News (ಸುದ್ದಿ)
ಆಟೋ ಚಾಲಕರಿಗೆ ಸಿಹಿ ವಿತರಣೆ: heggaddesamachar.com

ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ರವರು ಲಾಕ್ ಡೌನ್ ಸಡಿಲಿಕೆಯಿಂದಿ ಆಟೋಗಳು ಓಡಲು ಪ್ರಾರಂಭಿಸಿದ ದಿನವಾದ ಇಂದು ಆಟೋ ಚಾಲಕರಿಗೆ ಸಿಹಿಯನ್ನು ತಿನಿಸಿ, ದಿನಸಿ ಕಿಟ್ ಗಳನ್ನು ನೀಡುವ ಮೂಲಕ ವಿದ್ಯಾರಣ್ಯಪುರಂನಲ್ಲಿ ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಮ ವಿ ರಾಮಪ್ರಸಾದ್ ರವರು ಆಟೋ ಚಾಲಕರು, ಟ್ಯಾಕ್ಸಿ ಡ್ರೈವರ್ ಗಳು, ಅವತ್ತು ದುಡಿದು ತಿನ್ನುವವರೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರು ಸಂಕಷ್ಟದಲ್ಲಿದ್ದಾರೆ, ಇವರಿಗೆ ಕಳೆದ ಎರಡು ತಿಂಗಳಿಂದ ಜೀವನ ಸಾಗಿಸುವುದು ಕಷ್ಟಕರವಾಗಿತ್ತು, ಇವತ್ತಿನಿಂದ ಓಡಿಸಿದರು ಸಹ ಮೊದಲಿನಂತೆ ವ್ಯವಹಾರ ನಡೆಯುವುದಿಲ್ಲ, ಚೇತರಿಕೆ ಕಾಣಲು ಇನ್ನು ಕೆಲವು ದಿನಗಳು ಬೇಕಾಗುತ್ತದೆ, ರಾಜ್ಯ ಸರ್ಕಾರ ಮತ್ತೆ ಕೇಂದ್ರ ಸರ್ಕಾರ ನೀಡಿರುವ ಯೋಜನೆ ಗಳನ್ನು ಎಲ್ಲರೂ ಉಪಯೋಗಿಸಿ ಕುಳ್ಳಬೇಕು, ರಾಜ್ಯ ಸರ್ಕಾರ ಆದಷ್ಟು ಬೇಗ ಜಾರಿಗೆ ತರುವಂತೆ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಸಿ ಸಂದೀಪ್, ಅದ್ವೈತ್, ಧರ್ಮೇಂದ್ರ, ಸ್ವಾಮಿ, ಶಿವು ಮುಂತಾದವರು ಹಾಜರಿದ್ದರು