News (ಸುದ್ದಿ)
ಅವನೇ ಶ್ರೀಮನ್ನಾರಾಯಣನೇ ಅಸ್ತ್ರವೆಂದ ಬೆಂಗಳೂರು ಸಿಟಿ ಪೊಲೀಸರು: heggaddesamachar.com

ಬೆಂಗಳೂರು ಸಿಟಿ ಪೊಲೀಸರು ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿನ ‘ಚರಿತ್ರೆ ಸೃಷ್ಠಿಸುವ ಅವತಾರ’ ಹಾಡನ್ನು ಬಳಸಿಕೊಂಡು ಕೊರೋನಾ ಕುರಿತು ಜಾಗೃತಿ ಮೂಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಸಿಟಿ ಪೊಲೀಸ್ ಟ್ವೀಟ್ ಕೂಡ ಮಾಡಿದ್ದು, ಇದು ಚರಿತ್ರೆ ಸೃಷ್ಠಿಸೊ ಅವತಾರ, ಮಾಸ್ಕ್ ಅಪ್ ಅದುವೆ ಸಿದ್ಧಾಂತ, ಹ್ಯಾಂಡ್ ವಾಷ್, ಈಗಿನ ವೇದಾಂತ ಎಂದು ಹೇಳಿದ್ದಾರೆ. ಇನ್ನು ಪೋಸ್ಟರ್ನಲ್ಲಿ ‘ಕೇಳಿ ಕಾದಿರುವ ಬಾಂಧವರೇ, ಭುವಿಯಲ್ಲಿ ಕೊರೋನಾ ಅರಿತವರೇ, ಮನೆಯಲ್ಲಿ ಇರಿ, ಸುರಕ್ಷಿತವಾಗಿರಿ, ಹೊರ ಬಂದರೇ ಅಷ್ಟೇ ಎಂದು ಬೆಂಗಳೂರು ಸಿಟಿ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.
