News (ಸುದ್ದಿ)

‘ಐರ್ ಬೈಲ್’ ಎಂಬ ಕಲಾತಪಸ್ವಿಗೆ ಹುಟ್ಟೂರ ಗೌರವ – ಸಿದ್ದಾಪುರದಲ್ಲಿ ದ್ವಿತೀಯ ಯಕ್ಷಕಾಶಿ: heggaddesamachar.com

Spread the love

ಸಿದ್ದಾಪುರ: ಬಡಗುತಿಟ್ಟು ಯಕ್ಷಗಾನ ರಂಗಭೂಮಿಯ ನಡುತಿಟ್ಟಿನ ಯಕ್ಷ ಚಕ್ರೇಶ್ವರ ಐರ್ ಬೈಲ್ ಆನಂದ ಶೆಟ್ಟರಿಗೆ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
ತನ್ನಿಮಿತ್ತ ಎಂಬಂತೆ ಹುಟ್ಟೂರಿನಲ್ಲಿ ಶೆಟ್ಟರಿಗೆ ಗೌರವಪೂರ್ವಕ ಅಭಿನಂದನೆ ಹಮ್ಮಿಕೊಂಡಿರುವುದು ಸಕಾಲಿಕ.

ಬಡಗು ಮಧ್ಯಮತಿಟ್ಟಿನ ಪರಂಪರೆಯ ಪೆಂಪು ಐರಬೈಲರ ಕಲಾವಂತಿಕೆಯಲ್ಲಿ ನಿಚ್ಚಳವಾಗಿ ಕಂಡವರಿಗೆ ಅವರು ಯಾವತ್ತೂ ನೆಚ್ಚು.
ಒಂದೇ ಮೇಳದಲ್ಲಿ ಸರಿಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿದ ಅವರ ಕಲಾಯಾನ ಸಮಕಾಲೀನ ರಂಗದಲ್ಲಿ ಒಂದು ದಾಖಲೆ! ಅಕ್ಷರಶಃ ರಂಗವಾಳುವುದೆಂದರೆ ಹೀಗೆಯೇ ಇರಬೇಕು.
ಪೌರಾಣಿಕ ಪಾತ್ರ ಪ್ರತಿಮೆಗಳಿಗೆ ಪ್ರತಿಭಾಪೂರ್ಣ ಕಲಾವರ್ಚಸ್ಸಿನಿಂದ ಪ್ರಾಣಪ್ರತಿಷ್ಠೆ ನೀಡಿ ರಂಗನೆಲದಲ್ಲಿ ಚಿರಸ್ಥಾಯಿಯಾಗಿಸಿದ ಐರಬೈಲ್ ಸಾಂಪ್ರದಾಯಿಕ ಶಿಸ್ತಿನ ರಂಗ ಸಿಪಾಯಿ.
ಐರಬೈಲರನ್ನು ರಂಗದಲ್ಲಿ ಕುಣಿಸಿದ ಧನ್ಯತೆ ಕಲಾಪಯಣದಲ್ಲಿ ಸದಾ ಅವರ ನಾಮಧೇಯದ ಅನುಭೂತಿ..

ದಣಿವರಿಯದ ಧಣಿಯಾಗಿ ಯಕ್ಷಗಾನ ಲೋಕ ಬೆಳಗಿದ ಕಲಾನಿಧಿಗೆ ಸಲ್ಲಲೇಬೇಕಾದ ಗೌರವ ತವರಿನ ತಾಣದಲ್ಲಿ ಸಿಗುತ್ತಿದೆ..
ಜನ್ಸಾಲೆ ಅಭಿಮಾನಿ ಕೂಟದ ‘ಯಕ್ಷಸಂಕಲ್ಪ’ವಿದು.. ಐರಬೈಲ್ ಅಭಿನಂದನೆ..ಪೆರ್ಡೂರು ರಂಗ ಮಂಚದಲ್ಲಿ ಕಿರಣಕೆರೆಯವರ – ‘ಮಾನಸಗಂಗಾ’ ಪ್ರದರ್ಶನದ ರಂಗರಂಜನೆ..
ಎಲ್ಲದಕ್ಕೂ ನೀವು ಕಣ್ ಸಾಕ್ಷಿಯಾಗಿ ಪ್ರೋತ್ಸಾಹಿಸಿ..

One thought on “‘ಐರ್ ಬೈಲ್’ ಎಂಬ ಕಲಾತಪಸ್ವಿಗೆ ಹುಟ್ಟೂರ ಗೌರವ – ಸಿದ್ದಾಪುರದಲ್ಲಿ ದ್ವಿತೀಯ ಯಕ್ಷಕಾಶಿ: heggaddesamachar.com

Leave a Reply

Your email address will not be published. Required fields are marked *