ದೇ ಇರುತ್ತೆ. ಮಲ್ಲಿಗೆಗೆ ಹೆಸರಾಗಿರುವ ಮೈಸೂರಿನಲ್ಲಿ ಬ್ರಹ್ಮಕಮಲ ಗಿಡದಲ್ಲಿಯೇ ನಕ್ಷತ್ರದಂತೆ ಮಿನುಗುತ್ತಿದೆ.

ಹೌದು,
ಮೈಸೂರಿನ ರಾಮಕೃಷ್ಣನಗರ, ಬಿಎಂಶ್ರೀನಗರದಲ್ಲಿ ನಿವಾಸಿ ಪಟ್ಟಾಭಿರಾಮಚಂದ್ರ ಎಂಬುವರ ಮನೆಯಲ್ಲಿ ಅಪರೂಪಕ್ಕೆ ರಾತ್ರಿ ವೇಳೆ ಮಾತ್ರ ಅರಳುವ 300ಕ್ಕು ಹೆಚ್ಚು ಬ್ರಹ್ಮಕಮಲ ಮನೆಯಲ್ಲಿ ಅರಳಿ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಸಾಮಾನ್ಯವಾಗಿ ಸೂರ್ಯನ ಕಿರಣಗಳಿಗೆ ಹೂಗಳು ಅರಳುತ್ತದೆ‌.ಆದರೇ ಬ್ರಹ್ಮಕಮಲ ಸೂರ್ಯನ ಕಿರಣದಲ್ಲಿ ಮೊಗ್ಗಗಿ ಚಂದ್ರನ ಬೆಳಕಿಗೆ ಅರಳುವುದು ಬ್ರಹ್ಮಕಮಲದ ವಿಶೇಷತೆ.

ಪುಷ್ಪಲೋಕದ ವಿಸ್ಮಯ ಮೂಡಿಸುವ ಬ್ರಹ್ಮಕಮಲ.ವರ್ಷಕ್ಕೊಮ್ಮೆ ಜೂನ್,ಜುಲೈ ತಿಂಗಳಲ್ಲಿ ರಾತ್ರಿಯ ವೇಳೆ ಅರಳುತ್ತದೆ.ಬ್ರಹ್ಮಕಮಲ ಉತ್ತರಕಾಂಡ ಹಾಗೂ ಹಿಮಾಲಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ರಾತ್ರಿ ಅರಳಿ, ಬೆಳಗಾಗುವುದರೊಳಗೆ ಬಾಡಿ ಹೋಗುವ ಅಪರೂಪದ ಪುಷ್ಪಕ್ಕೆ ರಾತ್ರಿಯ ರಾಣೆ,ರಾತ್ರಿಯ ಲೇಡಿ ಎನ್ನುತ್ತಾರೆ. ಸೃಷ್ಠಿಕರ್ತ ಬ್ರಹ್ಮನ ಕೈಯಲ್ಲಿ ಇರುವುದರಿಂದ ಏನೋ ಇದನ್ನ ಭಾರತದಲ್ಲಿ ಬ್ರಹ್ಮಕಮಲ ಎಂದು ಕರೆಯುತ್ತಾರೆ.

ಮನೆಯ ಅಂಗಳದಲ್ಲಿ ಅರಳಿದ ಅಪರೂಪದ ಹೂವು ಕಂಡು ಸಾಂಸ್ಕೃತಿಕ ನಗರೀ ಜನ ಪುಳಕಿತರಾಗಿದ್ದಾರೆ.ಈ ಬಾರೀ ಒಂದೇ ಸಾರಿ 300 ಕ್ಕೂ ಹೆಚ್ಚು ಬ್ರಹ್ಮಕಮಲ ಅರಳಿರೋದು ವಿಶೇಷ.

ವರದಿ: ನಂದಿನಿ

Leave a Reply

Your email address will not be published. Required fields are marked *