News (ಸುದ್ದಿ)

ಇಂದು ಉಡುಪಿ ಜಿಲ್ಲೆಯಲ್ಲಿ 18 ಕರೋನಾ ಪಾಸಿಟಿವ್ : heggaddesamachar

Spread the love

ಇಂದು ಉಡುಪಿ ಜಿಲ್ಲೆಯಲ್ಲಿ ಮತ್ತೆ ಒಟ್ಟು 18ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 18 ಪ್ರಕರಣಗಳು ಮುಂಬೈಯಿಂದ ಹಾಗೂ ತೆಲಂಗಾಣದಿಂದ ಬಂದಿರುವ ವ್ಯಕ್ತಿಗಳಲ್ಲಿ ಕಂಡು ಬಂದಿದೆ. ಉಳಿದ ನಾಲ್ಕು ಪ್ರಕರಣಗಳು ಶಾಕಿಂಗ್ ಸುದ್ದಿಯಾಗಿವೆ. 3ಮಂದಿ ಪೊಲೀಸ್ ಸಿಬ್ಬಂದಿಗಳಲ್ಲಿ ಸೋಂಕು ಕಂಡು ಬಂದಿದ್ದು ಓರ್ವ ತುಂಬು ಗರ್ಭಿಣಿಯೋರ್ವರಲ್ಲಿ ಸೋಂಕು ಪತ್ತೆಯಾಗಿದೆ. ಇವರೆಲ್ಲರನ್ನು ಟಿ.ಎಮ್.ಎ. ಪೈ ಆಸ್ಪತ್ರೆಗೆ ದಾಖಲಿಸಲಾಗಿದೆ.


ಅಜೆಕಾರು, ಕಾರ್ಕಳ ನಗರ, ಹಾಗೂ ಬ್ರಹ್ಮಾವರ ಪೊಲೀಸ್ ಠಾಣಾ ಮೂವರು ಪೊಲೀಸರಲ್ಲಿ ಕರೋನಾ ಸೋಂಕು ಪತ್ತೆಯಾಗಿದ್ದು ಜನರಲ್ಲಿ ಭೀತಿ ಉಂಟು ಮಾಡಿದೆ. ಈ ಮೂವರು ಸಿಬ್ಬಂದಿಗಳ ಪ್ರಾಥಮಿಕ ಸಂಪರ್ಕದಲ್ಲಿರುವವರ ಮಾಹಿತಿಯನ್ನು ಕಲೆಹಾಕುತ್ತ್ತಿದ್ದು ಎಲ್ಲಾ ಪೊಲೀಸ್ ಠಾಣೆಗಳನ್ನು ಕ್ಲೋಸ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಿ 48 ಗಂಟೆಗಳ ನಂತರ ಮತ್ತೆ ಠಾಣೆಗಳಲ್ಲಿ ಕೆಲಸ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ತಿಳಿಸಿದ್ದಾರೆ.


ಪೊಲೀಸರಲ್ಲಿ ಕೊರೋನಾ ಪತ್ತೆಯಾಗಿರುವುದು ನಿಜಕ್ಕೂ ಶಾಂಕಿಂಗ್ ಸುದ್ದಿಯಾಗಿದ್ದು ಸಾರ್ವಜನಿಕ ಸೇವೆಯಲ್ಲಿರುವ ಇವರು ನೂರಾರು ಮಂದಿಯನ್ನು ಸಂಪರ್ಕಿಸಿರುವ ಸಾಧ್ಯತೆ ಇದೆ. ಯಾರನ್ನೆಲ್ಲ ಸಂಪರ್ಕ ಮಾಡಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಬ್ರಹ್ಮಾವರದ ಪೊಲೀಸರು ಸಾಸ್ತಾನ ಟೋಲ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದು ಸೋಕಿತ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದರೆ ಎಂದು ಇನ್ನಷ್ಟೇ ತಿಳಿದುಬರಬೇಕಾಗಿದೆ.


ಕಾರ್ಕಳದ 9 ತಿಂಗಳು ತುಂಬು ಗರ್ಭಿಣಿಯೋರ್ವರಿಗೆ ಕರೋನಾ ಸೋಂಕು ಪತ್ತೆಯಾಗಿದೆ. 10-15 ದಿನಗಳಲ್ಲಿ ಹೆರಿಗೆ ಆಗುವ ಸಾದ್ಯತೆ ಇದೆ. ಇವರಿಗೆ ಎಲ್ಲಿಂದ ಬಂತು, ಹೇಗೆ ಬಂತು ಎಂಬ ಸಂಪರ್ಕವನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಹಸಿರು ವಲಯದಲ್ಲಿ ನೆಮ್ಮದಿಯಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ನಿನ್ನೆಯ ತನಕ 53 ಇದ್ದ ಸೋಂಕಿತರ ಸಂಖ್ಯೆ ಇದ್ದಿತ್ತು. ಇಂದು ಮತ್ತೆ 18 ಸೋಂಕಿತರ ಪತ್ತೆಯಿಂದ ಒಟ್ಟು ಸಂಖ್ಯೆ 71ಕ್ಕೆ ಏರಿಕೆಯಾಗಿದ್ದು ದಿನೇ ದಿನೇ ಆತಂಕ ಹೆಚ್ಚಲಾರಂಭಿಸಿದೆ. ಸಾರ್ವಜನಿಕವಾಗಿ ಹರಡುವುದನ್ನು ತಪ್ಪಿಸುವಲ್ಲಿ ಜಿಲ್ಲಾಡಳಿತ ಇನ್ನಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *