Literature (ಸಾಹಿತ್ಯ)

ಇಲ್ಲಿ ಯಾವುದೂ ಸರಿಯಿಲ್ಲ: heggaddesamachar.com

Spread the love

ಸರಿ ಇಲ್ಲ ಇಲ್ಲಿ ಯಾವುದೂ ಸರಿ ಇಲ್ಲ
ದುಡ್ಡಿದ್ದರೆ ಬೆಲೆ
ದುಡ್ಡಿಗಾಗಿ ಕೊಲೆ,

ಹಣವೊಂದಿದ್ದರೆ ಅರವತ್ತರ ಮುದುಕನು ಮದುಮಗ,
ಕುರುಪಿ ಯುವಕನಿಗೂ ಚಲುವೆಯ ಜೊತೆ
ಹಸೆಮಣೆಯ ಏರುವ ಯೋಗ…
ಸರಿ ಇಲ್ಲ ಇಲ್ಲಿ ಯಾವುದೂ ಸರಿ ಇಲ್ಲ

ಉಂಡೆ ಮಾಂಸದಿಂದ ದೊಡ್ಡ ಆಕೃತಿಯಾಗಿ
ಸತ್ತಮೇಲೆ ಮತ್ತದೇ ಉಂಡೆಯಾಗುವೆ ಎಂದು ಅರಿವಿದ್ದರೂ
ದ್ವೇಷ,ಅಸೂಹೆ, ನಾನು ಎಂಬ ಅಹಂಕಾರ.
ಸರಿ ಇಲ್ಲ ಇಲ್ಲಿ ಯಾವುದೂ ಸರಿ ಇಲ್ಲ

ಟಿವಿ ಸೀರಿಯಲ್ ನಲ್ಲಿ ಬೇರೆಯಾಗುವ ಪ್ರೇಮಿಗಳ ನೋಡಿ
ಸೋಪದಲ್ಲಿ ಕೂತು ಕಣ್ಣಿರು ಹಾಕುವರು,
ದೂರ ಮಾಡಿದ ಖಳನಾಯಕನಿಗೆ ಹಿಡಿ ಶಾಪವ ಹಾಕುವರು,
ನಿಜ ಜೀವನದಲ್ಲಿ ಇವರೇ ಖಳನಾಯಕರಾಗುವರು.
ಸರಿ ಇಲ್ಲ ಇಲ್ಲಿ ಯಾವುದೂ ಸರಿ ಇಲ್ಲ

ನಮ್ಮ ಉಸಿರೇ ನಮ್ಮ ಸ್ವಂತದಲ್ಲ
ಅವರು ನನ್ನವರು
ಅದು ನನ್ನದು
ಏಲ್ಲಾ ನನ್ನದೇ ಎನ್ನುವ
ಹುಚ್ಚು ಮನುಷ್ಯರೇ ಸರಿ ಇಲ್ಲ.

ಸರಿ ಇಲ್ಲ ಇಲ್ಲಿ ಯಾವುದೂ ಸರಿ ಇಲ್ಲ
✍ಬೈಲ್ಮನಿ ಗಂಡ್

Leave a Reply

Your email address will not be published. Required fields are marked *