ಇಂದು ಕೊರೋನಾ ಬಗ್ಗೆ ತಪ್ಪು ಹೆಜ್ಜೆ ಇಟ್ಟರಾ “ಸತ್ ಪ್ರಜೆಗಳು”-ಕೊರೋನಾ Update Version: heggaddesamachar.com

ಒಂದೆರಡು ತಿಂಗಳುಗಳಿಂದ ಬಿಡುವಿನಲ್ಲಿದ್ದ ರಸ್ತೆಗಳು, ಇಂದು ಮತ್ತೇ ಸ್ವಲ್ಲ ನೋವಿನಾಳಕ್ಕೆ ತುತ್ತಾಗಿದೆ, ಹಕ್ಕಿಗಳಿಂಚರವನ್ನು ಆಲಿಸುತ್ತಿದ್ದ ಕಿವಿಗಳು ವಾಹನಗಳ ಗೀಳಿಗೆ, ಧ್ವನಿ ಮಾರ್ಧನಿಗೆ ತನ್ನ ಇಂಪನದಿಂದ ಕಂಪನದತ್ತ ದೌಡಾಯಿಸಿದೆ.
ಇಷ್ಷರವರೆಗೆ ತಾಳ್ಮೆಯಿಂದ ಕುಳಿತ್ತಿದ್ದವರೆಲ್ಲಾ ಮನೆಯಿಂದ ಯಾರೋ ಓಡಿಸಿದರೆಂಬಂತೆ ತೋರುವಷ್ಟರ ಮಟ್ಟಕ್ಕೆ ರೋಡಲ್ಲಿ ಓಡಾಡುತ್ತಿದ್ದಾರೆ.
ಹಾಗಿದ್ರೆ ಕೊರೋನಾ ಮಹಾಮಾರಿ ತೊಲಗೇ..
ಹೋಯ್ತಾ! ಇಷ್ಟು ಬೇಗ…!?! ಎನ್ನುವ ಪ್ರಶ್ನೆ ಮಾತ್ರ ಕಾಡ್ತಾ ಇದೆ.
ಹೊಸ ವರ್ಷನ್ ನ ಒಂದಷ್ಟು ಫಿಚರ್ಸ್ಗಳು:
(Feautures)
*ಅವಶ್ಯಕತೆಯನ್ನು ಮರೆತು ಬೀದಿಗಿಳಿದ ಜನರು
*ಆರೋಗ್ಯಕ್ಕಿಂತ ಅನಾರೋಗ್ಯಕ್ಕೆ ಈಡು ಮಾಡುವ ಪಾನೀಯವೇ ಹೆಚ್ಚಾಗಿ ಬೇಕೆನಿಸಿತು
*ಇಷ್ಟು ದಿನಗಳವರೆಗೆ ಇದ್ದ ತಾಳ್ಮೆಯ ಕೊಂಡಿ ತಳಹಿಡಿಯಿತು
*ಇಷ್ಟರವರೆಗೆ ಅಗತ್ಯ ವಸ್ತುಗಳೊಡನೆ ಇದ್ದ ಸಂಯಮದ ಕಟ್ಟೆ ಕ್ಷಣ ಮಾತ್ರದಲ್ಲಿ ಒಡೆದು ಹೋಯಿತು
ಪ್ಲಸ್ ಪಾಯಿಂಟ್ ಹಾಗೂ ಉಳಿದ ಎಕ್ಸ್ಟ್ರಾ ಫ್ಯಿಚರ್ ಫ್ಯುಚರ್ಗೆ ( extra Features for features)
*ಇನ್ನೆರಡು ವಾರಗಳಲ್ಲಿ ಈಗಿದ್ದ ಅಂಕಿಅಂಶ ದ್ವಿಗುಣವಾಗಿ ಕೊರೋನಾ ಬಂಪರ್ ಆಗಿ ದೊರೆಯಲಿದೆ
- ಈವರೆಗೆ ಕೊರೋನಾ ಇಲ್ಲವೆಂದ ಜಾಗದಲ್ಲಿ ಕೊರೋನಾ ನೃತ್ಯ ಪ್ರದರ್ಶನ ಅತೀ ಶೀಘ್ರದಲ್ಲಿ ಬರಲಿದೆ
- ಕಿವಿಮಾತುಗಳನ್ನು ಗಾಳಿಗೆ ತೂರಿದ ಮನುಕುಲ,
ಪ್ರಾಣ ಹಾರಿಹೋಗುವುದನ್ನು ನೋಡುವ ಭಾಗ್ಯ
ಯಾಕೆ ಇಷ್ಟು ಅವಸರ, ನೀವು ಇಡುವ ಒಂದು ತಪ್ಪಾದ ಹೆಜ್ಜೆ ನಿಮ್ಮ ಮನೆಯವರನ್ನು ಬಲಿತೆಗೆದು ಕೊಳ್ಳುವುದು ಅಥವಾ ನೋವಿಗೆ ಶರಣಾಗಿಸುವುದು ಎಂದರೆ ಅಷ್ಟೋಂದು ಖುಷಿನಾ?
ಒಂದು ಇದ್ದದ್ದು ನಾಳೆ ದ್ವಿಗುಣ ಆಗೇ ಆಗುತ್ತೆ!
ನಿಮ್ಮ ಕಾಳಜಿಯಲ್ಲಿ ನೀವು ಇದ್ದರೆ, ನಿಮ್ಮ ಆರೋಗ್ಯದ ಜೊತೆಗೆ… ನಿಮ್ಮ ನಾಳೆಗಳು ನಿಮ್ಮವರೊಂದಿಗೆ… ಸುಂದರವಾಗಿ ಇರುತ್ತದೆ.
ದಯವಿಟ್ಟು ನಿಮ್ಮ ಸುತ್ತ ಎಲ್ಲೂ ಸ್ಮಶಾನ ಮೌನ ಅವರಿಸಿಕೊಳ್ಳದಂತೆ ನೋಡುವುದು ನಮ್ಮ ನಿಮ್ಮ ಕೈಯಲ್ಲೇ ಇದೆ.
- ಚೈತ್ರ ವರ್ಕಾಡಿ
