News (ಸುದ್ದಿ)
ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಿಟ್ ವಿತರಣೆ: heggaddesamachar

ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಲ್ಲಾಳಿ ಸಂಘ, ವರ್ತಕರ ಸಂಘ, ತೂಕದವರ ಸಂಘ, ಅಮಾಲೀಗಳ ಸಂಘಗಳ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು.
ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಅಧ್ಯಕ್ಷರಾದ ಜಗದೀಶ್ ರವರ ಜನರಿಗೆ ಆಹಾರ ಕಿಟ್ ವಿತರಿಸಿದರು. ನಂತರ ಮಾತನಾಡಿದ ಅವರು ಎಪಿಎಂಸಿ ಯಲ್ಲಿ ಕೆಲಸ ಮಾಡುವ ಕಾರ್ಮಿಕರು ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದು ಅವರಿಗೆ ಎಪಿಎಂಸಿ ಮಾರುಕಟ್ಟೆಯ ದಲ್ಲಾಳಿ ಸಂಘ,ವರ್ತಕರ ಸಂಘ,ತೂಕದವರ ಸಂಘ,ಅಮಾಲೀಗಳ ಸಂಘಗಳೆಲ್ಲ ಸೇರಿ ಸುಮಾರು 500 ಆಹಾರ ಕಿಟ್ ವಿತರಿಸಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಶೇಖರ್,ಶೇಷಾದ್ರೀ,ಅಣ್ಣಪ್ಪ ಮಹೇಶ್,ಲೋಕೇಶ್ ವಿಜಯ್ ಕುಮಾರ್,ಪ್ರಕಾಶ್,ಸೇರಿದಂತೆ ಇತರರು ಭಾಗಿಯಾಗಿದ್ದರು.