News (ಸುದ್ದಿ)

ಇನ್ಮೆಲೆ ಶಂಕಿತರು ಕ್ವಾರಂಟೈನ್ ಗೆ ಬಂದಿಲ್ಲ ಅಂದ್ರೆ ಶಿಕ್ಷಾರ್ಹ ಅಪರಾಧ: heggaddesamachar.com

Spread the love

ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಲಾಕ್ ಡೌನ್ ಮೇ 3 ರ ತನಕ ಮುಂದುವರೆಯಲಿದೆ. ಇನ್ನಷ್ಟು ಬಿಗಿಯಾದ ಕ್ರಮಗಳ ಜಾರಿ ಮಾಡಿ ಲಾಕ್ ಡೌನ್ ಮುಂದುವರಿಕೆ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.

ನಿನ್ನೆಯ ಘಟನೆ ನೋಡಿದಾಗ ಬಿಗಿ ಕ್ರಮಗಳ ಜಾರಿ ಅನುವಾರ್ಯವಾಗಿದೆ. ಕೇರಳ, ಉತ್ತರ ಪ್ರದೇಶದಲ್ಲಿ ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಮಾಡಿದಾರೆ. ಹಾಗೆಯೇ ನಮ್ಮಲ್ಲೂ ಶಿಕ್ಷಾರ್ಹ ಅಪರಾಧ ನಿಯಮ ಜಾರಿ ಮಾಡ್ತೇವೆ. ಸಧ್ಯದಲ್ಲೇ ಈ ಸಂಬಂಧ ಅಧಿಸೂಚನೆ ಹೊರಡಿಸುತ್ತೇವೆ ಎಂಬುದಾಗಿ ತಿಳಿಸಿದರು.

ಕ್ವಾರಂಟೈನ್ ಗೆ ಯಾರು ಬರಲ್ವೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಕ್ವಾರಂಟೈನ್ ಗೆ ಬರದಿದ್ರೆ ಅದು ಶಿಕ್ಷಾರ್ಹ ಅಪರಾಧ ಎಂಬುದಾಗಿ ಈ ನಿಯಮ ಕೇರಳ, ಉತ್ತರ ಪ್ರದೇಶದಲ್ಲಿ ಜಾರಿ ಇದೆ. ನಮ್ಮಲ್ಲೂ ಅಧಿಸೂಚನೆ ಮೂಲಕ ಶಿಕ್ಷಾರ್ಹ ಅಪರಾಧ ನಿಯಮ ಜಾರಿ ಮಾಡ್ತೇವೆ. ನಿನ್ನೆ ಪಾದರಾಯನಪುರದಲ್ಲಿ ನಡೆದ ಘಟನೆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ತೇವೆ. ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೆ ಸಹಿಸಲ್ಲ. ಅವರ ಆರೋಗ್ಯದ ದೃಷ್ಟಿಯಿಂದ ನಾವು ಕ್ರಮ ತೆಗೆದು ಕೊಳ್ತಾ ಇದ್ರೆ, ಇವರೆಲ್ಲಾ ಕಾನೂನು ಕೈಗೆ ತೆಗೆದುಕೊಂಡವರಂತೆ ವರ್ತನೆ ಮಾಡ್ತಿದಾರೆ. ಇದನ್ನು ಸಹಿಸಲ್ಲ ಎಂಬುದಾಗಿ ತಿಳಿಸಿದರು.

Leave a Reply

Your email address will not be published. Required fields are marked *