Literature (ಸಾಹಿತ್ಯ)

ಇನ್ನಾದರೂ ನಿಲ್ಲಲಿ ಪ್ರಕೃತಿಯ ನಾಶ : heggaddesamachar

Spread the love

ಜಗ್ಗು ದೇವಾಡಿಗ, ಮೇಲ್ಮನೆ ಉಪ್ಪುಂದ.
Jaggudj73@gmail.Com

ಹಣದ ಆಸೆಗಾಗಿ ಇನ್ಯಾರ ಬಲಿದಾನವು, ಆಸ್ತಿ ಅಂತಸ್ತಿಗಾಗಿ ಪ್ರಕೃತಿಯ ನಾಶವು. ಕ್ಷಮಿಸದ ದೇವರು ಪ್ರಕೃತಿಯ ಮೇಲೆ ಒಲವು ತೋರಿ ಮನುಜನ ದೂರ ಸರಿಸಿದೆ. ಮನುಜನ ಅತಿಯಾದ ಆಸೆ, ಅಹಂಕಾರ ಸ್ವಭಾವವನ್ನು ನೋಡಿ ಪ್ರಕೃತಿಯೆ ಮುನಿದು ಕುಳಿತಿದೆ.

ಕರೋನಾ ಎನ್ನುವ ಮಹಾಮಾರಿಯಿಂದ ಮೇಲು-ಕೀಳೆನ್ನುವ ಭಾವನೆ ಕುಸಿದಿದೆ. ಹಣವಂತರು ಬಡವರೆನ್ನದೆ ಸಮಾನತೆಯು ಎದ್ದು ಕಾಣುತ್ತಿದೆ. ಅಟ್ಟಹಾಸದಿ ಮೆರೆದ ಜನರೆಲ್ಲಾ ತಮ್ಮ ಪಾಡಿಗೆ ಮೂಲೆ ಗುಂಪಾಗಿ ಸಂಕಷ್ಟಕ್ಕೆ ಒಳಗಾಗಿ ಏಕಾಂಗಿಯಾಗಿದ್ದಾರೆ. ಸಂಬಂಧದ ಬೆಲೆ ಈಗ ಅರಿವಾಗಿದೆ ಆದರೆ ಅನಿವಾರ್ಯ, ಮನುಷ್ಯ- ಮನುಷ್ಯ ಸಂಧಿಸಲು ಆಗುತ್ತಿಲ್ಲ. ಇಷ್ಟಾದರೂ ಬುದ್ದಿ ಬಾರದ ಜನರು ಹೊಟ್ಟೆಕಿಚ್ಚು ಎನ್ನುವ ಮಹಾರೋಗದಿಂದ ತನ್ನನ್ನು ತಾನು ಸುಟ್ಟುಕೊಂಡಿದ್ದಾರೆ.

ಪ್ರಕೃತಿ ಮಾತೆಯು ಸದಾಕಾಲವೂ ಹಸಿರಿನಿಂದ ನಗುತ್ತಿದ್ದರೆ ನಮಗೆ ಜೀವಿಸಲು ಸಾಧ್ಯ. ಹಸಿರಾದ ಪ್ರಕೃತಿಯ ನಾಶ ಮಾಡುವ ಮನುಜ ನಿನಗೆ ಎಚ್ಚರವಿರಲಿ ಮುಂದೊಂದು ದಿನ ಉಸಿರಾಡುವ ಉಸಿರಿಗೂ ಬೆಲೆ ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗುಲು ಬಹಳ ದಿನವಿಲ್ಲ! ದೇವರ ಸುಂದರ ಸೃಷ್ಟಿಯ ಈ ಪ್ರಕೃತಿಯನ್ನು ನಾಶಮಾಡಲು ಯಾರಿಗೂ ಹಕ್ಕಿಲ್ಲ. ಈ ಕ್ಷಣ, ಇಂದಿನ ದಿನ ನಿಮ್ಮ ಪಾಲಿಗೆ ಮಾತ್ರ ಸೀಮಿತ. ಜೀವವಿರುವ ತನಕವೂ ಪ್ರಕೃತಿಯೆ ನಿನಗೆ ಆಸರೆ ನೆನಪಿರಲಿ. ತಾಯಿಯ ಮಡಿಲಿನಂತಿರುವ ಪ್ರಕೃತಿಯನ್ನು ಪ್ರೀತಿಸಿದರೆ ಜೀವನ ನಡೆಸಿದ್ದು ಸಾರ್ಥಕ.

ಕೃತಿ ಮಾತೆಯು ಸದಾಕಾಲವೂ ಹಸಿರಿನಿಂದ ನಗುತ್ತಿದ್ದರೆ ನಮಗೆ ಜೀವಿಸಲು ಸಾಧ್ಯ. ಹಸಿರಾದ ಪ್ರಕೃತಿಯ ನಾಶ ಮಾಡುವ ಮನುಜ ನಿನಗೆ ಎಚ್ಚರವಿರಲಿ ಮುಂದೊಂದು ದಿನ ಉಸಿರಾಡುವ ಉಸಿರಿಗೂ ಬೆಲೆ ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗುಲು ಬಹಳ ದಿನವಿಲ್ಲ! ದೇವರ ಸುಂದರ ಸೃಷ್ಟಿಯ ಈ ಪ್ರಕೃತಿಯನ್ನು ನಾಶಮಾಡಲು ಯಾರಿಗೂ ಹಕ್ಕಿಲ್ಲ. ಈ ಕ್ಷಣ, ಇಂದಿನ ದಿನ ನಿಮ್ಮ ಪಾಲಿಗೆ ಮಾತ್ರ ಸೀಮಿತ. ಜೀವವಿರುವ ತನಕವೂ ಪ್ರಕೃತಿಯೆ ನಿನಗೆ ಆಸರೆ ನೆನಪಿರಲಿ. ತಾಯಿಯ ಮಡಿಲಿನಂತಿರುವ ಪ್ರಕೃತಿಯನ್ನು ಪ್ರೀತಿಸಿದರೆ ಜೀವನ ನಡೆಸಿದ್ದು ಸಾರ್ಥಕ.

Leave a Reply

Your email address will not be published. Required fields are marked *