News (ಸುದ್ದಿ)
ಉಡುಪಿಯಲ್ಲಿ ಇಂದು 5 ಮಂದಿಗೆ ಕೊರೋನಾ ಪಾಸಿಟಿವ್: heggaddesamachar.com

ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 5 ಕೊರೋನ ಪ್ರಕರಣಗಳು ಪತ್ತೆಯಾಗಿದ್ದು ಇವರಲ್ಲಿ ನಾಲ್ಕು ಮಂದಿ ಮುಂಬೈಯಿಂದ ಬಂದು ಕ್ವಾರಂಟೈನ್ನಲ್ಲಿರುವವರಾಗಿದ್ದಾರೆ.
ಚಿತ್ರದುರ್ಗದಿಂದ ಬಂದು ಕೆ.ಎಂ.ಸಿ.ಯಲ್ಲಿ ದಾಖಲಾಗಿದ್ದ ಕ್ಯಾನ್ಸರ್ ರೋಗಿಯಲ್ಲೂ ಇಂದು ಕೊರೋನಾ ಪತ್ತೆಯಾಗಿದೆ.
ಮುಂಬೈಯಿಂದ ಬಂದ ೫೩ ವರ್ಷದ ಪುರುಷ, 8 ವರ್ಷದ ಬಾಲಕ, 29 ವರ್ಷದ ಮಹಿಳೆ ಹಾಗೂ 24 ವರ್ಷದ ಯುವಕನಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ.
ಚಿತ್ರದುರ್ಗದಿಂದ ಬಂದ ಕ್ಯಾನ್ಸರ್ ರೋಗಿ 17 ವರ್ಷದ ಬಾಲಕಿಯಾಗಿದ್ದು ಇವರೆಲ್ಲರನ್ನೂ ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಅವರು ತಿಳಿಸಿದ್ದಾರೆ.