News (ಸುದ್ದಿ)

ಅಂಬರೀಶ್ 68ನೇ ವರ್ಷದ ಹುಟ್ಟುಹಬ್ಬ-ಅಭಿಮಾನಿ ಬಳಗದ ಸಂಭ್ರಮಾಚರಣೆ: heggaddesamachar

Spread the love

ಅಪೂರ್ವ ಸ್ನೇಹ ಬಳಗ ಹಾಗೂ ಅಂಬರೀಶ್ ಅಭಿಮಾನಿ ಬಳಗದ ವತಿಯಿಂದ ಚಾಮುಂಡಿ ಪುರಂ ನಲ್ಲಿ ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸುವ ಮೂಲಕ ರೆಬೆಲ್ ಸ್ಟಾರ್ ಅಂಬರೀಶ್ ರವರ 68ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.


ಸಿಹಿ ವಿತರಿಸಿ ನಂತರ ಮಾತನಾಡಿದ ಅಂಬರೀಷ್ ಅಭಿಮಾನಿ ಬಳಗದ ಅಧ್ಯಕ್ಷರಾದ ನಟರಾಜ್ ಅಂಬರೀಷ್ ಅವರು ಮಂಡ್ಯದ ಮೇಲಿನ ಪ್ರೀತಿಯನ್ನು ಮೈಸೂರಿನ ಮೇಲೂ ಇರಿಸಿಕೊಂಡಿದ್ದರು. ಮೈಸೂರಿನಲ್ಲೇ ಆಡಿ ಬೆಳೆದ ಅವರು ಮೈಸೂರನ್ನು ತಮ್ಮ ಕ್ಷೇತ್ರದಷ್ಟೇ ಸಮಾನವಾಗಿ ಗೌರವಿಸುತ್ತಿದ್ದರು. ಅವರು ವಸತಿ ಸಚಿವರಾಗಿದ್ದಾಗ, ಕೇಳಿದಾಕ್ಷಣವೇ ಪ್ರತಿ ತಾಲ್ಲೂಕಿನ 200 ಮನೆಗಳನ್ನು ಬಡವರಿಗಾಗಿ ನೀಡಿದ್ದರು
ಡಾ.ರಾಜ್‌ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ನಿಧನದ ಬಳಿಕ ನಾಯಕತ್ವ ವಹಿಸಿದ್ದರು. ಚಿತ್ರ ರಂಗದ ಸಮಸ್ಯೆ ಜತೆಗೆ, ಕನ್ನಡ, ಕರ್ನಾಟಕದ ಸಮಸ್ಯೆಗಳಿಗೂ ಅವರು ಸ್ಪಂದಿಸುತ್ತಿದ್ದರು ಎಂದರು.


ನಂತರ ಮಾತನಾಡಿದ ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ಅಂಬರೀಷ್ ಅವರ ಮಾತು ವಜ್ರದಷ್ಟೆ ಕಠಿಣವಾದರೂ, ಹೃದಯ ಮಾತ್ರ ಬೆಣ್ಣೆಯಷ್ಟೇ ಮೃದು. ಬಡಜನರ ಬಗೆಗಿದ್ದ ಅವರ ಕಾಳಜಿ ಅವಿಸ್ಮರಣೀಯ’ ‘ಚಿತ್ರ ಹಾಗೂ ರಾಜಕೀಯ ರಂಗದಲ್ಲಿ ಅವರದು ವೈವಿಧ್ಯಮಯ ವ್ಯಕ್ತಿತ್ವ. ಮೈಸೂರು – ಬೆಂಗಳೂರು ಶತಾಬ್ಧಿ, ಮೈಸೂರು – ಚೆನೈ ಶತಾಬ್ಧಿ ರೈಲುಗಳನ್ನು ಮೈಸೂರಿಗೆ ಕೊಡುಗೆಯಾಗಿ ನೀಡಿದ ಕಾರಣದಿಂದಲೇ ಮೈಸೂರು ಬೆಳವಣಿಗೆ ಕಂಡಿತು. ಮೈಸೂರು ಭಾಗದಲ್ಲಿ ಅನೇಕ ಕಾರ್ಖಾನೆಗಳು ಆರಂಭವಾಗಲು, ಅವರೇ ಕಾರಣ.

ಅವರ ನಿಧನ ಸಮಾಜದ ಎಲ್ಲರಿಗೂ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜ್ ಬಸಪ್ಪ ಅಂಬರೀಶ್ ಕನ್ನಡನಾಡಿ‌ನ ಶಕ್ತಿಯಾಗಿದ್ದರು. ಅವರೊಬ್ಬ ಹೃದಯ ಶ್ರೀಮಂತಿಕೆಯ ವ್ಯಕ್ತಿ. ಕನ್ನಡ ಚಿತ್ರರಂಗದ ಯಾವುದೇ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಅವರಿಗಿತ್ತು’ ಆಡು ಮುಟ್ಟದ ಸೊಪ್ಪಿಲ್ಲ ಮಾತಿಗೆ ಅನ್ವರ್ಥರಾಗಿದ್ದ ಅವರು, ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ತಮ್ಮ ನೇರ ನುಡಿಯಿಂದ ಎಲ್ಲರ ಹೃದಯದಲ್ಲಿ ನೆಲೆಸಿದ್ದರು ಎಂದಿದ್ದಾರೆ.


ಇದೇ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಅಂಬರೀಶ್ ಅಭಿಮಾನಿ ಬಳಗದ ಅಧ್ಯಕ್ಷರಾದ ಡಿಪೋ ನಾಗರಾಜ್ ,ಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜು ಬಸಪ್ಪ ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂಡಿ ಪಾರ್ಥಸಾರತಿ,ಜಯಶಂಕರ್ ಸ್ವಾಮಿ, ತೀರ್ಥಕುಮಾರ್, ಕಡಕೊಳ ಜಗದೀಶ್,ಹರೀಶ್ ನಾಯ್ಡು , ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *