News (ಸುದ್ದಿ)

ಇಂದಿಗೆ ಆ ಕರಾಳ ದಿನಕ್ಕೆ ೧೦ ವರ್ಷ – ಮಂಗಳೂರು ವಿಮಾನ ದುರಂತದ ಆ ದಿನದ ಕಹಿ ನೆನಪು: heggaddesamachar.com

Spread the love

ಹತ್ತು ವರ್ಷಗಳ ಹಿಂದೆ ಅಂದರೆ ಮೇ 22 , 2010 ದುಬೈಯಿಂದ ಹೊರಟಿದ್ದ ವಿಮಾನ ಮಂಗಳೂರಿಗೆ ಬೆಳಗ್ಗೆ ಐದು ಮೂವತ್ತರ ಸಮಯದ ಆಸುಪಾಸಿನಲ್ಲೇ ಮಂಗಳೂರು ಬಜ್ಪೆ ವಿಮಾನ ನಿಲ್ದಾಣವನ್ನು ತಲುಪುವುದರಲ್ಲಿತ್ತು.
ಯಾತ್ರಿಕರು ಇನ್ನೇನು ಇಳಿದು ಬಿಡುತ್ತೇವೆ ಎಂಬ ಖುಷಿಯಲ್ಲೇ, ಹೇಗಾದರೂ ನಮ್ಮೂರು ತಲುಪಿತ್ತಲ್ವಾ, ನಮ್ಮ ಮನೆಯವರನ್ನು ನೋಡುವುದೊಂದೇ ಬಾಕಿ ಎಂಬ ಪುಟ್ಟ ಯೋಚನೆ ಆದರೂ… ಅದರಲ್ಲಿ ಅಡಗಿದ್ದ ಅನುಭವದ ಖುಷಿ ದುಪ್ಪಟ್ಟಾಗಿತ್ತು ಮಾತ್ರ…
ಆದರೆ ಸಮಯ ಹಾಗಿರಲಿಲ್ಲ ಪೈಲೆಟ್ ಗೆ 3 ಬಾರಿಗೆ ಕಂಟ್ರೋಲ್ ರೂಮಿನಿಂದ ಕರೆ ಬಂದಿರುತ್ತದೆ, ಹೇಗಾದರೂ ಅಲ್ಲೇ ಮೇಲ್ಗಡೆ ತಿರುಗಿಸಿಕೊಂಡು ಮತ್ತೆ ಲ್ಯಾಂಡ್ ಮಾಡುವ ಪ್ರಯತ್ನ ಮಾಡಿ ಎಂದು, ಆದರೆ ದುರದೃಷ್ಟವಶಾತ್ ಪೈಲಟ್ ಪ್ರಯತ್ನ ತಪ್ಪಿತೋ, ಸಮಯ ಕೈ ಮೀರಿತ್ತೋ ವಿಮಾನ ಅದಾಗಲೇ ಬಜ್ಪೆ ನಿಲ್ದಾಣದ ಹತ್ತಿರದಲ್ಲೇ ಹೊಂದಿಕೊಂಡಿರುವ ಹೊರಪ್ರದೇಶದ ಕೆಂಜಾರು ಗುಡ್ಡೆಯಲ್ಲಿ ನಿಯಂತ್ರಣ ತಪ್ಪಿದ ವಿಮಾನ ನೆಲಕ್ಕಪ್ಪಳಿಸಿತು.


ನಡುರಾತ್ರಿ ಸುಮಾರು 1.20ರ ಸಮಯದಲ್ಲಿ ದುಬೈಯಿಂದ ಹೊರಟ ವಿಮಾನ ಏರ್ ಇಂಡಿಯಾ ಎಕ್ಸ್ ಪ್ರೆಸ್
lX812 Rd: VT- AXV
EXPRESS INDIA 812 F.NO AXB812
ORIGIN- DUBAI INTERNATIONAL AIRPORT
DESTINATION- MANGALORE INTERNATIONAL AIRPORT
ಪೈಲಟ್ ಹಾಗೂ ನಿರ್ವಾಹಕರು ಮತ್ತು ಯಾತ್ರಿಕರನ್ನು ಸೇರಿಸಿ ಒಟ್ಟು 166 ಮಂದಿ ಅದರೊಳಗೆ ಇದ್ದರು. ಎಂಟು ಮಂದಿ ಅಪಾಯದ ಅಂಚಿನಿಂದ ಹಾರಿಕೊಂಡು ಪ್ರಾಣ ಉಳಿಸಿಕೊಂಡರೆ ಪೈಲಟ್ ಅನ್ನು ಸೇರಿಸಿ 158 ಮಂದಿ ಅಲ್ಲೇ ಬಲಿಪಶುವಾದರು.
ಅದ್ರೆ ಇದಕ್ಕೆ ಕಾರಣ ಪೈಲಟ್ ಲಾಂಡ್ ಮಾಡುವಾಗ ಮಾಡಿದ ಎಡವಟ್ಟು ಎಂಬುದು ಕೆಲವರ ಅನಿಸಿಕೆ.
ಈ ದುರಂತದಲ್ಲಿ ಒಂದಷ್ಟು ಜನರ ಕುಟುಂಬದ ಆಧಾರಸ್ತಂಭವಾಗಿದ್ದವರೇ ಮರಣ ಹೊಂದಿದರೆ, ಇನ್ನೂ ಕೆಲವು ಕುಟುಂಬದೊಳಗಿನ ಕುಡಿ ಬಾರದ ಲೋಕಕ್ಕೆ ತೆರಳಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮಂಗಳೂರು ಕೇರಳದವರು ಈ ದುರಂತದಲ್ಲಿ ಬದುಕಿನ ಅಂತ್ಯಕ್ಕೆ ಶರಣಾಗಿದ್ದಾರೆ.


ಈ ದುರಂತ ದೇಶದಲ್ಲೇ ನಡೆದ ಬಹುದೊಡ್ಡ ಘಟನೆ ಹಾಗೂ ಮರೆಯಲಾಗದ ಕಹಿನೆನಪಿನ ಆ ದಿನ.
ಸುದ್ದಿ ತಿಳಿಯುತ್ತಿದ್ದಂತೆಯೇ, ಸುತ್ತಮುತ್ತಲಿನವರು ಹಾಗೂ ಸ್ನೇಹಿತರು ಸಂಬಂಧಿಕರು ಎಲ್ಲರೂ ಘಟನೆ ನಡೆದ ಸ್ಥಳವನ್ನು ಸುತ್ತುವರಿಯುತ್ತಾರೆ. ಆದರೆ ಸುಟ್ಟು ಕರಕಲಾದ ವಿಮಾನದಲ್ಲಿ ಬೇರೆ ಯಾವುದು ಕಾಣುವುದೇ ಇಲ್ಲ, ಎಲ್ಲವೂ ಅಸ್ಪಷ್ಟ ನಮ್ಮವರು ಅವರು ಇವರು ಅಥವಾ ನಮ್ಮವರ ಲಗೇಜ್ ಯಾವುದು ಗುರುತಿಗೂ ಪತ್ತೆಹಚ್ಚಲಾಗದ ಕಪ್ಪನೆಯ ಕಾರ್ಮೋಡದ ಆ ಕ್ಷಣ ಎಂದರೆ, ಪೋಲಿಸರು ಅಗ್ನಿಶಾಮಕ ದಳದವರು, ಯುವ ತರುಣರು ಕೈಮೀರಿದ ಪ್ರಯತ್ನ ಪಟ್ಟರೂ ಅವಶೇಷಗಳನ್ನು ಹೊರತು ಪಡಿಸಿದರೆ ಪ್ರಾಣ ಪಕ್ಷಿಯು ಕೈಗೆ ಸಿಗದ ಆ ದಿನ, ಇಂದಿಗೂ ಮಂಗಳೂರಿನ ಕೆಂಜಾರು ಎಂಬ ಹೆಸರು ಕಿವಿಗಪ್ಪಳಿಸಿದರೆ ಸಾಕು ಆ ಕಹಿಘಟನೆಯೇ ಕಣ್ಣೇದುರು ಬಂದು ಕಣ್ಣಂಚಲ್ಲಿ ಕಣ್ಣೀರ ಹನಿಯ ಸಿಂಚನವಾಗುತ್ತದೆ.

ರಿ: ಚೈತ್ರ
ಹೆಗ್ಗದ್ದೆ ಸಮಾಚಾರ್.ಕಾಮ್

Leave a Reply

Your email address will not be published. Required fields are marked *