News (ಸುದ್ದಿ)

ಈ ಬಾರಿ ಡಿಕೆಶಿ ಪದಗ್ರಹಣ ಗ್ಯಾರೆಂಟಿ-ಯಾವಾಗ ಗೊತ್ತಾ?? ಎಷ್ಟು ಜನ ಸೇರ್ತಿದ್ದಾರೆ ನೋಡಿ!!: heggaddesamachar

Spread the love

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿ ತಿಂಗಳು ಕಳೆದರೂ ಪದಗ್ರಹಣ ಮಾತ್ರ ಮುಂದೂಡುತ್ತಲೇ ಬಂದಿತ್ತು. ಆದರೆ ಕೊನೆಗೂ ಅಡ್ಡಿ ಆತಂಕಗಳನ್ನು ದಾಟಿ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ದಿನಾಂಕ ಫಿಕ್ಸ್ ಆಗಿದೆ.

ಕೆಪಿಸಿಸಿ ನೂತನ ಕಟ್ಟಡದಲ್ಲಿ ಜುಲೈ 2 ರಂದು ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಏಕಕಾಲಕ್ಕೆ 28 ಸಾವಿರ ಲೈವ್ ಸ್ಕ್ರೀನಿಂಗ್ ಅಳವಡಿಕೆ ಮಾಡಿ ಕಾರ್ಯಕರ್ತರಿಗೆ ಪದಗ್ರಹಣ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಇದರೊಂದಿಗೆ ಬರೋಬ್ಬರಿ 15 ಲಕ್ಷ ಕಾರ್ಯಕರ್ತರ ಜೊತೆ ಏಕಕಾಲಕ್ಕೆ ಸಂಪರ್ಕ ಸಾಧಿಸುವ ಯೋಜನೆ ಡಿಕೆ ಶಿವಕುಮಾರ್ ಅವರದ್ದು.

ಇನ್ನು ಲೈವ್ ಸ್ಕ್ರೀನಿಂಗ್ ನಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಪ್ರತ್ಯೇಕ ವ್ಯವಸ್ಥೆಗೂ ಕಾಂಗ್ರೆಸ್ ಮುಂದಾಗಿದೆ. ಅದಕ್ಕಾಗಿ ಗ್ಲೋಬಲ್ ಕಾಲೇಜು ಮೈದಾನದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅದಾಗಲೇ ಪದಗ್ರಹಣ ಮಾಡಬೇಕಿತ್ತು. ಆದರೆ ಕೊರೋನಾ ಲಾಕ್ ಡೌನ್ ಮತ್ತು ಕಠಿಣ ಮಾರ್ಗಸೂಚಿ ಹಿನ್ನೆಲೆಯಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

Leave a Reply

Your email address will not be published. Required fields are marked *