News (ಸುದ್ದಿ)

ಆಶಾ ಕಾರ್ಯಕರ್ತೆಯರಿಗೆ ಪಡಿತರ ಕಿಟ್ ವಿತರಿಸಿದ ಮಾದೇಗೌಡ: heggaddesamachar.com

Spread the love

ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಮಾದೇಗೌಡರ ನೇತೃತ್ವದಲ್ಲಿ ಆಶಾ ಕಾರ್ಯಕರ್ತರಿಗೆ ಪಡಿತರ ಕಿಟ್ ವಿತರಿಸಲಾಯಿತು.

ಮೈಸೂರಿನ ಕೆಸರೆಯಲ್ಲಿ ಮಾದೇಗೌಡರು ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸಿದರು.

ಇದೇ ಸಂದರ್ಭ ಮಾತನಾಡಿದ ಅವರು ಕೊರೋನ ಸಂಕಷ್ಟದಲ್ಲಿರುವ ಬಡವರಿಗೆ ನಮ್ಮ ಕೈಯಲ್ಲಾದಷ್ಟು ಸಹಾಯ ಮಾಡುತ್ತಿದ್ದೇವೆ.ಆದಷ್ಟು ಬೇಗ ದೇಶದಲ್ಲಿ ಕೋರೋನಾ ಮುಕ್ತವಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಎನ್ ಎಸ್ ಯು ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ಮಾತನಾಡಿ
ಕೋವಿಡ್ 19 ಹಿನ್ನಲೆ ವಾರ್ಡ್ ನಂ 15,16 ರಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ಬಡವರಿಗೆ, ಕೂಲಿ ಕಾರ್ಮಿಕರಿಗೆ
ಸುಮಾರು 2500 ಕುಟುಂಬಗಳಿಗೆ
ಮಾದೇಗೌಡರು ಪಡಿತರ ಕಿಟ್ ವಿತರಿಸಿದ್ದಾರೆ. ಇಂದು ಕೂಡ ಕೆಸರೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಪಡಿತರ ಕಿಟ್ ವಿತರಿಸಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭ ಮಾಜಿ ನಗರ ಪಾಲಿಕೆ ಸದಸ್ಯರು ರಘುರಾಜೇ ಅರಸು, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳು ಶೌಕತ್ ಅಲಿಖಾನ್, ಸಿ.ಎಸ್.ರಘು , ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *