ಈ ವರ್ಷದ 4ನೇ ಸೂಪರ್ ಮೂನ್ ಕಂಡೀರಾ!?: heggaddesamachar.com

ಪ್ರಕೃತಿಯ ಸೊಬಗು, ಅದರಲ್ಲಿ ಆಡಗಿರುವ ರಂಗು ಏನೊಂದು ಸೊಗಸು ಅಲ್ವಾ!!!
ಲಾಕ್ ಡೌನ್ನಿಂದಾಗಿ ಮನೆಯಲ್ಲಿರುವ ಎಲ್ಲರೂ ಈಗ ಪ್ರಕೃತಿ ಪ್ರೀಯರಾಗಿರುತ್ತಾರೆ.
ಕೆಲಸಕಾರ್ಯದ ನಿಮಿತ್ತ ಹೊರ ಹೋಗುವಂತಿಲ್ಲ, ಹಾಗಾಗಿ ಮನೆ ಮತ್ತು ಅಂಗಳ ಅಷ್ಟೇ ಈಗ ಖುಷಿಯ ಪ್ರಪಂಚ.
ಇವತ್ತೊಂದಷ್ಟು ಮತ್ತೆ ಖುಷಿ ರಂಗೇರಿ ಫೋನ್ ಗ್ಯಾಲರಿ ಅಥವಾ ಕ್ಯಾಮರಾ ಕಣ್ಣಿಗೆ ಸೆರೆಯಾಗಲು ಅಣಿಯಾಗಿ ಬರುತ್ತಿದ್ದಾನೆ “ಸೂಪರ್ ಫ್ಲವರ್ ಮೂನ್”
ಇದು ಧಾತುವಿನ ಅತೀ ದೊಡ್ಡ ಸೂಪರ್ ಮೂನ್ ಆಗಿದ್ದು, ಫೆಬ್ರವರಿ ನಂತರದ ನಾಲ್ಕನೇ ಸೂಪರ್ ಮೂನ್ ಇದಾಗಿರುತ್ತದೆ. ಮೇ 05 ರಿಂದ ಮೇ 08 ರ ಮುಂಜಾವಿನವರೆಗೆ ಈ ಸೂಪರ್ ಮೂನ್ ಕಾಣಿಸಿಕೊಳ್ಳಲಿದೆ.
ಈ ಸೂಪರ್ ಮೂನ್ ಹುಣ್ಣಿಮೆಯಂದು ಗೋಚರಿಸುವ ಚಂದ್ರನಿಗಿಂತ ಪ್ರತಿಶತ 14 ಪಟ್ಟು ದೊಡ್ಡದಾಗಿದ್ದು, ಗಾತ್ರದಲ್ಲಿ ಪ್ರತಿಶತ 30ರಷ್ಟು ಪ್ರಕಾಶಮಾನವಾಗಿ ಗೋಚರಿಸುತ್ತದೆ.
ಈಶಾನ್ಯ ಯುಎಸ್ ಎ ನಲ್ಲಿ ವಸಂತಕಾಲದಲ್ಲಿ ಈ ಸೂಪರ್ ಮೂನ್ ಕಾಣಿಸಿಕೊಳ್ಳುವುದರಿಂದ ಅಲ್ಲಿನ ಬುಡಕಟ್ಟು ಜನರು ಇದನ್ನು “ಸೂಪರ್ ಫ್ಲವರ್ ಮೂನ್” ಎಂದು ಕರೆದರು.
ಆದರೆ ಭಾರತದಲ್ಲಿ ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ತಿಂಗಳಿನ ದಿನಗಳಲ್ಲಿ ಕಾಣಿಸಿಕೊಳ್ಳುವುದರಿಂದ ವೈಶಾಖ ಚಂದ್ರ ಎಂದು ಕರೆಯಲಾಗುತ್ತದೆ.
ಪ್ರಕೃತಿಯ ಮಡಿಲಿನ ಸೊಬಗನ್ನು ಕಣ್ತುಂಬಿಕೊಳ್ಳೋಣ, ಪ್ರಕೃತಿಯ ರಮಣೀಯತೆಯಲ್ಲಿ ಖುಷಿಯನ್ನು ಹೊತ್ತು ಸಾಗೋಣ.
