News (ಸುದ್ದಿ)
ಉಡುಪಿಗೆ ಮತ್ತೆ ಕೊರೋನಾ ಸಂಕಷ್ಟ – ಇಂದು 27 ಪಾಸಿಟಿವ್ ಕೇಸ್ : heggaddesamachar.com

ಉಡುಪಿಯಲ್ಲಿ ಒಂದೇ ದಿನ ಬರೋಬ್ಬರಿ 27 ಮಂದಿಗೆ ಕೊರೋನಾ ಇರುವುದು ದೃಢಪಟ್ಟಿದ್ದು, ಉಡುಪಿ ಜನತೆ ಆತಂಕಕ್ಕೆ ಈಡಾಗುವಂತೆ ಮಾಡಿದೆ.
ಹೊರ ರಾಜ್ಯದಿಂದ ಅಗಮಿಸಿದ್ದವರಲ್ಲಿ ಕೊರೋನಾ ಕಂಡುಬಂದಿದ್ದು,
23 ಮಂದಿ ಮುಂಬೈಯಿಂದ ಆಗಮಿಸಿದವರಾಗಿದ್ದಾರೆ, ಮೂರು ಮಂದಿ ತೆಲಂಗಾಣದಿಂದ ಆಗಮಿಸಿದ್ದು ಮತ್ತು ಚಿಕಿತ್ಸೆಗೆಂದು ಕೇರಳದಿಂದ ಬಂದ ಒಬ್ಬರಿಗೆ ಕೊರೋನಾ ಪಾಸಿಟಿವ್ ಉಡುಪಿಯಲ್ಲಿ ಕಾಣಿಸಿಕೊಂಡಿರುತ್ತದೆ.
ಇವರಲ್ಲಿ ಆರು ಮಂದಿ ಪುರುಷರು ಮತ್ತು ಐದು ಮಹಿಳೆಯರು ಹಾಗೂ ಹದಿನಾರು ಮಕ್ಕಳು ಇಂದು ಕೊರೋನಾ ಕರಿನೆರಳಿಗೆ ತುತ್ತಾಗಿದ್ದಾರೆ. ಕೇರಳದ ಒಬ್ಬರನ್ನು ಹೊರತುಪಡಿಸಿ ಉಳಿದ 26ಮಂದಿ ಕ್ವಾರಂಟೈನ್ ಗೆ ಒಳಪಟ್ಟವರು.
ಪ್ರಸ್ತುತ ಉಡುಪಿಯಲ್ಲಿ ಈವರೆಗೆ 48 ಕೇಸ್ ಗಳು ದಾಖಲಾಗಿದ್ದು, 44 ಮಂದಿ ಚಿಕಿತ್ಸೆಗೆ ಒಳಪಟ್ಟಿದ್ದು, ಮೂರು ಮಂದಿ ಕೊರೋನಾದಿಂದ ಹೊರಬಂದಿದ್ದು, ಒಬ್ಬರು ಕೊರೋನಾಗೆ ಬಲಿಯಾಗಿರುತ್ತಾರೆ.