ಆಡಳಿತ ಪಕ್ಷ, ವಿರೋಧ ಪಕ್ಷ ಒಳ ಒಪ್ಪಂದ ಮಾಡಿಕೊಂಡು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿರಬಹುದು – ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯಿಂದ ಸುದ್ಧಿಗೋಷ್ಠಿ: heggaddesamachar

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಕುರಿತು ವಿರೋಧ ಪಕ್ಷಗಳು ಬಾಯಿ ಬಿಡಬೇಕು ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಮುಂದಾಗಿದ್ದಾರೆ.

ಅದರ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದೇವೆ.ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಕುರಿತು ವಿರೋಧ ಪಕ್ಷದವರು ಮಾತ್ರ ಬಾಯಿ ಬಿಡ್ತಾ ಇಲ್ಲ.ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದಕ್ಕೆ ಪ್ರತಿಕ್ರಿಯಿಸಿಲ್ಲ.ಮಣ್ಣಿನ ಮಗ ಎಂದು ಹೇಳುವ ಹೆಚ್.ಡಿ.ದೇವೆಗೌಡರು ಅವರ ಮಕ್ಕಳು ಎಚ್.ಡಿ.ಕುಮಾರ ಸ್ವಾಮಿ,ಎಚ್.ಡಿ.ರೇವಣ್ಣ ಈ ಕುರಿತು ಏನೂ ಹೇಳಿಲ್ಲ.

ಇದನ್ನೆಲ್ಲಾ ನೋಡಿದರೇ ಆಡಳಿತ ಪಕ್ಷ,ವಿರೋಧ ಪಕ್ಷ ಒಳ ಒಪ್ಪಂದ ಮಾಡಿಕೊಂಡು ಭೂ ಸುಧಾರಣೆಗೆ ತಿದ್ದುಪಡಿ ಮಾಡಿರಬಹುದು ಎಂಬ ಸಂಶಯವಿದೆ.ಸಚಿವ ಶ್ರೀನಿವಾಸ್ ಪ್ರಸಾದ್ ಆಗಲೀ,ಮಾಜಿ ಸಚಿವ ಹೆಚ್.ವಿಶ್ವನಾಥ್ ಆಗಲಿ ಈ ಬಗ್ಗೆ ಮಾತನಾಡದಿರುವುದು ವಿಷಾಧನೀಯ.
ಆದ್ದರಿಂದ ವಿರೋಧ ಪಕ್ಷಗಳು ಈ ಕೂಡಲೇ ಅವರ ಅಭಿಪ್ರಾಯ ಹೊರ ಹಾಕಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಎರಡನೇ ಹಂತದ ಚಳುವಳಿ ಮಾಡಲಿದ್ದೇವೆ.ಜೂನ್ 21 ರಿಂದ 24 ರ ವರೆಗೆ ಎಲ್ಲಾ ಶಾಸಕರ ಮತ್ತು ಉಸ್ತುವಾರಿ ಸಚಿವರ ಕಚೇರಿ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡರು ಹಾಜರಿದ್ದರು.