Review (ವಿಮರ್ಶೆ)

ಅವನೇ ಶ್ರೀಮನ್ನಾರಾಯಣ ಟ್ರೈಲರ್ ರಿವ್ಯೂವ್ • ಸಂದೀಪ್ ಶೆಟ್ಟಿ ಹೆಗ್ಗದ್ದೆ heggaddesamachar.com

Spread the love

• ವಾವ್ ೮೦ರ ದಶಕದ ರೆಟ್ರೋ ಲುಕ್‌ನಲ್ಲಿ ರಕ್ಷಿತ್, ೫ ಭಾಷೆಯಲ್ಲಿ ಎ.ಎಸ್.ಎನ್ ಟ್ರೈಲರ್, ಕನ್ನಡದಲ್ಲಿ ರಕ್ಷಿತ್, ತೆಲುಗಿನಲ್ಲಿ ನಾನಿ, ತಮಿಳಿನಲ್ಲಿ ನಟ ಧನುಷ್, ಮಲಯಾಳಂನಲ್ಲಿ ನವಿನ್ ಪೌಲಿ ಟ್ರೈಲರ್ ಬಿಡುಗಡೆ. ಅಬ್ಬಾ!! ಇದಕ್ಕಿಂತ ದೊಡ್ಡ ಹವಾ ಬೇಕಿತ್ತಾ ಎಂದುಕೊ0ಡರೆ ತಪ್ಪಾಗುತ್ತೆ ಬಿಕಾಸ್ ಬಿಡುಗಡೆಯಾದ ಟ್ರೈಲರ್ ಇದಕ್ಕಿಂತಲೂ ದೊಡ್ಡ ಹವಾ ಎಬ್ಬಿಸುತ್ತಿದೆ.
• ಈ ಸಿನಿಮಾಗಾಗಿ ರಕ್ಷಿತ್ ವ್ಯಯಿಸಿದ್ದು ೩ ವರ್ಷ. ಸರಿಸುಮಾರು ೮೦ರ ದಶಕದ ಕಥೆ ಹೇಳುವ ಈ ಸಿನಿಮಾದ ಟ್ರೈಲರ್ ನೋಡುವಾಗ ನನಗೆ ಕೌಬಾಯ್ ಸಿನಿಮಾಗಳು ಕಣ್ಮುಂದೆ ಬಂದವು.
• ಅವನೇ ಶ್ರೀಮನ್ನಾರಾಯಣದಲ್ಲಿ ಏನೋ ಒಂದು ಹೊಸತನ ಇದೆ. ಹಳೆಕಾಲದ ಗಂಧವಿದೆ, ಹೊಸ ಜನರೇಷನ್ ಗೆ ಒಂದು ಸಂದೇಶವಿದೆ. ಟೋಟಲ್ಲಿ ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು ಎನ್ನುವ ಕುತೂಹಲವವಿದೆ.

• ಟ್ರೈಲರ್ ನ ಫಸ್ಟ್ ಸೀನ್ ನಿಂದಲೂ ಫ್ರೇಮ್ ಬೈ ಫ್ರೇಮ್ ಗೆ ಈ ಸಿನಿಮಾ ತಂಡ ಕೆಲಸ ಮಾಡಿದೆ ಎನ್ನುವುದು ಪಕ್ಕಾ ಎನಿಸಿತು. ಆದರೂ ನನಗ್ಯಾಕೋ ಒಂದು ಪುಟ್ಟ ಡೌಟ್ ಅದೇನೆಂದರೆ ಚಿತ್ರದಲ್ಲಿ ರಕ್ಷಿತ್ ಡಬಲ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಅಥವಾ ಅವರೇ ಕಳ್ಳ ಪೋಲೀಸ್ ಆಟ ಆಡುತ್ತಾರಾ!?
• ಒಬ್ಬ ನಾಯಕನ ಪಥದಲ್ಲಿ ನಡೆಯುವ ಎರಡು ಯುದ್ಧದ ಕಥೆ ಇದು ಎನ್ನುವುದು ಟ್ರೈಲರ್ ಡೈಲಾಗ್‌ನಲ್ಲಿ ತಿಳಿಯುತ್ತದೆಯಾದರೂ ಅದ್ಯಾಕೆ ಎನ್ನುವುದು ಸಸ್ಫೆನ್ಸ್ ಆಗಿ ಉಳಿದಿದೆ. ರಣರಂಗ ಅಂತರ0ಗ ಇವೆರಡರ ಮರ್ಮ ಏನು ಎನ್ನುವುದು ಥ್ರಿಲ್ಲರ್ ಸಸ್ಪೆನ್ಸ್ ಆಗಿ ಕಾಡಿದೆ.
• ಹಳೆ ಕಾಲದ ಎಲ್ಲೋ ಶೆಡ್ಸ್ ವಿಷುಯಲ್ಸ್, ಪೇಪರು, ಸೆಟ್ಟು, ಮ್ಯೂಸಿಕ್ಕು, ಲೊಕೆಷನ್ಸು, ಡೈಲಾಗ್ಸು, ಕಾಸ್ಟಿಮ್ಸೂ ಹೀಗೆ ಎಲ್ಲದರಲ್ಲೂ ರಕ್ಷಿತ್ ಶೆಟ್ಟಿಯವರ ಈ ಕಥೆ ಹಬ್ಬ ಮಾಡಿದೆ ಎನ್ನಬಹುದು. ಒಹೋ ಅಲ್ಲಲ್ಲಾ ತೆರೆ ಮೇಲೆ ಹಬ್ಬ ಮಾಡುತ್ತೆ ಎನ್ನಬಹುದು.

• ಅಂತೂ ಫೈನಲ್ಲಿ ಯಾರು ನೀನು ಎನ್ನುವುದಕ್ಕೆ ಉತ್ತರ ನಾನೇ ಅಲ್ಲಲ್ಲ ಅವನೇ ಶ್ರೀಮನ್ನಾರಾಯಣ ಎಂಬ ಉತ್ತರ ಸಿಕ್ಕಿದೆ. ಮುಖ್ಯವಾಗಿ ವಿಡಿಯೋ, ವಿ.ಎಫ್.ಎಕ್ಸ್ ಎಡಿಟರ್‌ಗೆ ಮತ್ತು ಸಂಗೀತ ನಿರ್ದೇಶಕರಿಬ್ಬರಿಗೆ ನಾವೆಲ್ಲರೂ ಬೆನ್ನುತಟ್ಟಬೇಕು ಅಂದುಕೊಳ್ಳುತ್ತೇನೆ. ಅದು ಅರ್ಥಪೂರ್ಣವಾಗಿ ಅವರ ಕೆಲಸ ಎಲ್ಲರ ಮನಗೆದ್ದಂತಿದೆ.
• ಚಿ0ದಿ… ರೀಯಲಿ ಆಫ್ಟರ್ ಕೆ.ಜಿ.ಎಫ್ ಪ್ಯಾನ್ ಇಂಡಿಯಾಗೆ ಹೇಳಿ ಮಾಡಿಸಿದಂತಹ ಚಿತ್ರ ಇದು. ಆ್ಯಕ್ಷನ್ನು, ಕಾಮಿಡಿ, ಕಥೆಯ ಕಲರವಕ್ಕೆ ಪಕ್ಕಾ ಎಲ್ಲರೂ ಫಿದಾ ಆಗೋದು ಗ್ಯಾರಂಟಿ… ಮಿಸ್ ಮಾಡ್ಕೋಬೇಡಿ ನೀವೂ ಒಮ್ಮೆ ನೋಡಿ, ನಿಮಗನಿಸಿದ್ದನ್ನ ನಮಗೆ ಬರೆದು ತಿಳಿಸಿ…

Leave a Reply

Your email address will not be published. Required fields are marked *