News (ಸುದ್ದಿ)

ಉಡುಪಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 96ಕ್ಕೆ ಏರಿಕೆ- ಇಂದು 16 ಪಾಸಿಟಿವ್: heggaddesamachar

Spread the love

ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ 16 ಮಂದಿಯಲ್ಲಿ ಕೊವಿಡ್-19 ಸೋಂಕು ಪತ್ತೆಯಾಗಿರುವುದನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ದೃಢಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಬರೋಬ್ಬರಿ 92ಕ್ಕೆ ಏರಿಕೆಯಾಗಿದೆ.


16 ಪ್ರ್ರಕರಣಗಳಲ್ಲಿ 14 ಮಂದಿ ಮುಂಬೈಯಿಂದ ಬಂದು ಕ್ವಾರಂಟೈನ್‌ನಲ್ಲಿ ಇರುವವರಾಗಿದ್ದು ಉಳಿದ ಇಬ್ಬರು ದುಬೈಯಿಂದ ಬಂದವರಾಗಿದ್ದಾರೆ. ವಿಶೇಷವೆಂದರೆ 8 ಮಂದಿ ಮಕ್ಕಳಲ್ಲಿ ಮತ್ತೆ ಕರೋನಾ ಪತ್ತೆಯಾಗಿದೆ. 6 ಮಂದಿ ಮಹಿಳೆಯರು ಹಾಗೂ ಇಬ್ಬರು ಗಂಡಸರ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು ದಿನೇ ದಿನೇ ಜಿಲ್ಲೆಯಲ್ಲಿ ಕೊರೋನ ಆತಂಕವನ್ನು ಹೆಚ್ಚಿಸುತ್ತಲೇ ಇದೆ.

ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಲ್ಲಿ ಪಾಸಿಟಿವ್ ಪತ್ತೆಯಾಗುತ್ತಿದೆ! ಮಹರಾಷ್ಟ್ರದಿಂದ ಬಂದವರಲ್ಲೇ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು ಹೆಚ್ಚಿನವರ ಕ್ವಾರಂಟೈನ್ ಅವಧಿ ಮುಗಿಯುತ್ತಿರುವುದರಿಂದ ಜೂನ್‌ನಲ್ಲಿ ಮತ್ತಷ್ಟು ಮುಂಬೈಯಿಂದ ಜನರು ಆಗಮಿಸುವ ನಿರೀಕ್ಷೆ ಇದ್ದು ಮತ್ತಷ್ಟು ಕೋವಿಡ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *