News (ಸುದ್ದಿ)

ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆಗಳು ಕೊರೋನಾದಿಂದ ಸರಳವಾಗಿ ನಡೆಯುತ್ತಿವೆ – ಶ್ರೀ ಗುರುಶಾಂತ ಸ್ವಾಮೀಜಿ: heggaddesamachar

Spread the love

ಕಳೆದ ತಿಂಗಳು ನಡೆಯಬೇಕಿದ್ದ ಎರಡು ಜೋಡಿಗಳ ಮದುವೆ ಕೊರೊನಾ ಭೀತಿಯಿಂದಾಗಿ ಮುಂದೂಡಲ್ಪಟ್ಟಿತ್ತು.ಇಂದು ಬಿ. ವೈ. ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದವರು ಆ ಎರಡು ಜೋಡಿಗಳಿಗೆ ಇಂದು ಸಾಮಾಜಿಕ ಅಂತರ ಕಾಯ್ದುಕೊಂಡು ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಮೈಸೂರಿನ ಕುವೆಂಪುನಗರದ ಮರಳು ಸಿದ್ದೇಶ್ವರ ದೇವಾಲಯದಲ್ಲಿ ಮೈಮುಲ್ ನಿರ್ದೇಶಕ ಎಸ್.ಸಿ.ಆಶೋಕ್ ನೇತೃತ್ವದಲ್ಲಿ ಕುದೇರು ಮಠದ ಪೀಠಾಧಿಪತಿ ಶ್ರೀ ಗುರುಶಾಂತ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ
ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಂದೆ ತಾಯಿಯನ್ನು ಕಳೆದುಕೊಂಡು ಅಕ್ಕ ಭಾವನ ಮನೆಯಲ್ಲಿ ಆಶ್ರಯ ಪಡೆದಿದ್ದ ಹಾಸನ ಜಿಲ್ಲೆ ಬೇಲೂರು ನಿವಾಸಿ ಪ್ರಮೀಳ ಮತ್ತು ಮೈಸೂರಿನ ಕೆಸರೆ ನಿವಾಸಿ ಕೆ. ಮಂಜುನಾಥ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಡಾಂಬರ್ ಹಾಕುವ ಕೆಲಸದ ಮೇಲೆ ಬೇಲೂರಿಗೆ ಹೋಗಿದ್ದ ಮಂಜುನಾಥ್ ಗೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರ ಮದುವೆ ಕಳೆದ ತಿಂಗಳು ನೆರವೇರಬೇಕಾಗಿತ್ತು. ಆದರೆ ಲಾಕ್ ಡೌನ್ ಪರಿಣಾಮ ಮದುವೆ ಮಾಡಲು ಸಾಧ್ಯವಾಗಿರಲಿಲ್ಲ.
ಆದರೆ ಇಂದು ಇವರಿಬ್ಬರೂ ಸರಳವಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ಇನ್ನೂ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಮಲೆಯೂರು ಗ್ರಾಮದ ಎನ್. ಸುನಿಲ್ ಮತ್ತು ಮೈಸೂರು ತಾಲ್ಲೂಕು ಹಡಜನ ಗ್ರಾಮದ ತಂದೆ ತಾಯಿ ಕಳೆದುಕೊಂಡಿರುವ ವಿಜಯರ ಮದುವೆ ಸಹ ಕಳೆದ ತಿಂಗಳು ನಿಗಧಿಯಾಗಿತ್ತಾದರೂ ಕೊರೊನಾ ಭೀತಿಯಿಂದಾಗಿ ರದ್ದಾಗಿತ್ತು. ಇಂದು ಸರಳವಾಗಿ ಮದುವೆಯಾದರು.

ಇದೇ ಸಂದರ್ಭ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾದ ಎಲ್ . ಆರ್ ಮಹದೇವಸ್ವಾಮಿ ಹಾಗು ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮೀದೇವಿ, ಶ್ಯಾಮಲಾ ಬೇಕರಿ ಮಾಲೀಕರಾದ ಆನಂದ್ ಯುವ ಮುಖಂಡರಾದ ವಿಕ್ರಮ ಅಯ್ಯಂಗಾರ್. ವಕೀಲರಾದ ನಾಗೇಂದ್ರ .ಪ್ರಸನ್ನ . ನಿಖಿಲ್ .ಜಸ್ವಂತ್. ಅನಿಲ್ .ಸತೀಶ್ ಭಟ್ಟರು. ಅರಸೀಕೆರೆ ಉಮೇಶ್. ಪಂಚಾಕ್ಷರಿ. ಪ್ರತಾಪ್. ಅರಸು .ನಂದೀಶ್ .ಅಶೋಕ್ ಕಾರ್ಯಪ್ಪ . ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಿ ವೈ ವಿಜಯೇಂದ್ರ ಬಳಗ ವಧುವಿಗೆ ತಾಳಿ,ಸೀರೆ,ಕಾಲು ಉಂಗುರ,ವರನಿಗೆ ಶರ್ಟ್, ಪಂಚೆ,ಶಲ್ಯ,ಪೇಟೆವನ್ನು ಉಡುಗೊರೆಯಾಗಿ ನೀಡುವುದರ ಜೊತೆಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.

– ನಂದಿನಿ
heggaddesamachar

Leave a Reply

Your email address will not be published. Required fields are marked *