News (ಸುದ್ದಿ)

ಎಲ್ಲರ ಚಿತ್ತ ಸೆಳೆದಿದ್ದ ಬಂಗಾರದ ಮನುಷ್ಯ ಇನ್ನಿಲ್ಲ: heggaddesamachar.com

Spread the love

ಪುಣೆ: ಗೋಲ್ಡ್ ಮ್ಯಾನ್(ಬಂಗಾರದ ಮನುಷ್ಯ) ಖ್ಯಾತಿಯ ಸಾಮ್ರಾಟ್ ಮೋಜ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುಣೆಯ ಪ್ರಸಿದ್ಧ ಉದ್ಯಮಿಯಾಗಿರುವ ಸಾಮ್ರಾಟ್ ಮೋಜ್ ಕುತ್ತಿಗೆ ಕೈಗೆ ಸುಮಾರು 10 ಕೆಜಿ ಚಿನ್ನಾಭರಣ ಹಾಕಿಕೊಳ್ಳುತ್ತಿದ್ದರು. ಗೋಲ್ಡ್ ಮ್ಯಾನ್ ಎಂದೇ ದೇಶದ ಜನರ ಗಮನ ಸೆಳೆದಿದ್ದ 39 ವರ್ಷದ ಸಾಮ್ರಾಟ್ ಮೋಜ್ ಮೇ 5 ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪುಣೆಯ ಯರವಾಡ ಪ್ರದೇಶದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದೆ. ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಕೆಲವೇ ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಸಾಮ್ರಾಟ್ ಅವರಿಗೆ ಪತ್ನಿ, ಇಬ್ಬರು ಮಕ್ಕಳು, ತಾಯಿ ಇದ್ದಾರೆ.

ಪ್ರಸಿದ್ಧ ಉದ್ಯಮಿಯಾಗಿದ್ದ ಮೋಜ್ ಗೋಲ್ಡ್ ಮ್ಯಾನ್ ಎಂದೇ ಹೆಸರುವಾಸಿಯಾಗಿದ್ದರು. ಮಹಿಳೆಯರೇ ನಾಚುವಂತೆ ಚಿನ್ನಾಭರಣ ಧರಿಸುತ್ತಿದ್ದರು. ಪುಣೆಯ ಶಾಸಕ ರಾಮಬಾಹು ಮೋಜ್ ಅವರ ಸೋದರಳಿಯರಾಗಿರುವ ಸಾಮ್ರಾಟ್ ಸಂಗಮವಾಡಿ ಪ್ರದೇಶದಿಂದ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಇತ್ತೀಚೆಗೆ ಅವರು ತಮ್ಮ ಹೆಸರಿನಲ್ಲಿ ಫೇಸ್ಬುಕ್ ನಲ್ಲಿ ನಕಲಿ ಪ್ರೊಫೈಲ್ ತೆರೆದ ಬಗ್ಗೆ ದೂರು ದಾಖಲಿಸಿದ್ದರು.

Leave a Reply

Your email address will not be published. Required fields are marked *