
ಮೈಸೂರು: ರಾಜ್ಯದಲ್ಲಿ ಮೇ 17 ವರೆಗೂ ಕೋರೋನಾ ಲಾಕ್ ಡೌನ್ ಮುಂದುವರೆದಿದ್ದರೂ ಸಹ
ಮೈಸೂರಿನಲ್ಲಿ ಅನಗತ್ಯವಾಗಿ ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ.ಇಂದಿನಿಂದ ಅನವಶ್ಯಕವಾಗಿ ಓಡಾಡಿದವರಿಗೆ 2 ಸಾವಿರ ದಂಡ ಹಾಕವಾಗುವುದು ಎಂದು ಮೈಸೂರು ಡಿಸಿಪಿ ಡಾ. ಪ್ರಕಾಶ್ ಗೌಡ ಆದೇಶ ಹೊರಡಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಹೊರತುಪಡಿಸಿ ಸಾರ್ವಜನಿಕರು ಹೊರಬರದಂತೆ,ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.ಆದರೂ ಜನರು ನಿಯಮ ಉಲ್ಲಂಘಿಸುತ್ತಿದ್ದಾರೆ.ಇಂದಿನಿಂದ ಮಧ್ಯಾಹ್ನ 12 ಗಂಟೆ ನಂತರ ರಸ್ತೆಯಲ್ಲಿ ವಾಹನ ಚಲಾಯಿಸಿದ್ರೇ 2 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಡಿಸಿಪಿ ಪ್ರಕಾಶ್ ಗೌಡರವರು ಮಾಹಿತಿ ನೀಡಿದ್ದಾರೆ.
Post Views:
285