ಆನ್ ಲೈನ್ ಮ್ಯೂಸಿಕ್ ಫೆಸ್ಟಿವಲ್ 2020ರ ಸ್ಫರ್ಧೆಯ ವಿಜೇತರ ಪಟ್ಟಿ ಇಲ್ಲಿದೆ ನೋಡಿ: heggaddesamachar

ಶಾಂತದುರ್ಗ ಕಲಾ ಯುವಕರ ಸಂಘ (ರಿ.)ದಿಂದ ಆನ್ ಲೈನ್ ಮ್ಯೂಸಿಕ್ ಫೆಸ್ಟಿವಲ್ 2020 ಯಲ್ಲಿ ವರ್ಷ ಪ್ರಥಮ ಸ್ಥಾನ ,ಹಾಗೂ ಕುಮಾರಿ ವರ್ಷ ದ್ವಿತೀಯ ಸ್ಥಾನ ಹಾಗೂ ರಮೇಶ್ ತೃತೀಯ ಸ್ಥಾನ ಪಡೆದಿದ್ದಾರೆ.
ಬಳ್ಳಾರಿ ಜಿಲ್ಲೆಯ ಗಡಿಗ್ರಾಮ ಕಲ್ಲಹಳ್ಳಿ ಯಲ್ಲಿ ಕರೋನ ಲಾಕ್ ಡೌನ್ ಪ್ರಯುಕ್ತ ಶಾಂತದುರ್ಗ ಕಲಾ ಯುವಕರ ಸಂಘದ ವತಿಯಿಂದ ಆನ್ ಲೈನ್ ಮ್ಯೂಸಿಕ್ ಪೆಷ್ಟಿವಲ್ 2020 ಸ್ಫರ್ದೆ ಏರ್ಪಡಿಸಲಾಗಿದ್ದು
ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿದ್ದರು ಅದರಲ್ಲಿ ಕೇವಲ ಮೂರು ಜನ ಉತ್ತಮವಾಗಿ ಹಾಡುವಂತಹ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿಯ ಜೊತೆಗೆ ಕಿರು ಸಹಾಯವನ್ನು ಇತ್ತೀಚೆಗೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಶಿಕ್ಷಕ ಗುರೂರ್ತಿ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಸಿನಿಮಾ ಭರಾಟೆ ಹಾಗೂ ಆಧುನಿಕ ಯುಗದಲ್ಲಿ ರಂಗಭೂಮಿ ಹಾಗೂ ಜಾನಪದ ಕಲೆಯು ನಶಿಸುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ನಡೆದಿರುವುದು ತುಂಬಾ ಸಂತೊಷದ ಸಂಗತಿ ಎಂದರಯ.
ಪ್ರಥಮ ಬಹುಮಾನ ವರ್ಷ ಚಿತ್ರದುರ್ಗದವರು,ದ್ವಿತೀಯ ಬಹುಮಾನ ದೃತಿ B.R ಹಿರಿಯೂರಿನವರು,ತೃತೀಯ ಬಹುಮಾನ ದೊಡ್ಡಹಳ್ಳಿ ರಮೇಶ್ ಹಾಸನ ಇವರಿಗೆ ನೀಡಲಾಯಿತು. ಇದರ ಆಯೋಜಕರಾಗಿ ಸಾಣೆಹಳ್ಳಿಯ ಕಲಾವಿದರಾದಂತಹ ಹರೀಶ್ ಕುಮಾರ್.ಟಿ ಮತ್ತು ತಿಪ್ಪೇಸ್ವಾಮಿ.ಆರ್ ಇವರು ಈ ಒಂದು ಕಾರ್ಯಕ್ರಮವನ್ನು ನಡೆಸಿದರು. ಜಗದೀಶ್ ಆರ್ – ಇವರು ಪ್ರಸ್ತುತ ಸಾಣೆಹಳ್ಳಿಯ ನಾಟಕ ರಂಗ ತರಬೇತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮೂಲತಃ ಚಿಕ್ಕಮಗಳೂರಿನವರು ಇವರು ದೆಹಲಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿಯನ್ನು ಪಡೆದಿದ್ದಾರೆ ಹಿಂದುಸ್ತಾನಿ ಸಂಗೀತದಲ್ಲಿ ಪರಿಣಿತಿ ಪಡೆದಿದ್ದಾರೆ.
ನಾಗರಾಜ ಸಾಣೇಹಳ್ಳಿ – ದಾವಣಗೆರೆ ಜಿಲ್ಲೆಯವರು ಇವರು ಕಳೆದ 10 ವರ್ಷಗಳಿಂದ ಸಾಣೇಹಳ್ಳಿಯ ಶಿವಸಂಚಾರ ಕಲಾತಂಡದ ಗಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ಇದೇ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ವಚನ ಗಾಯನ ಕಾರ್ಯಕ್ರಮ ನೀಡಿದ್ದರು. ಇವರು ತೀರ್ಪುಗಾರರಾಗಿ ಸಹಕರಿಸಿದರು.