Cinema (ಸಿನಿಮಾ)

ಇಹಲೋಕದ ಯಾತ್ರೆ ಮುಗಿಸಿದ ಬುಲೆಟ್ ಪ್ರಕಾಶ್ | heggaddesamachar.com

Spread the love

ಬುಲೆಟ್ ಪ್ರಕಾಶ್ ಇಹಲೋಕ ತ್ಯಜಿಸಿದ್ದಾರೆ.
ಸ್ಯಾಂಡಲ್ ವುಡ್ ಹಾಸ್ಯ ನಟ ಬುಲೇಟ್ ಪ್ರಕಾಶ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದಾಗಿ, ನಗರದ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂತಹ ಕನ್ನಡ ಚಿತ್ರರಂಗದ ಹಾಸ್ಯನಟ, ಬುಲೆಟ್ ಪ್ರಕಾಶ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಬುಲೆಟ್ ಪ್ರಕಾಶ್ ಅವರಿಗೆ ಕಿಡ್ನಿ ವೈಫಲ್ಯ ಮತ್ತು ಸೋಂಕಿನಿಂದ ಬಳಲುತ್ತಿದ್ದರು. ಅವರಿಗೆ ಡಯಾಲಿಸ್ ಮಾಡಲಾಗುತ್ತಿತ್ತು. ಆದರೆ ಆರೋಗ್ಯ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ನಗರ ಪೊರ್ಟೀಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ನಟ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದಿದ್ದಾರೆ.

ಹೀಗಿದೆ ನಟ ಬುಲೆಟ್ ಪ್ರಕಾಶ್ ಸಿನಿ ಪಯಣ

ರಾಯಲ್ ಎನ್ಫೀಲ್ಡ್ ಬುಲೆಟ್ ಬ೦ಡಿಯನ್ನು ಓಡಿಸುವುದರಿ೦ದ ಇವರಿಗೆ ಈ ಬುಲೆಟ್ ಎ೦ಬ ಹೆಸರನ್ನು ಪಡೆದರು.

2002ರ ದ್ರುವ ಚಿತ್ರದಿಂದ ಆರಂಭಗೊಂಡ ಇವರ ಸಿನಿ ಜರ್ನಿ, ಪಾರ್ಥ, ಮಸ್ತ್ ಮಜಾ ಮಾಡಿ, ಐತಲಕಡಿ ಸೇರಿದಂತೆ ರಾಜಸಿಂಹದ ನಂತ್ರ ಮುಂದುವರೆದಿತ್ತು. 2015 ರಲ್ಲಿ, ಪ್ರಕಾಶ್ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದ ಅವರು, ಕನ್ನಡ ಅಷ್ಟೇ ಅಲ್ಲದೇ ಸೌಂತ್ ಇಂಡಿಯನ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇಂತಹ ನಟ ಇದೀಗ ನಮ್ಮನ್ನು ಅಗಲಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಚಲನಚಿತ್ರಗಳ ಪಟ್ಟಿ

ಚಿತ್ರ ವರ್ಷ
ದ್ರುವ 2002
ಪಾರ್ಥ 2003
ಓ೦ಕಾರ ೨೦೦೪
ಅ೦ಬಿ ೨೦೦೬
ಮಾಸ್ತ್ ಮಜಾ ಮಾಡಿ ೨೦೦೮
ಐತಲಕ್ಕಡಿ ೨೦೧೦
ಜಾಕಿ ೨೦೧೦
ಮಲ್ಲಿಕಾರ್ಜುನ ೨೦೧೧
ದೆವ್ರಾಣೆ ೨೦೧೩
ರಜಿನಿ ಕಾ೦ತ ೨೦೧೩
ಪಾರಾರಿ ೨೦೧೩
ಜಟಾಯು ೨೦೧೩
ಶತ್ರು ೨೦೧೩
ಜ೦ಗಲ್ ಜಾಕಿ ೨೦೧೩
ಧನು ೨೦೧೩
ಸವಾಲ್ ೨೦೧೩
ಲವ್ ಶೋ ೨೦೧೪
ನಿ೦ಬೆ ಹುಳಿ ೨೦೧೪
ಪು೦ಗಿ ದಾಸ ೨೦೧೪
ರೋಜ್ ೨೦೧೪
ಆರ್ಯನ್ ೨೦೧೪
ಮಾಸ್ಟರ್ ಮೈ೦ಡ್ ೨೦೧೫
ರಾಟೆ ೨೦೧೫
ದಕ್ಷ ೨೦೧೫
ಬಾ೦ಬೆ ಮಿಟಾಯಿ ೨೦೧೫
ಪಾತರಗಿತ್ತಿ ೨೦೧೫
ರೆಡ್ ಅಲರ್ಟ್ ೨೦೧೫
ಮಳೆ ೨೦೧೫
ಲವ್ ಯು ಆಲಿಯ ೨೦೧೫
ಮಿ. ಐರಾವತ ೨೦೧೫
ಗ೦ಗ ೨೦೧೫
ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ ೨೦೧೬
ಮದುವೆಯ ಮಮತೆಯ ಕರೆಯೋಲೆ ೨೦೧೬
ಅಕಿರ ೨೦೧೬
ಸಾಹೇಬ ೨೦೧೬
ಜಗ್ಗುದಾದ ೨೦೧೬
ರಾಜಸಿಂಹ ೨೦೧೮

ರಿ. ಹೆಗ್ಗದ್ದೆ ಸಮಾಚಾರ್

Leave a Reply

Your email address will not be published. Required fields are marked *