ಆಟೋ ಚಾಲಕರಿಗೂ ಸಿಕ್ತು ಕಿಟ್- ವೀರ ಶೈವ ಕ್ಷೇಮಾಭಿವೃದ್ಧಿ ಸೇವಾ ಸಂಸ್ಥೆಯಿಂದ ಜನಮನ ಗೆಲ್ಲುವ ಕಾರ್ಯಕ್ರಮ: heggaddesamachar.com

ವೀರ ಶೈವ ಕ್ಷೇಮಾಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಆಟೋ ಚಾಲಕರಿಗೆ ಆಹಾರ ಹಾಗೂ ತರಕಾರಿ ಕಿಟ್ ವಿತರಿಸಲಾಯಿತು.
ಮೈಸೂರಿನ ಬಸವೇಶ್ವರ ಪುತ್ಥಳಿ ಬಳಿ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಹಾಗೂ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು.
ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸರವರು ಮಾತನಾಡಿ ಕೊರೊನಾ ಮಹಾಮಾರಿಯಿಂದ ಆಟೋ ಚಾಲಕರು ಸಂಕಷ್ಟದಲ್ಲಿದ್ದಾರೆ.ಅವರಿಗೆ ವೀರ ಶೈವ ಕ್ಷೇಮಾಭಿವೃದ್ಧಿ ಸೇವಾ ಸಂಸ್ಥೆ 52 ಜನ ಅರ್ಹ ಬಡ ಆಟೋ ಚಾಲಕರನ್ನ ಗುರುತಿಸಿ ಅವರ ಕುಟುಂಬಕ್ಕೆ
ಅಗತ್ಯ ಆಹಾರ ಪದಾರ್ಥಗಳು ಹಾಗೂ ತರಕಾರಿ ಕಿಟ್ ವಿತರಿಸುತ್ತಿದ್ದಾರೆ ಎಂದರು.
ನಂತರ ಪಾಲಿಕೆ ಸದಸ್ಯ ಬಿವಿ ಮಂಜುನಾಥ್ ಮಾತನಾಡಿ
ಅಧ್ಯಕ್ಷ ನಾಗೇಂದ್ರ
ಆಟೋ ಚಾಲಕ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ,ನರೇಂದ್ರರವರು ಒಟ್ಟುಗೂಡಿ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಆಹಾರ ಕಿಟ್ ವಿತರಿಸಿದ್ದಾರೆ.ಹಿಂದೆ ಶ್ರೀಮಂತರು ದಾನ ಮಾಡುತ್ತಿದ್ದರು.ಆದರೆ ಲಾಕ್ ಡೌನ್ ನಿಂದ ತೊಂದರೆಗೆ ಒಳಗಾಗಿರುವ ಬಡವರಿಗೆ ಇಂದು ಮಧ್ಯಮ ವರ್ಗದವರು ಸಹಾಯ ಮಾಡಲು ಮುಂದಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್,ಮೋಹನ್ ಬಾಬು,ಭಾನು ಮೋಹನ್ ಸೇರಿದಂತೆ ಇತರರು ಭಾಗಿಯಾಗಿದ್ದರು.