News (ಸುದ್ದಿ)
ಇಂದು ವಿಶ್ವ ದಾದಿಯರ ದಿನ – ಈ ಮೂಲಕ ಅವರಿಗೊಂದು ಧನ್ಯವಾದ ತಿಳಿಸೋಣ ಅಲ್ಲವಾ!? : heggaddesamachar.com

ತನ್ನ ಮನೆಮಂದಿಯನ್ನು ಬಿಟ್ಟು, ಹಗಲು ರಾತ್ರಿ ಕರ್ತವ್ಯ ನಿರತರಾದ ದಾದಿಯರು,
ನೀವು ಮಾಡುವುದು ಬರೀ ಸೇವೆಯಲ್ಲ; ಅಶಕ್ತರಾಗಿ ನರಳುವ ಜೀವಕ್ಕೆ ನೀವೇ ಆಧಾರ ಸ್ತಂಭವಾಗಿ ನಿಂತು, ಯಾವುದೇ ರೀತಿಯ ಕುಂದು ಕೊರತೆ ಕಾಡದಂತೆ, ಜೋಪಾನವಾಗಿ ಅವರ ಆರೋಗ್ಯದ ಕಾಳಜಿ ಮಾಡುವ ನಿಮ್ಮ ಈ ತ್ಯಾಗಕ್ಕೆ ಅದರ ಜೊತೆಗೆ ಸೇವೆಯ ಧ್ಯೇಯವನ್ನು ಮೆಚ್ಚಲೇ ಬೇಕು.
ಪ್ರಸ್ತುತ ಕೊರೋನಾ C-19 ಜನಮಾನಸಕ್ಕೆ ತುಂಬಾ ಅಘಾತವನ್ನುಂಟು ಮಾಡಿದ್ದು, ಎಲ್ಲಿಯೂ ನೀವು ಧೃತಿಗೆಡದೆ ಸಾವು ಬದುಕಿನ ನಡುವೆ ಸೋಂಕಿತರಾಗಿ ನರಳುವ ಜೀವವನ್ನು ಚಿಕಿತ್ಸೆಗೆ ಒಳಪಡಿಸಿ, ಕೊರೋನಾ ಸಾಂಕ್ರಾಮಿಕ ರೋಗ ಎಂದು ತಿಳಿದಿದ್ದರು, ಚಿಕಿತ್ಸೆಗೆ ಜೊತೆಯಾಗುವ ನಿಮ್ಮ ಕಾಳಜಿಗೆ ಹಾಗೂ ನಿಮ್ಮ ಸೇವಾ ತ್ಯಾಗ ಮನೋಭಾವಕ್ಕೆ ಭೇಷ್ ಹೇಳಲೇ ಬೇಕು.
ನಿಮ್ಮ ಆರೋಗ್ಯದ ಕಾಳಜಿಯನ್ನು ಮರೆಯಬೇಡಿ ಎನ್ನುತ್ತಾ, ಈ ದಿನ ವಿಶ್ವ ದಾದಿಯರ ದಿನದ ನಿಮಗೆ ಶುಭಾಶಯಗಳನ್ನು ತಿಳಿಸುತ್ತಾ, ನಿಮಗಾಗಿ ಈ ಒಂದು ದಿನ ಸಾಕೇ !
ನಮ್ಮ ಒಂದು ಮೆಚ್ಚುಗೆ, ನಿಮ್ಮ ಕಾರ್ಯಕ್ಕೆ ಇದ್ದೆ ಇರುತ್ತೆ.