ಆಟೋ & ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನದ ಅರ್ಜಿ ಸಲ್ಲಿಸಲು ಇದೀಗ ಇನ್ನಷ್ಟು ಸುಲಭ: heggaddesamachar

ಟೀಂ ಮೈಸೂರು ತಂಡದಿಂದ ಕೋವಿಡ್ ಸಂಕಷ್ಟದ ಸಮಯದಲ್ಲಿ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡುತ್ತಿರುವ 5000 ರೂಗಳ ಪರಿಹಾರ ಧನದ ಅರ್ಜಿಯನ್ನು ಉಚಿತವಾಗಿ ಸಲ್ಲಿಸುವ ತಾತ್ಕಾಲಿಕ ಸೇವಾ ಕೇಂದ್ರ ಉದ್ಘಾಟನೆಗೊಂಡಿತು.
ಮೈಸೂರಿನ ಇಟ್ಟಿಗೆಗೂಡಿನ ಜ್ವಾಲಾಮುಖಿ ವೃತ್ತದಲ್ಲಿ ಬಿಜೆಪಿ ಮೈಸೂರು ನಗರಾಧ್ಯಕ್ಷರಾದ ಶ್ರೀವತ್ಸರವರು ತಾತ್ಕಾಲಿಕ ಕೇಂದ್ರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರಕಾರ ನೀಡುತ್ತಿರುವ ಸಹಾಯಧನ ಚಾಲಕರಿಗೆ ದೊರಕಬೇಕು ಆದರೆ ಕೆಲ ಮಧ್ಯವರ್ತಿಗಳು ಚಾಲಕರಿಂದ ಹಣ ಸುಲಿಗೆ ಮಾಡುತ್ತಿರುವುದು ಕಂಡು ಬಂದಿತ್ತು.
ಈ ರೀತಿ ಟೀಂ ಮೈಸೂರು ನಂತಹ ಸಂಘಟನೆಗಳು ಈ ರೀತಿಯಲ್ಲಿ ಉಚಿತವಾಗಿ ಅರ್ಜಿಗಳನ್ನು ಸಲ್ಲಿಸಲು ಸಹಕರಿಸಿದ್ದ ತುಂಬಾ ಉಪಯೋಗಕಾರಿ ಮತ್ತು ಈಗಾಗಲೇ ಸಂಕಷ್ಟದಲ್ಲಿರುವ ಚಾಲಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರ ಪಾಲಿಕ ಸದಸ್ಯರಾದ ಛಾಯದೇವಿ, ಮುಖಂಡರಾದ ಪ್ರದೀಪ್ , ಪ್ರಸನ್ನ, ತಂಡದ ಸಂಚಾಲಕರಾದ ಗೋಕುಲ್ ಗೋವರ್ಧನ್, ಯಶವಂತ್ ,ಅನಿಲ್ ಜೈನ್, ರಘು ,ಹರೀಶ್ ಅನಿಲ್ ಜನಾರ್ದನ್ , ಹರ್ಷ, ಮಧು, ರಘು ಉಪಸ್ಥಿತರಿದ್ದರು.