Literature (ಸಾಹಿತ್ಯ)

ಅಮ್ಮ ಎಂಬ ಅಮೃತ – ಬಹುಮಾನಿತ ಲೇಖನ : heggaddesamachar.com

Spread the love

ಲತಾ ಸಂತೋಷ್ ಶೆಟ್ಟಿ, ಮುದ್ದುಮನೆ

ನಮ್ಮೆಲ್ಲರ ಬಾಳಪುಟದ ಮಧುರ ಗೀತೆ ಅಮ್ಮ… ಬದುಕು ಕಟ್ಟಿಕೊಳ್ಳಲು ಮಕ್ಕಳ ಭವಿಷ್ಯದ ಗೂಡಿಗೆ ಸೊಗಸಾದ ಬಣ್ಣ ಬಳಿಯುವಾಕೆ ಅಮ್ಮಾ.. ಮಕ್ಕಳ ಸಾಧನೆಯ ಹೆಜ್ಜೆ ಗುರುತಿನ ಹಿಂದೆ ಅಮ್ಮನ ನಿದ್ದೆ ಬಿಟ್ಟು ರಾತ್ರಿಗಳೆಷ್ಟೋ, ಬೆನ್ನು ಬಿಡದ ಅಲೆದಾಟಗಳು ಹೇಳತೀರದು. ಬದುಕನ್ನು ಅರಳಿಸುವ ಕಲೆಗಾರ್ತಿ ಅಮ್ಮ. ಭಾರತೀಯ ಸಂಸ್ಕೃತಿಯಲ್ಲಿ ಅಮ್ಮನಿಗೆ ದೇವರ ಸ್ಥಾನ, ಅಮ್ಮಾ ಒಂದು ಬ್ರಹ್ಮಾಂಡ.
ತಾಯಿ ಹೃದಯ ಅದೆಷ್ಟು ವಿಶಾಲವೆಂದರೆ ಅಲ್ಲಿ ಇಡೀ ಜಗತ್ತು ನೆರೆ ನಿಲ್ಲುವಷ್ಟು ವಿಶಾಲವಾಗಿದೆ ಎನ್ನಬಹುದು. ಅಮ್ಮ ಮಕ್ಕಳ ನಡುವೆ ಅವಿನಾಭ ಸಂಬ0ಧವಿರುತ್ತದೆ. ಅಮ್ಮ ನಿಷ್ಕಲ್ಮಶ ಪ್ರೀತಿ, ಮಮತೆಯ ಆರೈಕೆ, ಕರುಣೆ, ತ್ಯಾಗ, ವಾತ್ಸಲ್ಯದ ಧಾರೆಯ ಅಮ್ಮ ಎಂಬ ಎರಡಕ್ಷರದಲ್ಲಿ ಅದೇನು ವಿಸ್ಮಯ ಅಡಗಿದೆ. ಅಮ್ಮನಿಗೆ ಪರ್ಯಾಯವಾದದ್ದು ಯಾವುದೂ ಕಾಣುತ್ತಿಲ್ಲ. ಅಮ್ಮನ ಪ್ರೀತಿಯ ಸುಳಿ ಎಷ್ಟು ಬಿಗಿಯಾಗಿ ಮಕ್ಕಳನ್ನು ಬಂಧಿಸುತ್ತೆ ಅಂದರೆ ಅದು ಅನುಭವಿಸುವವರಿಗೆ ಮಾತ್ರ ಅರ್ಥವಾಗುತ್ತೆ. ಅಮ್ಮನ ಇರುವಿಕೆಯೇ ಮಕ್ಕಳಲ್ಲಿ ಅಪಾರ ಆತ್ಮವಿಶ್ವಾಸವನ್ನು ತರುತ್ತದೆ. ದೇವರು ಸದಾ ಎಲ್ಲೆಡೆ ಇರುವುದು ಸಾಧ್ಯವಾಗುವುದಿಲ್ಲ. ಅದಕ್ಕೆ0ದೇ ಅವರು ಅಮ್ಮನನ್ನು ಸೃಷ್ಟಿಸಿದ್ದಾನೆ ಎಂಬ ಎಡ್ವಿನ್ ಅರ್ನಾಲ್ಡ್ರವರ ಹೇಳಿಕೆ ಅಮ್ಮನ ಮಹತ್ವವನ್ನು ತಿಳಿಸುತ್ತದೆ. ಅಮ್ಮನ ಪ್ರೀತಿಗೆ ಯಾವುದು ಸರಿಸಾಟಿ ಇಲ್ಲ. ಅಮ್ಮನನ್ನು ಜಗನ್ಮಾತೆಯಂತೆ ಆಧರಿಸಿ ಗೌರವಿಸುವ ಮಕ್ಕಳ ಇದ್ದರೆ ಈ ಜಗತ್ತೆ ಒಂದು ಮಂದಿರ ಆಗಲಿದೆ. ಅಮ್ಮನೊಂದಿಗೆ ಮಕ್ಕಳ ಸಂಬ0ಧ ಜನ್ಮ ಜನ್ಮದ ಬಂಧನ. ಅದು ಬಿಡಿಸಲಾರದ ಕಗ್ಗಂಟು. ಅಮ್ಮನ ಪ್ರೀತಿ ವಾತ್ಸಲ್ಯ ಮರೆಯಲಾಗದ ಕೊಡುಗೆ.


ಅಮ್ಮಾ..! ಎಂದರೆ ಅದೆಂತಹದೋ ಭಾವ ಲೋಕಾನುಭವ. ಮಾತೃದೇವೋ ಭವ ಎಂದು ತಾಯಿಗೆ ದೈವತ್ವದ ಪಟ್ಟ ನೀಡಿ ಗೌರವಿಸಿದ್ದೇವೆ. ಶಂಕರಾಚಾರ್ಯರು ಅಮ್ಮನ ಬಗ್ಗೆ ಹೇಳಿದ ಒಂದು ಸುಂದರ ಮಾತಿದೆ. ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಹುಟ್ಟಲಾರಳು ಎಂದು. ಅಂದು ಇಂದು ಎಂದೆAದಿಗೂ ಮಕ್ಕಳ ಬದುಕಿನ ಧೀ… ಶಕ್ತಿ ಅಮ್ಮ. ಮಕ್ಕಳನ್ನು ದೈಹಿಕವಾಗಿ ಬಲಿಷ್ಠಗೊಳಿಸಿ ಬುದ್ಧಿಯಲ್ಲಿ ಚುರುಕಾಗಿಸಿ ಮಕ್ಕಳ ಪ್ರಗತಿಯನ್ನು ಉನ್ನತಗೊಳಿಸಿ ಕುಟುಂಬ, ಸಮಾಜಕ್ಕೆ ಹಾಗೂ ದೇಶಕ್ಕೆ ಉಪಯುಕ್ತ ವ್ಯಕ್ತಿಯನ್ನಾಗಿಸುವಲ್ಲಿ ಅತಿ ದೊಡ್ಡ ಜವಾಬ್ದಾರಿ ಹೊರುವ ದಣಿವರಿಯದ ಶ್ರಮಜೀವಿ ಅಮ್ಮ. ಕೆಲಪದಗಳಿಂದ ಒಂದು ಲೇಖನದಲ್ಲಿ ಹಿಡಿದಿಡಲಾಗದ ಅಮ್ಮನ ನೆನಪುಗಳೊಂದಿಗೆ ಅವರು ನೀಡಿದ ಸಂಸ್ಕಾರ, ಬೆಳೆಸಿದ ರೀತಿ, ಕೊಟ್ಟ ಪೆಟ್ಟುಗಳನ್ನು ನೆನಪಿಸುತ್ತಾ ಹೆಜ್ಜೆ ಇಡಿ. ಎಂದಿಗೂ ಯಾವ ಹೆಜ್ಜೆಯೂ ತಪ್ಪಾಗಲಾರದು.
ಜಗತ್ತಿನ ನೂರೊಂದು ಮಹಾನ್ ಚೇತನ ಎಂಬ ಪುಸ್ತಕದ ಸಮೀಕ್ಷೆ ಪ್ರಕಾರ ಜಗದ ಶ್ರೇಷ್ಠ ವ್ಯಕ್ತಿಗಳಲ್ಲಿ ಹೆಚ್ಚಿನವರು ತಮ್ಮ ಕೀರ್ತಿ ಸಾಧನೆಗೆ ನಮ್ಮ ಅಮ್ಮ ಕಾರಣ ಎಂದು ಮನದುಂಬಿ ಸ್ಮರಿಸಿದ್ದಾರೆ. ಇಂತಹ ಗಟ್ಟಿ ಅಮ್ಮನ ಸ್ಥಾನ ಯಾರಿಗೆ ತಾನೇ ಬೇಡ. ತಾಯ್ತನವನ್ನು ಬಯಸದ ಹೆಣ್ಣೆ ಇಲ್ಲವಂತೆ. ಅಮ್ಮ ತ್ಯಾಗಮಯಿ. ತನ್ನೆಲ್ಲಾ ಆಶೆ, ಬಯಕೆಗಳನ್ನು ಬದಿಗೊತ್ತಿ ತನ್ನ ಮಕ್ಕಳಿಗೋಸ್ಕರ ಜೀವನ ನಡೆಸುವ ಅದೆಷ್ಟೋ ತಾಯಂದಿರು ಇದ್ದಾರೆ. ವಿಶ್ವಮಾತೆ, ಭೂಮಾತೆ, ಭೂಮಾತೆ, ಭಾರತ ಮಾತೆ, ಕನ್ನಡ ಅಮ್ಮ, ಜನ್ಮ ಕೊಟ್ಟ ತಾಯಿ ಹೀಗೆ ಎಲ್ಲಾ ಅಮ್ಮಂದಿರ ಅನುಗ್ರಹದಿಂದ ನಾನು ವರಕವಿಯಾದೆ ಎಂದು ಬೇಂದ್ರೆಯವರು ನುಡಿದಿದ್ದರಂತೆ. ಬಿದ್ದಾಗ ಮುದ್ದಿಸಿ, ಗೆದ್ದಾಗ ಪ್ರೋತ್ಸಾಹಿಸುವ ಅಮ್ಮ ಎಲ್ಲರಿಗಿಂತ ಭಿನ್ನ ತಾನೇ. ಎಲ್ಲವನ್ನೂ ಇತ್ತ ನೆಮ್ಮದಿಯಿಂದ ಬಾಳಲು ದಾರಿ ಮಾಡಿಕೊಟ್ಟ ಅಮ್ಮನ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ, ಪ್ರೀತಿ, ಗೌರವಾದರಗಳು ಇರಲೇಬೇಕು. ಹೆತ್ತಮ್ಮನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಲಾರದವರು ಅನ್ಯರ ಕಷ್ಟಗಳಿಗೆ ಸ್ಪಂದಿಸಿಯಾರೇ ನಮ್ಮನ್ನ ಸಾಕಿಸಲಹಿದ ಹೆತ್ತವರಿಗೆ ವೃದ್ದಾಪ್ಯಾದಲ್ಲಿ ಆಸರೆಯಾಗಿ ನಿಲ್ಲಬೇಕಾದುದು ಮಕ್ಕಳ ಧರ್ಮ.


ಪ್ರೀತಿಯ ತಾಯಿಯಾಗಿ, ಮಮತೆಯ ಹೊನಲಾಗಿ, ಆಸರೆಯ ಅಮ್ಮನಾಗಿ ಜಗತ್ತು ಎಂದು ಮರೆಯದ ಭವ್ಯ ಮಕ್ಕಳ ತಾಯಿಯಾದಾಗ ಹೆಣ್ಣು ಪರಿಪೂರ್ಣ ಮಹಿಳೆ ಅನ್ನಿಸಿಕೊಳ್ಳುತ್ತಾಳೆ. ಅಮ್ಮಾ… ಎಂಬ ಕರೆಯಲ್ಲಿ ಅದೆಂತಹ ಮಾಯೆ, ಮಮತೆ ತುಂಬಿರುತ್ತದೋ. ಒಂಥರಾ ಜಾದುಗಾರ್ತಿ ಅಮ್ಮ. ಅಯ್ಯೋ ಅಮ್ಮ.. ಅಂದ್ರೆ ಅರ್ಧ ನೋವು ಮಯಾ. ಎಂತಹ ವೇದನೆ ನೋವು ಬೇಸರದಲ್ಲಿದ್ದಾಗಲೂ ಅಮ್ಮನ ಒಲವು ಪ್ರೀತಿ ತುಂಬಿದ ಎರಡು ಮಾತುಗಳ ಎಲ್ಲಾ ನೋವುಗಳನ್ನು ನಿವಾರಿಸುತ್ತದೆ. ಕಣ್ಣಿಗೆ ಕಾಣುವ ದೇವರು ಅಮ್ಮ ದೇವರು ಅಮ್ಮ ರಹಸ್ಯವನ್ನು ಅಮ್ಮನೊಂದಿಗೆ ಹಂಚಿಕೊಳ್ಳಿ ಎನ್ನುವ ಮಾತಿದೆ. ಅಮ್ಮನನ್ನು ನಂಬಿ ಕೆಟ್ಟವರಿಲ್ಲ. ಅಮ್ಮ ಮಾತಾಡಲು ಕಲಿಸುತ್ತಾಳೆ. ಆದರೆ ವಿಪರ್ಯಾಸ ನೋಡಿ… ಅದೇ ಅಮ್ಮನ ಬಾಯಿ ಮುಚ್ಚಿಸುವ, ಮಾತನಾಡಲು ಬಿಡದ ಮಕ್ಕಳಿದ್ದಾರೆ. ದೀಪದ ಬುಡ ಯಾವಾಗಲೂ ಕ್ತತಲು ಎಂಬ ಮಾತಿದೆ ರಾಮಕೃಷ್ಣ ಪರಮಹಂಸರ ಮಾತಿನಂತೆ ಹಣತೆ ತನಗಾಗಿ ಉರಿಯುವುದಿಲ್ಲ. ಜಗತ್ತಿಗೆ ಬೆಳಕು ನೀಡಲು ತನ್ನನ್ನು ತಾನು ಸುಟ್ಟುಕೊಳ್ಳುತ್ತದೆ ದೀಪದ ಸ್ಥಿತಿಯ ಅಮ್ಮನ ಸ್ಥಿತಿಯಾಗಿರುತ್ತದೆ.
ತಾಳ್ಮೆ, ಸಹನೆಯಲ್ಲಿ ಎಲ್ಲರನ್ನು ಮೀರಿಸುವ ಮಾತೃ ಹೃದಯ ಮನಸಾರೆ ಮಕ್ಕಳ ಏಳಿಗೆಗೆ ಒದ್ದಾಡುತ್ತಿರುತ್ತದೆ. ಆದರೆ ಅಮ್ಮನ ತ್ಯಾಗ, ನಲ್ಮೆ, ಪ್ರೀತಿ, ಮಮತೆ, ಕರುಣೆಯ ಕಥೆ ಅರ್ಥವಾಗುವುದು ನಾನು ತಾಯಿಯಾಗಿ ಆ ಸ್ಥಾನದಲ್ಲಿ ನಿಂತು ಅನುಭವಿಸಿದಾಗ ಅರಿವಿಗೆ ಬರುತ್ತದೆ. ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಅಮ್ಮ ಅಂದರೆ ಪ್ರೀತಿ, ಗೌರವವಿತ್ತು. ಆದರೆ ಅಮ್ಮ ಎಂದರೆ ಏನು ಎಂಬುದರ ಅರಿವಾಗಿದ್ದು, ನನ್ನ ೨೩ನೇ ವಯಸ್ಸಿನಲ್ಲಿ ನಾನು ಅಮ್ಮನಾದಾಗ. ಯಾವ ಕಾರಣಕ್ಕೂ ನಿದ್ದೆ ಕೆಡಿಸಿಕೊಳ್ಳದ ನನಗೆ ರಾತ್ರಿ ಜಾಗರಣೆಗೆ ಅವಕಾಶ ನೀಡಿದ ನನ್ನ ಮಗಳು, ಎಲ್ಲದಕ್ಕೂ ಹೇಸಿಗೆ ಪಡುವ ನನಗೆ ನನ್ನ ಮೈ ಮೇಲೆ ಮಗಳು ಎಲ್ಲವನ್ನು ಮಾಡುತ್ತಿದ್ದಾಗ ಮೊದಲ ಬಾರಿಗೆ ಅಮ್ಮ ಅಂದರೆ ಬ್ರಹ್ಮಾಂಡ ಎನ್ನುವ ಅರಿವು ಮೂಡಿತು. ಅದಕ್ಕಾಗಿಯೇ ನನ್ನ ಮಗಳಿಗೆ ಸಂಸ್ಕೃತಿ ಎಂದು ಹೆಸರು ಇಟ್ಟಿದ್ದೆ.
ಹೆಣ್ಣು ಮಗಳೊಬ್ಬಳು ಅಮ್ಮನ ಸ್ಥಾನ ತುಂಬಿದಾಗ ಪ್ರಬುದ್ಧ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಾಳೆ. ಅದ್ಕಕಾಗಿಯೇ ಏನೋ ಜನನಿ ತಾನೆ ಮೊದಲ ಗುರುವು ಎನ್ನುವ ನಾಣ್ಣುಡಿ. ಅಮ್ಮ ನಿಶ್ಚಿತ ಅಪ್ಪ ಊಹಾತ್ಮಕ ಅನ್ನುವವರೆಗೆ ಅಮ್ಮನ ಗಟ್ಟಿಸ್ಥಾನ ಅವಳ ತಾಯ್ತನದ ಅಸ್ಥಿತ್ವದ ಮಹತ್ವ ಹಾಗೂ ಪ್ರಾಧಾನ್ಯ. ಅಮ್ಮ ಎನ್ನುವ ಶಬ್ದ ಎದೆಯೊಳಗೆ ಮಮತೆಯ ಸೆಲೆ ಚುಮುಕಿಸುತ್ತದೆ. ನನ್ನ ಮೇಲೆ ಪ್ರಭಾವ ಬೀರಿದವರ ಸಾಲಿನ ಮೊದಲಿಗರು ನನ್ನ ಅಮ್ಮ. ಅಕ್ಕಯ್ಯ ಅವರ ಹೆಸರು. ಅಕ್ಕನು ಅವರೇ ಅಯ್ಯನು ಅವರೇ. ಬಾಲ್ಯದಿಂದ ಇಂದಿನವರೆಗಿನ ನನ್ನೆಲ್ಲಾ ಒಳ್ಳೆತನಕ್ಕೆ ಅಮ್ಮನೇ ಹೊಣೆ. ಅಮ್ಮ ಕೊಡುತ್ತಿದ್ದ ಪೆಟ್ಟಿನ ರುಚಿ ಇಂದಿಗೂ ಇದೆ. ಅಮ್ಮ ಕಲಿಸಿದ ಜೀವನೋತ್ಸಾಹದ ಪಾಠ ಯಾವ ವಿಶ್ವವಿದ್ಯಾನಿಲಯ ಅಥವಾ ಯಾವುದೇ ತರಬೇತಿ ಕೇಂದ್ರದಲ್ಲೂ ಸಿಗಲಾರದು. ಅಮ್ಮನಿಗೆ ಅಮ್ಮನೇ ಸಾಟಿ. ಎಲ್ಲೋ ಕೇಳಿದ ಒಂದು ಸಾಲು ನೆನಪಾಗುತ್ತಿದೆ. ಅಮ್ಮ.., ಅಮ್ಮ… ಅಮ್ಮನೇ ಬೇರೆ ಎಲ್ಲಾ ಸುಮ್ಮನೆ.


ಅಮ್ಮನಿಗೆ ನೋವನ್ನು ಮೀರಿಸುವ ಶಕ್ತಿ ಇದೆ. ಮಕ್ಕಳಿಗಾಗಿ ಬದುಕನ್ನು ಮುಡಿಪಾಗಿಡುವ ತಾಯಿ ಹೃದಯದ ತ್ಯಾಗ ಪರಿಶ್ರಮಕ್ಕೆ ಸಾಟಿ ಇಲ್ಲ. ಕರುಳ ಬಳ್ಳಿಯ ಸಂಬ0ಧವದು. ಹುಟ್ಟಿದ ಮರುಕ್ಷಣವೇ ಕುರುಳ ಬಳ್ಳಿ ಕತ್ತರಿಸಲ್ಪಟ್ಟರು. ಭಾವನಾತ್ಮಕವಾಗಿ ಅಪ್ಪಿಕೊಂಡ ಮಧುರ ಬಂಧ. ಬಿಡಿಸಲಾರದ ಸುಂದರ ಕಗ್ಗಂಟು. ಅಮ್ಮಾ ಎಂಬ ಸುಮಧರ ನುಡಿ ಎಲ್ಲರ ಬಾಳಿನಲ್ಲೂ ಕಂಪನ್ನು ತಂಪನ್ನು ನೀಡಿರುತ್ತದೆ. ಬಾಲ್ಯದಲ್ಲಿ ನಾವು ಮಾಡುತ್ತಿದ್ದ ತಂಟೆಗಳಿಗೆಲ್ಲಾ ಅಪ್ಪಯ್ಯ ಬರಲಿ, ಅಪ್ಪಯ್ಯನಿಗೆ ಹೇಳ್ತಿನಿ ಎಂದು ಗದರಿಸುತ್ತಿದ್ದ ಅಮ್ಮನ ವಿಶ್ವರೂಪ ದರ್ಶನ ಇಂದಿಗೂ ನೆನಪಿದೆ. ಅಬ್ಬಾ..! ಅಮ್ಮನ ಸಲಹೆಗಳು, ನಿರ್ದೇಶನಾತ್ಮಕ ನಿಲುವು, ಅನುಸರಣಾತ್ಮಕ ಬದುಕು ಅಮ್ಮನ ಬಗ್ಗೆ ನಮ್ಮ ಮನಸ್ಸಿನಲ್ಲಿ ಹರಿವ ಭಾವತರಂಗ ಮೈಮನ ವ್ಯಾಪಿಸಿಕೊಳ್ಳ್ಳುತ್ತದೆ.
ಜೀವನದ ಉದ್ದಕ್ಕೂ ನಮ್ಮೊಂದಿಗಿದ್ದು ಸಾಕಿ ಸಲುಹಿದ ಅಮ್ಮನಿಗೆ ಅನುದಿನವೂ ಅರ್ಪಣೆ, ಸಮರ್ಪಣೆ ಹೆಚ್ಚಿನೆಲ್ಲಾ ದಿನಾಚರಣೆಯನ್ನು ವಿಜೃಂಭಣೆಯಿ0ದ ಆಚರಿಸುವ ನಾವು ಅಮ್ಮಂದಿರ ದಿನದ ಕಡೆ ಗಮನ ನೀಡದೆ ಇರುವುದು ವಿಪರ್ಯಾಸ. ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ದೇಶ ವಿದೇಶಗಳಲ್ಲಿ ಆಚರಿಸಲಾಗುತ್ತದೆ. ಚೈತನ್ಯದಾಯಕ ಮಕ್ಕಳ ಬಾಲ್ಯದಲ್ಲಿ ಆಸರೆಯಾಗಿ ಮಕ್ಕಳ ಬಾಳು ಬಂಗಾರವಾಗಲು ಹಗಲು ಇರುಳು ಶ್ರಮಿಸುವ ಅಮ್ಮ ನೆಮ್ಮದಿಯ ತಾಣ ಸುಖದ ಸುಪತ್ತಿಗೆ, ತ್ಯಾಗದ ಇನ್ನೊಂದು ರೂಪವೇ ಅಮ್ಮ. ಮಕ್ಕಳ ಬಾಲ್ಯದ ನೆನಪಿನಂಗಳದಲ್ಲಿ ಅಮ್ಮನ ರಕ್ಷಣೆಯ ಕೋಟೆ ಪ್ರೀತಿ ವಾತ್ಸಲ್ಯದ ಸಿಂಚ0ನ.
ಆಗಸ್ಟ್ ೨೦ ಮಾತೃದಿನ. ಪ್ರತಿಯೊಂದು ಮಗುವಿನಲ್ಲೂ ಹುದುಗಿರುವ ಪ್ರತಿಭೆಯನ್ನು ಸಮರ್ಪಕವಾಗಿ ಗುರುತಿಸಿ ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡುವವಳು ಅಮ್ಮನೇ. ಯಾವುದೇ ಪರಿಸ್ಥಿತಿಯಲ್ಲೂ ಮಾನಸಿಕವಾಗಿ ಸೀಮಿತ ಕಳೆದುಕೊಳ್ಳಲು ಅಮ್ಮ ಬಿಡುವುದಿಲ್ಲ. ಅಮ್ಮನ ಪ್ರೀತಿಯಲ್ಲಿ ಸಿಗುವಷ್ಟು ಒಲವು, ಆಸರೆ ಬೇರಾವ ಸಂಬ0ಧಗಳಲ್ಲೂ ಸಿಗುವುದಿಲ್ಲ. ಅಮ್ಮ ಅಮೃತಧಾರೆ, ಕಣ್ಣಿಗೆ ಕಾಣುವ ದೇವರು, ತಾಯ್ತನಕ್ಕೆ ಇರುವ ಶಕ್ತಿಯೇ ಅಚ್ಚರಿ ಮೂಡಿಸುವಂಥದ್ದು ಅಮ್ಮನ ಅಂತಃಕರಣದ ಸೆಲೆಯೊಂದು ಮಕ್ಕಳು ಎಲ್ಲೇ ಇದ್ದರೂ ಮಿಡಿಯುತ್ತಿರುತ್ತದೆ.
ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ಅಥವಾ ಅಮ್ಮಂದಿರ ದಿನವಾಗಿ ದೇಶ ವಿದೇಶಗಳಲ್ಲೂ ಆಚರಿಸಲಾಗುತ್ತದೆ. ತನ್ನ ಜೀವನವನ್ನೆಲ್ಲ ಮಕ್ಕಳಿಗಾಗಿ ಧಾರೆ ಎರೆದ ಅಮ್ಮನಿಗೆ ಕೇವಲ ಒಂದೇ ಒಂದು ದಿನವೇ? ಹಾಗಲ್ಲ, ಜೀವನದ ಉದ್ದಕ್ಕೂ ನಿಮ್ಮೊಂದಿಗಿದ್ದು ಸಾಕಿ ಸಲುಹಿದ ಅಮ್ಮನಿಗೆ ಅನುದಿನವೂ ಅರ್ಪಣೆ, ಸಮರ್ಪಣೆ, ಹೆಚ್ಚಿನ ಎಲ್ಲ ದಿನಾಚರಣೆಯನ್ನು ವಿಜೃಂಭಣೆಯಿ0ದ ಆಚರಿಸುವ ನಾವು ಅಮ್ಮಂದಿರ ದಿನದ ಕಡೆ ಗಮನ ನೀಡದೆ ಇರುವುದೊಂದೆ ವಿಪರ್ಯಾಸ.
ತಪ್ಪು ಮಾಡದವರು ಯಾರು ಇಲ್ಲ. ಮಾಡಿದ ತಪ್ಪನ್ನು ಪುನಃ ಮಾಡದಂತೆ ಮಾನವತ್ವದ ಮಾರ್ಗದಲ್ಲಿ ಮುನ್ನಡೆಸುವವಳೇ ಅಮ್ಮ. ಮಕ್ಕಳು ಸುಖವಾಗಿರಲೆಂದು ಹಾರೈಸುವ ಮನಸ್ಸು ಸದಾ ಮಕ್ಕಳ ಶ್ರೇಯಸ್ಸನ್ನೇ ಬಯಸುವುದು ಅಮ್ಮನಿಂದಷ್ಟೇ ಸಾಧ್ಯ. ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಜನರು ಧನ್ಯರು. ಎಂದು ಸಾರುತ್ತದೆ ಕಾವ್ಯಗಳು. ಈ ಮಾತಿನಲ್ಲಿ ಸತ್ಯಾಂಶವಿದೆ. ಮಕ್ಕಳ ಗುಣ ಸ್ವಭಾವ ನಡವಳಿಕೆ ಎಲ್ಲದರಲ್ಲೂ ತಾಯಿಯ ಪಾತ್ರ ಬಲು ದೊಡ್ಡದು. ಅದಕ್ಕಾಗಿಯೇ ಏನೋ ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಗಾದೆ ಮಾತು ಹಳ್ಳಿ ಹಳ್ಳಿಗಳಲ್ಲಿ ಪ್ರಚಲಿತ.
ಮಕ್ಕಳನ್ನು ದೈಹಿಕವಾಗಿ ಬಲಿಷ್ಟಗೊಳಿಸಿ ಬುದ್ದಿಯಲ್ಲಿ ಚುಕಾಗಿಸಿ ಮಕ್ಕಳ ಪ್ರಗತಿಯನ್ನು ಉನ್ನತಗೊಳಿಸಿ ಕುಟುಂಬ ಸಮಾಜ ದೇಶಕ್ಕೆ ಉಪಯುಕ್ತ ವ್ಯಕ್ತಿಯನ್ನಾಗಿಸುವಲ್ಲಿ ಅತೀ ದೊಡ್ಡ ಜವಾಬ್ದಾರಿ ಹೊರುವ ತಾಯಿಯನ್ನು ಪೃಥ್ವಿ ಅಥವಾ ಭೂಮಿಗೆ ಹೋಲಿಸುತ್ತಾರೆ. ತಾಳ್ಮೆ, ಸಹನೆಯಲ್ಲಿಯೂ ಎಲ್ಲರನ್ನೂ ಮೀರಿಸುವ ಮಾತೃ ಹೃದಯ ಮನಸಾರೆ ಮಕ್ಕಳ ಏಳಿಗೆಗೆ ಒದ್ದಾಡುತ್ತಿರುತ್ತದೆ. ಆದರೆ, ಅಮ್ಮನ ತ್ಯಾಗ, ನಲ್ಮೆ ಪ್ರೀತಿ ಮಮತೆ, ಕರುಣೆಯ ಕತೆ ಅರ್ಥವಾಗುವುದು ನಾವು ತಾಯಿಗೆ ಆ ಸ್ಥಾನದಲ್ಲಿ ನಿಂತು ಅನುಭವಿಸಿದಾಗ ಮಾತ್ರಾ ಅರಿವಿಗೆ ಬರುತ್ತದೆ. ತನ್ನ ಜೀವನ್ನು ಮಕ್ಕಳಿಗಾಗಿಯೇ ಮೀಸಲಿಡುವ ಅಮ್ಮನಿಗೂ ಒಂದು ಮನಸ್ಸಿದೆ ಎಂದು ಮಕ್ಕಳು ಯೋಚಿಸುವುದಿಲ್ಲ. ಅಮ್ಮನನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಎಲ್ಲ ಮಕ್ಕಳಿಗೂ ಇದೆ ಆದರೂ, ಮಾತೃದಿನದ ಬದಲಾಗಿ ಇಂದಿನ ಮಕ್ಕಳು ಫ್ರೆಂಡ್ ಶಿಪ್ ಡೇ, ವ್ಯಾಲೆಂಟೈನ್ ಡೇಯ ಆಚರಣೆಯಲ್ಲಿ ತೊಡಗಿರುವುದು ಆಧುನಿತೆಯ ಗುಂಗಿನಲ್ಲಿ ತನ್ನ ತನವನ್ನು ಮರೆತ ಮಕ್ಕಳ ಸ್ವಭಾವವನ್ನು ಬದಲಾಗಿಸಲಾರದ ಅಮ್ಮಂದಿರು ನಿಜವಾಗಿಯೂ ಭಾಗ್ಯಹೀನರು. ಕೂಡಿದ ಸಂಸಾರದಲ್ಲಿ ಬಾಳುವುದು ನಮ್ಮ ದೇಶದ ಭವ್ಯ ಪರಂಪರೆಯ ಹೆಮ್ಮೆಯ ಸಂಸ್ಕೃತಿ ಆದರೆ, ನಾನು ನನ್ನದು ಎನ್ನು ಆಹಂನಲ್ಲಿ ನಾವು ನಮ್ಮವರು ಎಂಬುದನ್ನು ಮರೆಯುತ್ತಿರುವುದೇ ಈ ಎಲ್ಲಾ ಅವನತಿಗೆ ಕಾರಣ ಪ್ರಪಂಚದ ಎಲ್ಲಾ ಮನೆಯಲ್ಲಿ ಅಮ್ಮನ ಪಾತ್ರ ತುಂಬಾ ದೊಡ್ಡದು. ಅಮ್ಮನಿಲ್ಲದ ಮನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಮ್ಮ ಮಾಡಿದ ಅಡುಗೆಯ ರುಚಿ, ಹಪ್ಪಳ, ಉಪ್ಪಿನಕಾಯಿ ರುಚಿ ಬಲ್ಲವರೇ ಬಲ್ಲರು. ಅಮ್ಮನ ಬೆಲೆಮಕ್ಕಳಿಗೆ ಅರಿವಾಗುವುದು ಅಮ್ಮನ ಗೈರು ಹಾಜರಿಯಲ್ಲೇ ಇತ್ತೀಚೆಗೆ ಅಮ್ಮ ತೀರಿಕೊಂಡ ನನ್ನ ಗೆಳತಿಯೊಬ್ಬರು ಊರಿಗೆ ಹೋದರೆ ನಾವೇ ಮನೆ ಬಾಗಿಲು ತೆಗೆದು ಅಡುಗೆ ಮಾಡಿ ಉಣ್ಣುವ ಪರಿಸ್ಥಿತಿ, ಅಮ್ಮ ಇರುವಾಗ ಎಷ್ಟು ಒಳ್ಳೆದಿತ್ತು ಎಂದು ಹಲುಬುತ್ತಿದ್ದರು. ಅಮ್ಮ ಪ್ರೀತಿಗೆ ಯಾವುದೂ ಸರಿಸಾಟಿ ಇಲ್ಲ.
ಅಮ್ಮ ಎಂಬ ಪದಕ್ಕೆ ಅರ್ಥ ತುಂಬಿಕೊಡುವಳು ಹೆಣ್ಣು. ಮಕ್ಕಳು ಕೂಡ ಅಮ್ಮ ಎನ್ನುವುದು ಕೇವಲ ಶಬ್ದ ಅಲ್ಲ ಎನ್ನುವ ಅರಿವು ಮೂಡಿಸುತ್ತಿದ್ದರೆ ಮಕ್ಕಳು ಬೆಳೆದಂತೆ ಇದ್ರೂ ಉದ್ಯೋಗ ಅಂತ ಬದುಕು ವಿಸ್ತರಿಸುತ್ತಾ ಹೋಗಿ ಮಕ್ಕಳು ನನ್ನ ಮಡಿಲಲ್ಲೇ ಬೆಳೆಯಲಿ ಎಂದು ಬಯಸಿದರೂ ಸಾಧ್ಯವಾಗದಿರುವಾಗ ತಾಯಿ ಹೃದಯ ಬಯಸುವುದಿಷ್ಟೆ ಎಲ್ಲಾದರೂ ಸುಖವಾಗಿರು ಎಂದು. ಅಮ್ಮ ಎಂಬ ಎರಡಕ್ಷರ ನಮ್ಮೊಳಗೆ ಹೊಸಚೇತನವನ್ನು ತುಂಬುತ್ತಾರೆ. ಅಮ್ಮ ಅಂದರೆ ಏನೋ ಹುರುಪು. ನೋವನ್ನ ಮೌನವಾಗಿ ಸಹಿಸುವ ಆಕೆಯ ತಾಳ್ಮೆ ಅಚ್ಚರಿ ಮೂಡಿಸುತ್ತದೆ. ಗರ್ಭದೊಳಗೆ ಭ್ರೂಣ ಬೆಳೆಯುವಾಗಲೇ ಅದರೊಂದಿಗೆ ಅವಿನಾಭವ ಅನುಬಂಧ ಬೆಸೆಯುವಾಕೆ. ಸೀಮಂತ ಸಂಸ್ಕಾರದ ಸಂಭ್ರಮದಲ್ಲೇ ಮಗುವನ್ನು ಗರ್ಭದೊಂದಿಗೆ ಕೂರಿಸಿಕೊಂಡು ಸಹಭಾಗಿ ಆದ ಮೊದಲ ಕರುಳ ಬಳ್ಳಿಯ ನೆನಪು ಮೆಲುಕು ಹಾಕುತ್ತಾಳೆ. ಅಮ್ಮನಾಗುವುದು ಎಂದರೆ ಮರುಹುಟ್ಟು ಆದರೂ ಆ ಪ್ರಕ್ರಿಯೆಯೇ ಅದ್ಭುತವಾದುದ್ದು. ಕಾಲ ಎಷ್ಟೇ ಮುಂದುವರಿದರೂ ಹೂವೊಂದು ಬೇಕು ಲತೆಗೆ ಮಗುವೊಂದು ಇರಬೇಕು ಹೆಣ್ಣೆಗೆ ಎಂಬ ಮಾತು ನೆನಪಾಗದೆ ಇರದು.

Leave a Reply

Your email address will not be published. Required fields are marked *