News (ಸುದ್ದಿ)

ಉಡುಪಿಯಲ್ಲೇ ಮತ್ತೆ ಕೊರೊನಾ ಭಾದೆ ಇಂದೆಷ್ಟು ಪಾಸಿಟಿವ್ ಗೊತ್ತಾ!?: heggaddesamachar

Spread the love

ಉಡುಪಿ ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದ 9 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ನಿನ್ನೆ ದಿನದ ತನಕ ಒಟ್ಟು 111 ಮಂದಿಯಲ್ಲಿ ಸೋಂಕು ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಈ ಸಂಖ್ಯೆ 120ಕ್ಕೆ ಏರಿಕೆಯಾಗಿದೆ.

ಇಂದು ದಕ್ಷಿಣ ಕನ್ನಡದ 12 ಹಾಗೂ ಉತ್ತರಕನ್ನಡದ 5 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಯಾದಗಿರಿಯಲ್ಲಿ 16, ಬೀದರ್‌ನಲ್ಲಿ 12, ಕಲಬುರಗಿಯಲ್ಲಿ 25, ಹಾಸನದಲ್ಲಿ 14 ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನ ಗಂಟೆ 12.00ರ ತನಕ ಒಟ್ಟು 122 ಪ್ರಕರಣಗಳು ಪತ್ತೆಯಾಗಿವೆ. ಇಂದು ರಾಜ್ಯದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ 11 ಸೋಂಕಿತರನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ 111 ವ್ಯಕ್ತಿಗಳು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಅಂದರೆ ಮಹಾರಾಷ್ಟ್ರವನ್ನು ಕೊರೋನಾ ಅದೆಷ್ಟು ಬಾಧಿಸುತ್ತಿರಬಹುದು ಎಂಬುದನ್ನು ಓದುಗರು ಗಮನಿಸಬಹುದಾಗಿದೆ.

Leave a Reply

Your email address will not be published. Required fields are marked *