Cinema (ಸಿನಿಮಾ)

ಅವನೇ ಶ್ರೀಮನ್ನಾರಾಯಣ ಚಿತ್ರ ವಿಮರ್ಶೆ : heggaddesamachar.com

Spread the love

ಸಂದೀಪ್ ಶೆಟ್ಟಿ ಹೆಗ್ಗದ್ದೆ

• ಹೂ ಇಸ್ ಹೀ… ವೈಟ್ ಇಸ್ ಓವೆರ್, ಹಿ ಇಸ್ ಫೈನಲ್ಲಿ ಹೀಯರ್… ಎಸ್! ಅವನೇ ಶ್ರೀಮನ್ನಾರಾಯಣ…
• ಗುಡ್ ಸ್ಟೋರಿ, ಸೂಪರ್ ಬ್ಯಾಗ್ರೌಂಡ್ ಮ್ಯೂಸಿಕ್, ಗುಡ್ ಸಾಂಗ್ಸ್, ಗುಡ್ ವಿಲನ್ಸ್, ಟೈಮಿಂಗ್, ಹ್ಯೂಮರ್ ಆ್ಯಂಡ್ ಫೈಟ್ ಸೀಕ್ವೆನ್ಸ್, ಒನ್ಸ್ ಆಗೈನ್ ರಕ್ಷಿತ್ ಆರ್ ಸಿಂಪ್ಲಿ ಸೂಪರ್ಬ್
• ಚಿತ್ರ ನೋಡುತ್ತಾ ಕುಳಿತಾಗ ನನಗೆ ಹಾಲಿವುಡ್ ನ ‘ಪೈರೇಟ್ಸ್ ಆಫ್ ದಿ ಕೆರಿಬಿಯನ್’ ಸಿನಿಮಾ ನೆನಪಿಗೆ ಬಂತು. ಒಂಥರಾ ನಮ್ಮ ನೆಲಕ್ಕೆ ಇದು ಢಿಫರೆಂಟ್ ಫ್ಯಾಂಟಸಿ ಸಿನಿಮಾ ಎನಿಸಿತು.
• ಆಪ್ ಕೋರ್ಸ್ ಸಿನಿಮಾ ಹೇವಿ ಲೆಂತಿ ಇದೆ. ಅದರ ಜೊತೆಗೆ ಇಂಥಹ ದೀರ್ಘ ಪ್ರಸಂಗಕ್ಕೆ ಸ್ವಲ್ಪ ಕತ್ತರಿ ಹಾಕಿದ್ದರೆ ಚೆನ್ನಾಗಿತ್ತು ಅನಿಸಿತು ಆದರೆ ಕಥೆಯ ಗಿಮಿಕ್ ಅಷ್ಟು ಸಮಯ ತೆಗೆದುಕೊಳ್ಳುತ್ತೆ ಎನ್ನುವ ನಿರ್ದೇಶಕರ ಮಾತನ್ನು ತೆಗೆದುಹಾಕುವಂತಿಲ್ಲ. ನನಗನಿಸುವ ಮಟ್ಟಿಗೆ ಶೂಟಿಂಗ್ ಇಷ್ಟಕ್ಕೆ ಆಗಿಲ್ಲ ಇನ್ನೂ ಸ್ವಲ್ಪ ಜಾಸ್ತಿ ಸಮಯದ ಔಟ್ ಪುಟ್ಟೇ ಬಂದಿರುತ್ತೆ. ಆದಷ್ಟು ಕತ್ತರಿ ಹಾಕಿಯೇ ಮೂರು ಗಂಟೆ ಆರು ನಿಮಿಷಕ್ಕೆ ತಂದು ನಿಲ್ಲಿಸಿರಬಹುದು.

• ಒಂದು ಲೂಟಿ, ಅದನ್ನ ಕದ್ದವರು ಯಾರು!? ಕೊನೆಗದು ಸಿಗುತ್ತಾ ಇಲ್ವಾ!? ನಾಟಕತಂಡದ ವಾದ್ಯ ಊದುವವನ ಒಂದು ಸಾಲಿನ ಡೈಲಾಗ್‍ನ ಹಿಂದಿರುವ ಗುಟ್ಟು, ಅಧೀರ ಮಕ್ಕಳ ವೈರತ್ವ, ನಾಯಕ ರಕ್ಷಿತ್ ಶೆಟ್ಟಿ, ನಾರಾಯಣ ಅಲಿಯಾಸ್ ಶ್ರೀ ಹರಿ ದೇವರಾಗುವ ಪರಿ, ಅವನ ಚಮತ್ಕಾರ, ಹಾಸ್ಯಾತ್ಮಕ ಡೈಲಾಗ್ಸ್ ಇವೆಲ್ಲವೂ ನೀಟ್ ಆಗಿ ಪ್ರಸೆಂಟ್ ಆಗಿದೆ.
• ಮಾಮೂಲಾಗಿ ಪೊಲೀಸ್ ಇನ್ಸ್‍ಪೆಕ್ಟರ್ ಕ್ಯಾರೆಕ್ಟರ್ ತೆರೆ ಮೇಲೆ ಬರುತ್ತದೆ ಅಂದರೆ ಅದು ತುಂಬಾ ಸೀರಿಯಸ್ ಆಗಿರುತ್ತೆ ಎನ್ನುವುದು ನಮ್ಮ ನಿಮ್ಮ ನಿಲುವು ಆದರೆ ನಾರಾಯಣ ಇಲ್ಲಿ ಉಲ್ಟಾ ಹೊಡೆದಿದ್ದಾನೆ. ಸಖತ್ ಫನ್ನಿ ಆಗಿ ಕಾಣಿಸಿಕೊಂಡಿದ್ದಾನೆ.
• ಸಿನಿಮಾ ಹೊಸ ಬಗೆಯ ಮ್ಯಾಜಿಕ್‍ನ್ನ ತೆರೆ ಮೇಲೆ ಮಾಡುತ್ತೆ. ಸಿನಿಮಾದಲ್ಲಿರುವ ಡೈಲಾಗ್‍ನಂತೆ ಬುದ್ದಿವಂತಿಕೆಗೆ ಲಿಮಿಟ್ ಇರುತ್ತೆ ದಡ್ಡತನಕ್ಕೆ ಅದು ಇರುವುದಿಲ್ಲ ಎನ್ನುವಂತೆ ನಿಮ್ಮ ಬುದ್ದಿವಂತಿಕೆಯ ಪರೀಕ್ಷೆ ಚಿತ್ರ ನೋಡುವುದರ ಮೂಲಕ ಮಾಡಿಕೊಳ್ಳಬಹುದು. ಗೆದ್ದರೆ ನೀವೇ ಶ್ರೀಮನ್ನಾರಾಯಣ .
• ಒಂದು ಫಿಕ್ಷನಲ್ ಊರಿನ ಕಟ್ಟುವಿಕೆ, ಅಂದಿನ ಪೀರಿಯಡ್ ನ ಕಲರ್ ಟೋನ್, ಇಂತಹ ಸಿನಿಮಾವನ್ನ ಮಾಡಬೇಕಾದರೆ ಪ್ರತಿ ಸೀನ್ ನಲ್ಲೂ ಗಮನ ಕೊಡಬೇಕಾದ ಚಾಲೆಂಜ್, ಇತ್ಯಾದಿಗಳಿಗೆ ನಿರ್ದೇಶಕ ಸಚಿನ್ ಅವರಿಗೆ ಕ್ರೆಡಿಕ್ ಕೊಡಬೇಕು ಜೊತೆಗೆ ಇಂತಹವೊಂದು ಸಿನಿಮಾಗೆ ಮ್ಯೂಸಿಕ್ಕೂ ಕೂಡ ಪ್ಲಸ್ ಎಂದು ತೋರಿಸಿಕೊಟ್ಟ ಅಜನೀಶ್ ಮತ್ತು ಚರಣ್ ರಾಜ್ ಇಬ್ಬರಿಗೂ ಹ್ಯಾಟ್ಸಪ್ ಹೇಳಬೇಕು.

• ಸತ್ಯ ಹೇಳಬೇಕೆಂದರೆ ಈ ಚಿತ್ರ ಸ್ಯಾಂಡಲ್ ವುಡ್‍ನಲ್ಲಿ ಇದುವರೆಗೂ ಯಾರೂ ಟ್ರೈ ಮಾಡುವ ಲೆವೆಲ್ ಗೂ ಹೋಗದ ಕನಸು ಎನಿಸುತ್ತೆ. ನಮ್ಮ ಮಂದಿಗೆ ಇದು ಎಷ್ಟು ಮಜ ಕೊಡುತ್ತೋ ಗೊತ್ತಿಲ್ಲ ಆದರೆ ಪರಭಾಷೆಯವರು ಪಕ್ಕಾ ನಮ್ಮ ಸಿನಿ ಅಂಗಳವನ್ನ ಒಮ್ಮೆ ಓರೆಗಣ್ಣಿನಿಂದ ನೋಡುವುದು ಖಚಿತ.
• ಮೊದಲಾರ್ಧದಲ್ಲಿ ಏನೂ ಅರ್ಥ ಆಗುತ್ತಿಲ್ಲವಲ್ಲ ಅಂತ ಅನಿಸಿದರೂ, ಕಿಲಾಡಿ ಪೋಲೀಸ್‍ನ ಅವತಾರ ಕಥೆಯ ಕೀ ಪಾಯಿಂಟನ್ನ ಅಲ್ಲಲ್ಲಿ ಮೊದಲೇ ನಿರ್ಧರಿಸುವಂತೆ ಮಾಡುತ್ತೆ. ರಕ್ಷಿತ್ ಶೆಟ್ಟಿಯವರಿಗೆ ಶಾನ್ವಿ ಸರಳ ಸುಂದರಿಯಾಗಿ ಸಹಜ ಅಭಿನಯವನ್ನ ತೋರಿದ್ದಾಳೆ.
• ಚಿತ್ರದಲ್ಲಿ ಸುಮಾರು ಜನ ಕಲಾವಿದರ ದಂಡಿದೆ. ಅದರಲ್ಲಿ ಐದಾರು ಪಾತ್ರಗಳಂತು ಶಕ್ತಿಶಾಲಿ ಎನಿಸುತ್ತೆ. ಈಗಲೂ ನನ್ನ ಕಾಡುತ್ತಿರುವುದೇನು ಗೊತ್ತಾ!, ಚಿತ್ರದ ಮೇಕಿಂಗ್ ಮತ್ತೆ ಎಡಿಟಿಂಗ್. ಒಂದೇ ಮಾತಲ್ಲಿ ಹೇಳಬೇಕೆಂದರೆ ಸಿನಿಮಾ ನೆಕ್ಸ್ಟ್ ಲೆವೆಲ್ ನಲ್ಲೇ ಇದೆ ಬಿಡಿ.

• ತೆರೆ ಮೇಲೆ ಶ್ರೀಮನ್ನಾರಾಯಣ ಅವನ ಅಧ್ಯಾಯ ಬರೆದಿದ್ದಾನೆ. ಇಂತಹ ಸಿನಿಮಾ ಬೇರೆ ಭಾಷೆಯಲ್ಲಿ ಬಂದಿದ್ದರೆ ನಾವೆಲ್ಲಾ ವಾವ್ ಏನ್ ಮೇಕಿಂಗ್ ಗುರು ಅಂತ ಆಡಿಕೊಂಡು ನೋಡೋಕೆ ಹೋಗಿ ಗೆಲ್ಸೋದಲ್ಲ. ನಮ್ಮಲ್ಲೇ ಇಂತಹ ಸಿನಿಮಾ ಇದೆ ನೋಡಿ ಗೆಲ್ಲಿಸಿ, ರಕ್ಷಿತ್ ಶೆಟ್ಟಿ ಹೊಸ ನಾರಾಯಣನ ಅವತಾರಕ್ಕೆ ಸಾಥ್ ನೀಡಿ. ಇದು ಇಂದಿನ ವಿಮರ್ಶೆ…

Leave a Reply

Your email address will not be published. Required fields are marked *