ಎರಡು ತಿಂಗಳ ಲಾಕ್ ಡೌನ್ ನಂತರ ಮೈಸೂರು ವಿಮಾನ ಸೇವೆ ಆರಂಭ: heggaddesamachar

ಲಾಕ್ಡೌನ್ ಕಾರಣ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರವು ಸೋಮವಾರ ಪುನರಾರಂಭವವಾಗಿದೆ , ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರು ಹಾಗೂ ಮೈಸೂರು ಸಂಪರ್ಕ ಇರಲಿದೆ . ವಿಮಾನ ನಿಲ್ದಾಣದಲ್ಲಿ ಸರ್ಕಾರ ಮಾರ್ಗಸೂಚಿಯನ್ನ ಪಾಲಿಸಲಾಗಿದೆ
ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆ ಹಾಗೂ ಟ್ರುಜೆಟ್ ಏರ್ಲೈನ್ಸ್ ಈ ಸೇವೆ ಒದಗಿಸಲಿವೆ .
ಅಲಯನ್ಸ್ ಸಂಸ್ಥೆಯ ವಿಮಾನವು , ಮೈಸೂರಿನಿಂದ ಸಂಜೆ 6.15 ಕ್ಕೆ ಹೊರಟು ಬೆಂಗಳೂರು ತಲುಪಲಿದೆ . ಇದಕ್ಕೂ ಮೊದಲು ಈ ವಿಮಾನವು ಸಂಜೆ 4.30 ಕ್ಕೆ ಬೆಂಗಳೂರಿನಿಂದ ಹೊರಟು 5.30 ಕ್ಕೆ ಮೈಸೂರಿಗೆ ಬಂದಿತ್ತು ಈ ವಿಮಾನದಲ್ಲಿ 5 ಪ್ರಯಾಣಿಕರು ಬಂದಿಲಿದಿದ್ದು ಪ್ರಯಾಣಿಕರಿಗೆ ಎಲ್ಲ ರೀತಿಯ ಪರೀಕ್ಷೆಗೆ ಒಳಪಡಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಗ ಬೆಂಗಳೂರಿನಿಂದ ಮೈಸೂರಿಗೆ ವಿಮಾನ ಬಂದಿದೆ. ಮತ್ತೆ ೬:೧೫ ಬೆಂಗಳೂರಿಗೆ ತೆರಳುತ್ತೆ. ಮೆಡಿಕಲ್ ಸ್ಕ್ರೀನಿಂಗ್ ಸೆಟಪ್, ಇತರೆ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.
ಪ್ರಯಾಣಿಕರ ಆರೋಗ್ಯದಲ್ಲಿ ವ್ಯತ್ಯಯವಿದ್ರೆ ಪ್ರಯಾಣಕ್ಕೆ ಅವಕಾಶ ಇರಲ್ಲ. ಆರು ರಾಜ್ಯಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ದಿಲ್ಲಿ. ಈ ಆರು ರಾಜ್ಯದವ್ರು ಬಂದ್ರೆ ಅವರಿಗೆ ಪ್ರತ್ಯೇಕ ಕ್ವಾರಂಟೈನ್ ೭ ದಿನ ಇರುತ್ತೆ. ನಂತರ ೭ ದಿನ ಹೋ ಕ್ವಾರಂಟೈನ್ ಇರುತ್ತೆ. ಇತರೆ ರಾಜ್ಯದಿಂದ ಬರುವವರು ಹೋಂ ಕ್ವಾರಂಟೈನ್ ಆಗ್ತಾರೆ. ಏರ್ಪೋರ್ಟ್ ಸಿಬ್ಬಂದಿಗಳು, ಎರ್ಜೆಟ್, ಟ್ರೂಜೆಟ್ ಫ್ಲೈಟ್ ಆಪರೇಟರ್ಸ್ ಅವ್ರು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ. ಸ್ಯಾನಿಟೈಸರ್, ಹ್ಯಾಂಡ್ಗ್ಲೌಸ್, ಮಾಸ್ಕ್ ಇತರೆ ಕ್ರಮಗಳನ್ನ ಪಾಲಿಸಲಾಗುತ್ತಿದೆ.ವಿಮಾನ ನಿಲ್ದಾಣದಿಂದ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.
*ಮೈಸೂರಿನಲ್ಲಿ ಕೊರೊನಾ ವಿಚಾರದಲ್ಲಿ
ಎರಡು ಪಾಸಿಟಿವ್ ಕೇಸ್ ಇದೆ. ಅವರ ಆರೋಗ್ಯ ಸುಧಾರಿಸಿದೆ…